CinemaDistrictsKarnatakaLatestMain PostMandyaSandalwood

ಪಾಂಡವಪುರದಲ್ಲಿ ಮೂರು ದಿನಗಳ ಕಾಲ ಪುನೀತೋತ್ಸವ

ಮಂಡ್ಯ: ಕನ್ನಡ ರಾಜ್ಯೋತ್ಸವದ (Kannada Rajyotsava)ಪ್ರಯುಕ್ತ ಹಾಗೂ ಪುನೀತ್ ರಾಜ್‍ಕುಮಾರ್ ಸ್ಮರಣಾರ್ಥ ಇದೇ ತಿಂಗಳು ಮೂರು ದಿನಗಳ ಕಾಲ ಮಂಡ್ಯ (Mandya) ಜಿಲ್ಲೆಯ ಪಾಂಡವಪುರ (Pandavapura) ಪಟ್ಟಣದಲ್ಲಿ ಪುನೀತೋತ್ಸವ (Puneethotsava) ಕಾರ್ಯಕ್ರಮವನ್ನು ಆಯೋಜಿಸಲಾದೆ.

ಮಂಡ್ಯ ಜಿಲ್ಲೆಯ ಪಾಂಡವಪುರ ಪಟ್ಟಣದ ಕ್ರೀಡಾಂಗಣದಲ್ಲಿ ನವೆಂಬರ್ 25, 26, 27 ಮೂರು ದಿನಗಳ ಕಾಲ ಮೇಲುಕೋಟೆ (Melkote) ಶಾಸಕ ಪುಟ್ಟರಾಜು ಹಾಗೂ ವಿವಿಧ ಸಂಘ ಸಂಸ್ಥೆಗಳ ನೇತೃತ್ವದಲ್ಲಿ ಪುನೀತೋತ್ಸವ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿದೆ. ಮೂರು ದಿನ ಸಂಜೆ 5.30ರಿಂದ ರಾತ್ರಿ 10 ಗಂಟೆಯವರೆಗೆ ಕಾರ್ಯಕ್ರಮ ನಡೆಯಲಿದೆ. ಇದನ್ನೂ ಓದಿ: ತಿಹಾರ್ ಜೈಲಿನಲ್ಲಿ ಸತ್ಯೇಂದ್ರ ಜೈನ್‌ಗೆ ಮಸಾಜ್, ವಿಐಪಿ ಸೌಕರ್ಯ – ವೀಡಿಯೋ ಬಿಡುಗಡೆ

ಕಾರ್ಯಕ್ರಮಕ್ಕೆ ಶಿವರಾಜ್‍ಕುಮಾರ್ (Shivaraj kumar), ರಾಘವೇಂದ್ರ ರಾಜ್‍ಕುಮಾರ್ (Raghavenadra Rajkumar), ಅಶ್ವಿನಿ ಪುನೀತ್ ರಾಜ್‍ಕುಮಾರ್ (Ashwini Puneeeth Rajkumar) ಸೇರಿದಂತೆ ರಾಜ್ ಕುಟುಂಬಸ್ಥರು ಭಾಗಿಯಾಗಲಿದ್ದಾರೆ. ಇದಲ್ಲದೇ ಸ್ಯಾಂಡಲ್‍ವುಡ್‍ನ ಹಲವು ನಟ-ನಟಿಯರು, ಸಂಗೀತಗಾರು ಕಾರ್ಯಕ್ರಮಕ್ಕೆ ಜನರನ್ನು ರಂಜಿಸಲಿದ್ದಾರೆ. ಮೂರು ದಿನವೂ ಸಹ ವಿಶೇಷ ಹಾಗೂ ವಿಭಿನ್ನ ಕಾರ್ಯಕ್ರಮಗಳನ್ನು ನಡೆಸಲಾಗುತ್ತದೆ.

Live Tv

Leave a Reply

Your email address will not be published. Required fields are marked *

Back to top button