ಚಂಡೀಗಢ: ಪಂಜಾಬ್‍ನಲ್ಲಿ ಕಾಂಗ್ರೆಸ್ ಸರ್ಕಾರದಲ್ಲಿ ಉಂಟಾದ ದಿಢೀರ್ ನಾಯಕತ್ವ ಬದಲಾವಣೆ ಬಳಿಕ ಇದೀಗ ನೂತನ ಸಿಎಂ ಆಗಿ ಚರಣ್‍ಜಿತ್ ಸಿಂಗ್ ಅವರನ್ನು ಕಾಂಗ್ರೆಸ್ ಹೈಕಮಾಂಡ್ ಘೋಷಿಸಿದೆ. ಇದರ ಬೆನ್ನಲೇ ಅವರ ಮೇಲೆ 2018ರಲ್ಲಿ ದಾಖಲಾಗಿದ್ದ ಮೀಟೂ ಆರೋಪ ಮುನ್ನೆಲೆಗೆ ಬಂದಿದೆ.
Advertisement
ಮಹಿಳಾ ಐಎಎಸ್ ಅಧಿಕಾರಿಯೊಬ್ಬರು ಚರಣ್‍ಜಿತ್ ಸಿಂಗ್ ವಿರುದ್ಧ ಗಂಭೀರ ಆರೋಪ ಮಾಡಿದ್ದರು. ಅದಲ್ಲದೆ ಅಂದಿನ ಸಿಎಂ ಅಮರೀಂದರ್ ಸಿಂಗ್ ಅವರಲ್ಲಿ ದೂರು ಕೂಡ ನೀಡಿದ್ದರು. ಇದೀಗ ಚರಣ್‍ಜಿತ್ ಸಿಂಗ್ ಸಿಎಂ ಎಂದು ಕಾಂಗ್ರೆಸ್ ಹೈಕಮಾಂಡ್ ಘೋಷಿಸುತ್ತಿದ್ದಂತೆ ಅವರ ಮೇಲಿದ್ದ ಮೀಟೂ ಆರೋಪವನ್ನು ಸಾಮಾಜಿಕ ಜಾಲತಾಣದಲ್ಲಿ ಮತ್ತೆ ಹರಿಬಿಡಲಾಗುತ್ತಿದೆ. ಇದನ್ನೂ ಓದಿ: ಹೆತ್ತವರ ವಿರುದ್ಧ ದೂರು ದಾಖಲಿಸಿದ ನಟ
Advertisement
Congress’s CM pick Charanjit Channi faces action in a 3-year-old #MeToo case. He had allegedly sent an inappropriate text to a woman IAS officer in 2018. It was covered up but the case resurfaced when Punjab Women's Commission sent notice.
Well done, Rahul.https://t.co/5OV70lwjWT
— Amit Malviya (@amitmalviya) September 19, 2021
Advertisement
ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ, ‘ವೆಲ್ ಡನ್ ರಾಹುಲ್’ ಎಂದು ಚರಣ್‍ಜಿತ್ ಛನ್ನಿ ಆಯ್ಕೆಗೆ ವ್ಯಂಗ್ಯವಾಡಿದ್ದಾರೆ. ಇದನ್ನೂ ಓದಿ: ಚರಣ್‍ಜಿತ್ ಸಿಂಗ್ ಛನ್ನಿ ಪಂಜಾಬ್‍ನ ನೂತನ ಸಿಎಂ
Advertisement
ಚರಣ್‍ಜಿತ್ ಸಿಂಗ್ ಹಿನ್ನೆಲೆ:
48 ವರ್ಷದ ಚರಣ್‍ಜಿತ್ ಸಿಂಗ್ ದಲಿತಸಮುದಾಯದವರು. ಸಿಖ್ಖರಲ್ಲಿ ಅತ್ಯಂತ ಕೆಳ ವರ್ಗ ಚಮ್ಮಾರ ಸಮುದಾಯಕ್ಕೆ ಸೇರಿದವರು. 2007ರಿಂದ ಸತತವಾಗಿ ಚಾಮ್‍ಕೌರ್ ಸಾಹೀಬ್ ಕ್ಷೇತ್ರದಿಂದ ವಿಧಾನಸಭೆಗೆ ಆರಿಸಿ ಹೋಗಿದ್ದಾರೆ. 2015ರಲ್ಲಿ ವಿಪಕ್ಷ ನಾಯಕರಾಗಿ ಕೆಲಸ ಮಾಡಿದ್ದರು. ಅಮರೀಂದರ್ ಸಿಂಗ್ ಸರ್ಕಾರದಲ್ಲಿ ತಾಂತ್ರಿಕಶಿಕ್ಷಣ ಸಚಿವರಾಗಿದ್ದರು. ಕಾಂಗ್ರೆಸ್ ಹೈಕಮಾಂಡ್ ಅಳೆದುತೂಗಿ ಯುವ ನಾಯಕ ಚರಣ್‍ಜಿತ್ ಸಿಂಗ್ ಛನ್ನಿಗೆ ಮಣೆ ಹಾಕಿದೆ. ಎಲ್ಲಾ ಶಾಸಕರ ಅಭಿಪ್ರಾಯ ಸಂಗ್ರಹಿಸಿದ್ದ ಹೈಕಮಾಂಡ್ ಚರಣ್ ಜಿತ್ ಹೆಸರನ್ನು ಘೋಷಿಸಿತು. ಈ ಬೆನ್ನಲ್ಲೇ ರಾಜ್ಯಪಾಲರನ್ನು ಭೇಟಿ ಮಾಡಿದ ಚರಣ್‍ಜಿತ್ ಸಿಂಗ್, ಸರ್ಕಾರ ರಚನೆಗೆ ಅವಕಾಶ ಕೋರಿದ್ದಾರೆ. ನಾಳೆ 11 ಗಂಟೆಗೆ ನೂತನ ಸರ್ಕಾರ ಅಸ್ತಿತ್ವಕ್ಕೆ ಬರುವ ಸಾಧ್ಯತೆ ಇದೆ.
"We have presented our stance, unanimously supported by party MLAs, before the Governor. Oath taking ceremony to take place at 11 am tomorrow," says Punjab CM-designate Charanjit Singh Channi pic.twitter.com/Ksh9YnGYpm
— ANI (@ANI) September 19, 2021
ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ ಮೂರು ಬಾರಿ ಶಾಸಕರಾಗಿದ್ದ ಸುಖ್‍ಜಿಂದರ್ ಸಿಂಗ್ ರಾಂಧವಾ ನವಜೋತ್ ಸಿಂಗ್ ಸಿಧು ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡ ನಾಯಕರಾಗಿದ್ದ ಕಾರಣ ಕೊನೇ ಕ್ಷಣದವರೆಗೂ ಅವರೇ ಸಿಎಂ ಎಂದು ಸುದ್ದಿ ಹರಿದಾಡಿತ್ತು. ಆದರೆ ಅಂತಿಮ ಕ್ಷಣದಲ್ಲಿ ರಾಂಧಾವಾಗೆ ಶಾಕ್ ನೀಡಿ ಚರಣ್‍ಜಿತ್ ಸಿಂಗ್ ಸಿಎಂ ಎಂದು ಹೈಕಮಾಂಡ್ ಘೋಷಿಸಿದೆ. ಇದನ್ನೂ ಓದಿ: ಬಾಲಕಿ ಕೆನ್ನೆ ಕಚ್ಚಿದ್ದ ಶಿಕ್ಷಕನಿಗೆ ಪೊಲೀಸರ ಮುಂದೆಯೇ ಥಳಿಸಿದ ಸ್ಥಳೀಯರು