ನವದೆಹಲಿ: ತನ್ನ ನೆಚ್ಚಿನ ಯೂಟ್ಯೂಬ್ ಸ್ಟಾರ್ ಭೇಟಿಯಾಗಲು ಪಂಜಾಬ್ನ ಪಟಿಯಾಲದ 13 ವರ್ಷದ ಬಾಲಕ ಬರೋಬ್ಬರಿ 250 ಕಿ.ಮೀ. ಸೈಕಲ್ ತುಳಿದ ಘಟನೆ ನಡೆದಿದೆ.
ದೆಹಲಿಯಲ್ಲಿದ್ದ ಯೂಟ್ಯೂಬ್ನ ʼಟ್ರಿಗರ್ಡ್ ಇನ್ಸಾನ್ʼ (Triggered Insaan) ಚಾನಲ್ ಮೂಲಕ ಜನಪ್ರಿಯತೆ ಗಳಿಸಿರುವ ಯೂಟ್ಯೂಬರ್ ನಿಶ್ಚಯ್ ಮಲ್ಹಾನ್ (Nischay Malhan) ಅವರನ್ನು ಭೇಟಿಯಾಗಲು ಬಾಲಕ ಮೂರು ದಿನಗಳ ಕಾಲ ಸುಮಾರು 250 ಕಿ.ಮೀ. ಸೈಕಲ್ ತುಳಿದಿದ್ದಾನೆ. ಆದರೆ ದುರದೃಷ್ಟವಶಾತ್ ಬಾಲಕ ತನ್ನ ನೆಚ್ಚಿನ ಯೂಟ್ಯೂಬರ್ ಭೇಟಿಯಾಗಲು ಸಾಧ್ಯವಾಗಿಲ್ಲ. ಅಷ್ಟರಲ್ಲಾಗಲೇ ಯೂಟ್ಯೂಬರ್ ದುಬೈಗೆ ಪ್ರಯಾಣ ಬೆಳೆಸಿದ್ದರು. ಇದನ್ನೂ ಓದಿ: ಧಾರ್ಮಿಕ ಮತಾಂತರ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ದೆಹಲಿ ಸಚಿವ ರಾಜೀನಾಮೆ
Advertisement
Advertisement
ಇತ್ತ ಮನೆಯಿಂದ ಮಗ ನಾಪತ್ತೆಯಾಗಿದ್ದಾನೆ ಎಂದು ಬಾಲಕನ ಪೋಷಕರು, ಪೊಲೀಸರಿಗೆ ದೂರು ನೀಡಿದ್ದರು. 8ನೇ ತರಗತಿ ಓದುತ್ತಿರುವ ಬಾಲಕ, ಯೂಟ್ಯೂಬ್ನಲ್ಲಿ ʼಟ್ರಿಗರ್ಡ್ ಇನ್ಸಾನ್ʼ ಚಾನಲ್ ಮೂಲಕ ಸುಮಾರು 1.7 ಕೋಟಿ ಸಬ್ಸ್ಕ್ರೈಬರ್ಸ್ ಹೊಂದಿರುವ ಯೂಟ್ಯೂಬರ್ ಭೇಟಿಯಾಗಲು ಅ.4ರಂದು ಮನೆಯಿಂದ ಹೊರಟಿದ್ದ.
Advertisement
ಬಾಲಕನಿಗಾಗಿ ಪೊಲೀಸರು ಹುಡುಕಾಟ ನಡೆಸಿದರು. ಹಲವಾರು ಸ್ಥಳಗಳ ಸಿಸಿಟಿವಿ ಕ್ಯಾಮೆರಾ ದೃಶ್ಯಗಳು ಬಾಲಕ ಪ್ರಯಾಣಿಸಿರುವುದನ್ನು ತೋರಿಸಿವೆ. ಆದರೆ ಆತ ರಾತ್ರಿ ಎಲ್ಲಿ ಉಳಿದುಕೊಳ್ಳುತ್ತಿದ್ದ ಎಂಬುದು ಮಾತ್ರ ಸ್ಪಷ್ಟವಾಗಿಲ್ಲ. ಇದನ್ನೂ ಓದಿ: BJPಯಿಂದ ಟಿಪ್ಪು ಪರಂಪರೆ ಅಳಿಸಲು ಸಾಧ್ಯವೇ ಇಲ್ಲ: ಓವೈಸಿ
Advertisement
ಯೂಟ್ಯೂಬರ್ ಪಿತಾಂಪುರ ಪ್ರದೇಶದಲ್ಲಿ ವಾಸಿಸುತ್ತಿದ್ದಾರೆ ಎಂದು ದೆಹಲಿಯ ಪೊಲೀಸರು ತಿಳಿದುಕೊಂಡರು. ನಂತರ ಅಲ್ಲಿಗೆ ಭೇಟಿ ನೀಡಿ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಬಾಲಕ ಪತ್ತೆಯಾಗಿದ್ದಾನೆ. ಪೊಲೀಸರು ಮೊದಲು ಬಾಲಕನ ಸೈಕಲ್ ಅನ್ನು ಕಂಡುಹಿಡಿದರು. ನಂತರ ಉದ್ಯಾನವೊಂದರಲ್ಲಿ ಬಾಲಕನನ್ನು ಪತ್ತೆಹಚ್ಚಿದ್ದಾರೆ.