ಧಾರವಾಡ: ಆಮ್ ಆದ್ಮಿ ಪಕ್ಷಕ್ಕೆ ಯಾವ ಸಿದ್ಧಾಂತ, ದಿಕ್ಕಿಲ್ಲ, ಸ್ಪಷ್ಟತೆಯೂ ಇಲ್ಲ ಎಂದು ಉನ್ನತ ಶಿಕ್ಷಣ ಸಚಿವ ಅಶ್ವಥ್ ನಾರಾಯಣ ಹೇಳಿದರು.
Advertisement
ಪಂಚ ರಾಜ್ಯ ಚುನಾವಣೆಯ ಮತ ಏಣಿಕೆಯಲ್ಲಿ ಪಂಜಾಬ್‍ನಲ್ಲಿ ಆಮ್ ಆದ್ಮಿ ಮುನ್ನಡೆ ಸಾಧಿಸಿದ ವಿಚಾರವಾಗಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಆಮ್ ಆದ್ಮಿ ದೆಹಲಿಯಂತಹ ಸಿಟಿಯಲ್ಲಿ ರಾಜಕೀಯ ಮಾಡಿದೆ. ಅದು ಕೂಡಾ ನಮ್ಮ ರಾಜಧಾನಿ ಬೆಂಗಳೂರಿನಂತಹ ಸಿಟಿ ಇದ್ದ ಹಾಗೇ ಎಂದು ಹೇಳಿದರು.
Advertisement
Advertisement
ಉಚಿತ ವಿದ್ಯುತ್, ಶಾಲೆ, ಮೌಲಾ ಕ್ಲಿನ್ ಮಾಡಿದ್ದೇವೆ ಎಂದು ಆಪ್ ನವರು ಹೇಳುತ್ತಾರೆ. ಅದೆಲ್ಲವೂ ನಗರ ಪ್ರದೇಶದಲ್ಲಿ ನಡೆದಿರುವುದು. ಪಂಜಾಬ್‍ದಂತಹ ರಾಜ್ಯದಲ್ಲಿ ಅವರಿಗೆ ಪ್ರಾರಂಭ ಅಷ್ಟೇ. ಸರ್ಕಾರ ಬಂದರೂ ಅದು ಒಂದೇ ಸರ್ಕಾರದಲ್ಲಿ ಕೊನೆಯಾಗುತ್ತದೆ. ಪ್ರಾರಂಭವೇ ಅವರಿಗೆ ಕೊನೆ ಆಗುತ್ತದೆ ಎಂದರು.
Advertisement
ಆಮ್ ಆದ್ಮಿ ಅಂತ ಪಕ್ಷಗಳು ಅಲ್ಲಿ ನೆಲ ಊರಲು ಸಾಧ್ಯವಿಲ್ಲ. ಇಂತಹ ಪಕ್ಷಗಳು ಬರುತ್ತವೆ, ಹೋಗುತ್ತವೆ, ಆ ಪಕ್ಷಕ್ಕೆ ಮಾನ್ಯತೆ ಕೊಡುವ ಅವಶ್ಯಕತೆ ಇಲ್ಲ. ಈ ಪಕ್ಷಕ್ಕೆ ಭವಿಷ್ಯವಿಲ್ಲ, ಯಾವ ಸಿದ್ಧಾಂತ, ದಿಕ್ಕಿಲ್ಲ, ಸ್ಪಷ್ಟತೆಯೂ ಇಲ್ಲ, ಸಣ್ಣ ಮಟ್ಟದಲ್ಲಿ ನಗರದ ಪ್ರದೇಶದಲ್ಲಿ ಕೆಲಸ ಮಾಡಿದೆಯಷ್ಟೇ ಎಂದು ವ್ಯಂಗ್ಯವಾಡಿದರು.