ಬೆಂಗಳೂರು: ಸ್ಯಾಂಡಲ್‍ವುಡ್ ರಾಜಕುಮಾರ ಪುನೀತ್ ರಾಜ್ ಕುಮಾರ್ ಅವರ ಅಂತ್ಯಕ್ರಿಯೆ ನಾಳೆ ನಡೆಯಲಿದ್ದು, ಭಾನುವಾರ ಬೆಳಗ್ಗೆ 5:30 ಗಂಟೆಯಿಂದ 6:30 ಗಂಟೆವರೆಗೆ ಅಂತಿಮಯಾತ್ರೆ ನಡೆಯಲಿದೆ. ಕಂಠೀರವ ಸ್ಟೇಡಿಯಂನಿಂದ ಅಂತ್ಯಕ್ರಿಯೆ ನಡೆಯುವ ಕಂಠೀರವ ಸ್ಟುಡಿಯೋಗೆ ನಟ ಪುನೀತ್ ರಾಜ್‍ಕುಮಾರ್ ಪಾರ್ಥಿವ ಶರೀರ ಕೊಂಡೊಯ್ಯಲು ರಾಜ್ಯ ಸರ್ಕಾರ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದೆ.
Advertisement
ಅಪ್ಪ-ಅಮ್ಮನ ಸಮಾಧಿ ಪಕ್ಕದಲ್ಲೇ ಅಪ್ಪು ಅಂತ್ಯಕ್ರಿಯೆ ನಡೆಯಲಿದೆ. ಭಾನುವಾರ ಬೆಳಗ್ಗೆ 11 ಗಂಟೆಹೊತ್ತಿಗೆ ಅಂತಿಮ ವಿಧಿ ವಿಧಾನ ಮುಗಿಸಲು ಸರ್ಕಾರ ಸಿದ್ಧತೆ ಮಾಡಿಕೊಂಡಿದ್ದು, ಶನಿವಾರವೇ ಅಂತ್ಯಕ್ರಿಯೆಯ ಸ್ಥಳ ನಿಗದಿ ಮಾಡಿ ಗುಂಡಿ ಕೂಡ ಅಗೆಯಲಾಗಿದೆ. ಸಚಿವರಾದ ಮುನಿರತ್ನ, ಗೋಪಾಲಯ್ಯ, ಆರಗ ಜ್ಞಾನೇಂದ್ರ ಅಂತ್ಯಕ್ರಿಯೆಯ ಸ್ಥಳವನ್ನು ಪರಿಶೀಲಿಸಿದ್ದು, ನಾಳೆ ರಾಘವೇಂದ್ರ ರಾಜ್‍ಕುಮಾರ್ ಪುತ್ರ ವಿನಯ್ ರಾಜ್‍ಕುಮಾರ್ ಅಂತಿಮ ವಿಧಿವಿಧಾನ ನೆರವೇರಿಸುವ ಸಾಧ್ಯತೆಗಳಿವೆ. ಇದನ್ನೂ ಓದಿ: ತಂದೆ ಅಂತಿಮ ದರ್ಶನ ಪಡೆದ ಪುತ್ರಿ ಧೃತಿ
Advertisement
Advertisement
ಮಾರ್ಗ ಯಾವುದು?
ಪಾರ್ಥಿವ ಶರೀರ ಸಾಗುವ ರೂಟ್ ಮ್ಯಾಪನ್ನು ಸಿದ್ಧಪಡಿಸಲಾಗಿದೆ. ಆರ್‌ಆರ್‌ಎಂಆರ್ ರೋಡ್, ಹಡ್ಸನ್ ಸರ್ಕಲ್, ಕೆಜಿ ರೋಡ್, ಮೈಸೂರು ಬ್ಯಾಂಕ್ ಸರ್ಕಲ್, ಪೋಸ್ಟ್ ಆಫೀಸ್ ರಸ್ತೆ, ಕೆಆರ್ ಸರ್ಕಲ್ ಎಡ ತಿರುವು, ಶೇಷಾದ್ರಿ ರಸ್ತೆ, ಮಹಾರಾಣಿ ಮೇಲ್ಸೇತುವೆ, ಸಿಐಡಿ ಜಂಕ್ಷನ್, ಚಾಲುಕ್ಯ ವೃತ್ತ, ಹಳೆ ಹೈಗ್ರೌಂಡ್ಸ್ ಜಂಕ್ಷನ್, ಟಿ ಚೌಡಯ್ಯ ರಸ್ತೆ, ವಿಂಡ್ಸರ್ ಮ್ಯಾನರ್ ಜಂಕ್ಷನ್, ಪಿಜಿ ಹಳ್ಳಿ ಕ್ರಾಸ್, ಕಾವೇರಿ ಜಂಕ್ಷನ್, ಭಾಷ್ಯಂ ಸರ್ಕಲ್, ಸ್ಯಾಂಕಿ ರೋಡ್, ಮಲ್ಲೇಶ್ವರಂ 18ನೇ ಕ್ರಾಸ್, ಮಾರಮ್ಮ ಸರ್ಕಲ್, ಬಿಹೆಚ್‍ಇಎಲ್ ಸರ್ಕಲ್, ಯಶವಂತಪುರ ಸರ್ಕಲ್, ಗೋವರ್ಧನ್ ಥಿಯೇಟರ್, ಗೊರಗುಂಟೆ ಪಾಳ್ಯ ಮಾರ್ಗವಾಗಿ ಕಂಠೀರವ ಸ್ಟುಡಿಯೋ ತಲುಪಲಿದೆ. ಯಾವ ಸ್ವಾಮೀಜಿ ನೇತೃತ್ವದಲ್ಲಿಯೂ ವಿಶೇಷ ಪೂಜೆಗಳು ಇರುವುದಿಲ್ಲ. ಈಡಿಗ ಸಂಪ್ರದಾಯದಂತೆ ನಾವೇ ಎಲ್ಲಾ ವಿಧಿವಿಧಾನ ಪೂರೈಸುತ್ತೇವೆ ಎಂದು ಪುನೀತ್ ಮಾವ, ನಿರ್ಮಾಪಕ ಚಿನ್ನೇಗೌಡ ತಿಳಿಸಿದ್ದಾರೆ. ಇದನ್ನೂ ಓದಿ: ಪತಿ ನಿಧನದ ಸುದ್ದಿ ಕೇಳ್ತಿದ್ದಂತೆ ಕಣ್ಣೀರಿಡುತ್ತಲೇ ಮೌನಕ್ಕೆ ಶರಣಾದ ಪತ್ನಿ ಅಶ್ವಿನಿ
Advertisement