– ಸ್ಕ್ರೀನ್ ಮೇಲೆ ಅಪ್ಪುನ ನೋಡ್ತಿದ್ದಂತೆ ಕುಣಿದು ಕುಪ್ಪಳಿಸಿದ ಫ್ಯಾನ್ಸ್
ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ (Puneeth Rajkumar) ಅವರ 50ನೇ ವರ್ಷದ ಹುಟ್ಟುಹಬ್ಬದ ಪ್ರಯುಕ್ತ ಇಂದು `ಅಪ್ಪು’ (Appu) ಸಿನಿಮಾ ರಿ-ರಿಲೀಸ್ ಆಗಿದೆ.
23 ವರ್ಷದ ಬಳಿಕ ಮರು ಬಿಡುಗಡೆ ಆಗಿರುವ `ಅಪ್ಪು’ ಸಿನಿಮಾಕ್ಕೆ ಹಿಂದಿನ ಕ್ರೇಜ್ ಮರುಕಳಿಸಿರುವುದು ವಿಶೇಷ. ಬೆಂಗಳೂರಿನ ಹಲವೆಡೆ ಫ್ಯಾನ್ಸ್ ಶೋ ಭರ್ಜರಿಯಾಗಿ ನಡೆಯುತ್ತಿದ್ದು, ಮೊದಲ ದಿನದ ಟಿಕೆಟ್ ಆಲ್‌ಮೋಸ್ಟ್ ಸೋಲ್ಡ್ಔಟ್ ಆಗಿದೆ. ಇದನ್ನೂ ಓದಿ: ಫ್ಯಾನ್ಸ್‌ಗೆ ಸಿಹಿಸುದ್ದಿ- ‘ಬ್ರಹ್ಮಾಸ್ತ್ರ 2’ ಬಗ್ಗೆ ಅಪ್‌ಡೇಟ್ ಕೊಟ್ಟ ರಣಬೀರ್ ಕಪೂರ್
ಬೆಂಗಳೂರಿನ ನರ್ತಕಿ, ವಿರೇಶ್ ಹಾಗೂ ಶ್ರೀನಿವಾಸ, ಸಿದ್ದೇಶ್ವರ ಚಿತ್ರಮಂದಿರಗಳಲ್ಲಿ ಫ್ಯಾನ್ಸ್ ಕಡೆಯಿಂದ ಭರ್ಜರಿ ಸೆಲೆಬ್ರೇಷನ್ ಇದೆ. ಅಪ್ಪು ಕುಟುಂಬಸ್ಥರೂ ಹಾಗೂ ಸಿನಿಮಾ ಟೀಮ್ ಅಭಿಮಾನಿಗಳ ಜೊತೆ ಸಿನಿಮಾ ವೀಕ್ಷಿಸಲಿದ್ದಾರೆ. ಈಗಾಗಲೇ ಥಿಯೇಟರ್‌ಗಳಲ್ಲಿ ಬೆಳಗ್ಗೆ 6:30 ರಿಂದ ಶೋ ಆರಂಭವಾಗಿದೆ.
ಇದೇ ಮಾರ್ಚ್ 17ಕ್ಕೆ ಪುನೀತ್ ರಾಜ್‌ಕುಮಾರ್ ಅವರ 50ನೇ ವರ್ಷದ ಹುಟ್ಟಿದ ಹಬ್ಬ. ಇದರ ವಿಶೇಷವಾಗಿ ಪವರ್‌ಸ್ಟಾರ್ ಅಭಿಮಾನಿಗಳು ಅಪ್ಪು ನಾಯಕನಾಗಿ ಅಭಿನಯಿಸಿರುವ ಮೊದಲ ಚಿತ್ರವನ್ನ ರಿ-ರಿಲೀಸ್ ಮಾಡಿ ಖುಷಿ ಪಟ್ಟಿದ್ದಾರೆ. ಶೋ ಆರಂಭವಾಗಿ ಸ್ಕ್ರೀನ್ ಮೇಲೆ ಅಪ್ಪುನ ನೋಡುತ್ತಿದ್ದಂತೆ ಅಭಿಮಾನಿಗಳು ಕುಣಿದು ಕುಪ್ಪಳಿಸಿದ್ದಾರೆ. ಇದನ್ನೂ ಓದಿ: ಬೆಂಗಳೂರಿನ ಬೆಡಗಿ ಜೊತೆ ಡೇಟಿಂಗ್ ಮಾಡ್ತಿದ್ದೀನಿ: ಪಾರ್ಟಿಯಲ್ಲಿ ಗೆಳತಿ ಬಗ್ಗೆ ಆಮೀರ್ ಮಾತು