ಭಗವಂತ್ ಮಾನ್ ಸರ್ಕಾರ ಉರುಳಿಸಲು ಬಿಜೆಪಿಯಿಂದ ತಲಾ 25 ಕೋಟಿ ಆಫರ್ – ಆಪ್

Public TV
2 Min Read
BJP AAP

ಚಂಢೀಗಡ: ಪಂಜಾಬ್‌ನಲ್ಲಿ (Panjab) ಭಗವಂತ್ ಮಾನ್ (Bhagwant Mann) ಸರ್ಕಾರ ಉರುಳಿಸಲು ಬಿಜೆಪಿ (BJP) ಆಮ್ ಆದ್ಮಿ ಪಕ್ಷ(AAP)ದ 10 ಮಂದಿ ಶಾಸಕರಿಗೆ ತಲಾ 25 ಕೋಟಿ ಆಫರ್ ನೀಡಿದೆ ಎಂದು ಆಡಳಿತಾರೂಢ ಎಎಪಿ ಆರೋಪಿಸಿದೆ.

ಹಣಕಾಸು ಸಚಿವ ಹರ್ಪಾಲ್ ಸಿಂಗ್ ಚೀಮಾ (Harpal Singh Cheema) ಅವರಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದು, ಬಿಜೆಪಿಯು ರಾಜ್ಯದಲ್ಲಿ `ಆಪರೇಷನ್ ಕಮಲ’ (Operation Kamala) ನಡೆಸಲು ಮುಂದಾಗಿದೆ. ಆ ಪಕ್ಷದ ನಾಯಕರು ನಮ್ಮ ಪಕ್ಷದ ಕೆಲ ಶಾಸಕರನ್ನು (MLAs) ಸಂಪರ್ಕಿಸಿ ಹಣದ ಆಮಿಷ ಒಡ್ಡಿದ್ದಾರೆ. ಜೊತೆಗೆ ಸಚಿವ ಸ್ಥಾನದ ಆಮಿಷವನ್ನೂ ಒಡ್ಡಿದ್ದಾರೆ ಎಂದು ದೂರಿದ್ದಾರೆ.

BhagwantMann

ಬಿಜೆಪಿಯ ಕೇಂದ್ರ ನಾಯಕರ ಸೂಚನೆ ಮೇರೆಗೆ ಆ ಪಕ್ಷದ ಕೆಲ ಮುಖಂಡರು ದೂರವಾಣಿ ಮೂಲಕ ನಮ್ಮ ಪಕ್ಷದ ಶಾಸಕರನ್ನ ಸಂಪರ್ಕಿಸಿದ್ದಾರೆ. ಪಕ್ಷದ ಹಿರಿಯ ನಾಯಕರೊಂದಿಗಿನ ಮಾತುಕತೆಗಾಗಿ ನವದೆಹಲಿಯಲ್ಲಿ (NewDelhi) ಸಭೆ ನಿಗದಿಪಡಿಸುವುದಾಗಿಯೂ ಹೇಳಿದ್ದಾರೆ. ಶಾಸಕರು ತಮ್ಮ ಜೊತೆ ಇನ್ನಷ್ಟು ಶಾಸಕರನ್ನು ಕರೆದುಕೊಂಡು ಹೋದರೆ ಇನ್ನೂ ಹೆಚ್ಚಿನ ಹಣ ಒದಗಿಸುವ ಭರವಸೆಯನ್ನೂ ನೀಡಿದ್ದಾರೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಇನ್ಮುಂದೆ ಟೋಲ್‌ಗಳಲ್ಲಿ ವಾಹನ ನಿಲ್ಲಿಸುವಂತಿಲ್ಲ- ಟೋಲ್ ಸಂಗ್ರಹಕ್ಕೆ ವಿಶೇಷ ತಂತ್ರಜ್ಞಾನ ಅಳವಡಿಕೆಗೆ ಚಿಂತನೆ

aap bjp app

ಈಗಾಗಲೇ ಮಧ್ಯಪ್ರದೇಶ (MadhyaPradesh) ಹಾಗೂ ಇತರೇ ರಾಜ್ಯಗಳಲ್ಲಿ ಅನೇಕ ಶಾಸಕರನ್ನು ಖರೀದಿಸಿರುವ ಬಿಜೆಪಿಗೆ ಪಂಜಾಬ್‌ನಲ್ಲಿ ಅಧಿಕಾರ ಹಿಡಿಯಲು ಕನಿಷ್ಠ 35 ಶಾಸಕರು ಬೇಕಾಗಿದೆ. ಹಾಗಾಗಿ 92 ಶಾಸಕರ ಬಲವನ್ನು ಹೊಂದಿರುವ ಎಎಪಿ ಸರ್ಕಾರದಲ್ಲಿ 55 ಶಾಸಕರನ್ನು ಬಿಜೆಪಿ ತನ್ನತ್ತ ಸೆಳೆಯಲು 1,375 ಕೋಟಿ ಇಟ್ಟುಕೊಂಡಿದೆ. ಇದನ್ನೂ ಓದಿ: ಮೊಟ್ಟೆ ಎಸೆದ್ರೆ ನೀವೇನು ವೀರರಾ ಶೂರರಾ? ಇದಕ್ಕೆಲ್ಲಾ ಹೆದರೋ ಮಕ್ಕಳಲ್ಲ: ಸಿದ್ದು ಸಿಡಿಮಿಡಿ

bjP

ಈ ಹಿಂದೆಯೂ 800 ಕೋಟಿ ಖರ್ಚು ಮಾಡಿ ದೆಹಲಿ ಆಪ್ ಸರ್ಕಾರವನ್ನು ಉರುಳಿಸಲು ಬಿಜೆಪಿ ಪ್ರಯತ್ನಿಸಿತ್ತು. ಆ ಪ್ರಯತ್ನದಲ್ಲಿ ಪಕ್ಷಕ್ಕೆ ಫಲ ಸಿಗಲಿಲ್ಲ. ಹೀಗಾಗಿ ಈಗ ಪಂಜಾಬ್‌ನಲ್ಲಿ ಶಾಸಕರ ಖರೀದಿಗೆ ಮುಂದಾಗಿದೆ. ಒಂದು ವಾರದಿಂದ ನಿರಂತರವಾಗಿ ಈ ನಿಟ್ಟಿನಲ್ಲಿ ಪ್ರಯತ್ನ ಮುಂದುವರಿಸಿದೆ. ಸೂಕ್ತ ಸಮಯದಲ್ಲಿ ಈ ಕುರಿತ ದಾಖಲೆಗಳನ್ನು ಬಹಿರಂಗಪಡಿಸುತ್ತೇವೆ ಎಂದು ಹೇಳಿದ್ದಾರೆ.

ಸದ್ಯ ಎಎಪಿ ಆರೋಪಕ್ಕೆ ಸಂಬಂಧಿಸಿದಂತೆ ಬಿಜೆಪಿ ಯಾವುದೇ ರೀತಿ ಪ್ರತಿಕ್ರಿಯೆ ನೀಡಿಲ್ಲ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *