ಪುನೀತ್ ನಟನೆಯ ‘ಅಂಜನಿಪುತ್ರ’ ಮರು ಬಿಡುಗಡೆ

Public TV
1 Min Read
Anjaniputra 1

ಎಂ.ಎನ್.ಕೆ‌ ಮೂವೀಸ್ ಲಾಂಛನದಲ್ಲಿ ಎಂ.ಎನ್ ಕುಮಾರ್ ನಿರ್ಮಿಸಿ, ಎ.ಹರ್ಷ ನಿರ್ದೇಶನದಲ್ಲಿ ಪುನೀತ್ ರಾಜಕುಮಾರ್ (Puneeth Rajkumar) ಅವರು ನಾಯಕರಾಗಿ ನಟಿಸಿದ್ದ ಸೂಪರ್ ಹಿಟ್  ಚಿತ್ರ ‘ ಅಂಜನಿಪುತ್ರ’ (Anjaniputra) ಮೇ 10 ರಂದು ಮರು ಬಿಡುಗಡೆಯಾಗುತ್ತಿದೆ.

Anjaniputra 2

ರಾಜ್ಯಾದ್ಯಂತ ಅಧಿಕ ಸಂಖ್ಯೆಯ ಚಿತ್ರಮಂದಿರಗಳಲ್ಲಿ ಈ ಚಿತ್ರವನ್ನು ಅದ್ದೂರಿಯಾಗಿ ಮರು ಬಿಡುಗಡೆ(ರೀ ರಿಲೀಸ್) (Rerelease) ಮಾಡುತ್ತಿರುವುದಾಗಿ ನಿರ್ಮಾಪಕ‌ ಎಂ ಎನ್ ಕುಮಾರ್ ತಿಳಿಸಿದ್ದಾರೆ. ಈ ಚಿತ್ರದಲ್ಲಿ ಪುನೀತ್ ಅವರಿಗೆ ನಾಯಕಿಯಾಗಿ ರಶ್ಮಿಕಾ ಮಂದಣ್ಣ ನಟಿಸಿದ್ದರು.

 

ರವಿ ಬಸ್ರೂರ್ ಅವರ‌ ಸಂಗೀತ ನಿರ್ದೇಶನದಲ್ಲಿ ಮೂಡಿಬಂದಿದ್ದ ಈ ಚಿತ್ರದ ‘ಬಾರಿ ಖುಷಿ ಮಾರೆ ನಂಗೆ’ ಸೇರಿದಂತೆ ಎಲ್ಲಾ ಹಾಡುಗಳು‌ ಜನಪ್ರಿಯವಾಗಿದೆ. ಬೇಸಿಗೆ ರಜೆಯ ಈ ಸಮಯದಲ್ಲಿ ಸೂಪರ್ ಹಿಟ್ ಅಂಜನಿ ಪುತ್ರ ಚಿತ್ರವನ್ನು ಮತ್ತೊಮ್ಮೆ ತೆರೆಯ ಮೇಲೆ ನೋಡಲು ಪುನೀತ್ ರಾಜಕುಮಾರ್ ಅವರ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.

Share This Article