ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಮತ್ತು ಸಂತೋಷ್ ಆನಂದ್ ರಾಮ್ ಕಾಂಬಿನೇಷನ್ನಿನ ಎರಡನೇ ಚಿತ್ರ ಯುವರತ್ನ. ಈ ಚಿತ್ರವೀಗ ಅಂತಿಮ ಘಟ್ಟದಲ್ಲಿದೆ. ಸಾಮಾನ್ಯವಾಗಿ ಒಂದು ಸೂಪರ್ ಹಿಟ್ ಸಿನಿಮಾ ಕೊಟ್ಟ ನಟ ಮತ್ತು ನಿರ್ದೇಶಕ ಮತ್ತೊಂದು ಚಿತ್ರದಲ್ಲಿ ಒಂದಾದರೆ ಅದರ ಬಗ್ಗೆ ಅಗಾಧ ಪ್ರಮಾಣದಲ್ಲಿಯೇ ನಿರೀಕ್ಷೆಗಳು ಮೂಡಿಕೊಳ್ಳುತ್ತವೆ. ಹಾಗೆಂದ ಮೇಲೆ ರಾಜಕುಮಾರ ಎಂಬ ಸೂಪರ್ ಹಿಟ್ ಸಿನಿಮಾ ಕೊಟ್ಟ ಸಂತೋಷ್ ಆನಂದ್ ರಾಮ್ ಮತ್ತು ಪುನೀತ್ ರಾಜ್ ಕುಮಾರ್ ಕಾಂಬಿನೇಷನ್ನಿನಲ್ಲಿ ಮೂಡಿ ಬರುತ್ತಿರುವ ಯುವರತ್ನ ಚಿತ್ರದ ಬಗ್ಗೆ ಕಾತರ ಮೂಡದಿರಲು ಸಾಧ್ಯವೇ ಇಲ್ಲ. ಇದೀಗ ಯುವರತ್ನ ಸಿನಿಮಾ ಕಡೆಯಿಂದ ಇಂಟರೆಸ್ಟಿಂಗ್ ಆದೊಂದು ಸಂಗತಿ ಹೊರ ಬಿದ್ದಿದೆ.
Advertisement
ಯುವರತ್ನ ಚಿತ್ರದ ಬಗ್ಗೆ ಇಂಚಿಂಚು ಮಾಹಿತಿಗಳಿಗಾಗಿ ಪ್ರೇಕ್ಷಕರು ಕಾದು ಕೂತಿದ್ದಾರೆ. ಅಪ್ಪು ಅಭಿಮಾನಿಗಳಲ್ಲಂತೂ ಈ ಕಾತರ ತುಸು ಹೆಚ್ಚೇ ಇದೆ. ಆದರೆ ಇದರ ಕಥೆಯ ಬಗ್ಗೆಯಾಗಲಿ, ಇನ್ನಿತರ ವಿಚಾರಗಳ ಬಗ್ಗೆಯೇ ಆಗಲಿ ಚಿತ್ರತಂಡ ಗೌಪ್ಯತೆ ಕಾಪಾಡಿಕೊಂಡೇ ಸಾಗಿ ಬಂದಿದೆ. ತಾರಾಗಣಕ್ಕೆ ಕಲಾವಿದರನ್ನು ವೆಲ್‍ಕಮ್ ಮಾಡುವ ಮೂಲಕವಷ್ಟೇ ಈ ಸಿನಿಮಾ ಬಗ್ಗೆ ಒಂದಷ್ಟು ಅಂಶಗಳು ಜಾಹೀರಾಗುತ್ತಿದ್ದವು. ಆದರೆ ಆ ಪಾತ್ರಗಳ ಬಗ್ಗೆ ಯಾವುದೇ ಮಾಹಿತಿಯನ್ನೂ ಚಿತ್ರತಂಡ ಬಿಟ್ಟು ಕೊಡುತ್ತಿರಲಿಲ್ಲ. ಆದರೀಗ ಚಿತ್ರತಂಡವೇ ಒಂದು ಮಹತ್ತರ ವಿಚಾರವನ್ನು ಜಾಹೀರು ಮಾಡಿದೆ.
Advertisement
Advertisement
ಅದರನ್ವಯವಾಗಿ ಹೇಳೋದಾದರೆ, ಯುವರತ್ನ ಚಿತ್ರದಲ್ಲಿ ಮೈನವಿರೇಳಿಸುವಂಥಾ ಬೈಕ್ ಚೇಸಿಂಗ್ ಸೀನುಗಳಿರಲಿವೆಯಂತೆ. ಈ ಚಿತ್ರದಲ್ಲಿ ಪುನೀತ್ ಕಾಲೇಜು ವಿದ್ಯಾರ್ಥಿಯಾಗಿ ನಟಿಸಿದ್ದಾರೆಂಬ ವಿಚಾರ ಈಗಾಗಲೇ ಗೊತ್ತಾಗಿದೆ. ಇಲ್ಲಿ ಶಿಕ್ಷಣ ಮಾಫಿಯಾ ಬಗೆಗಿನ ಕಥೆಯಿದೆ ಎಂಬ ಸಣ್ಣ ಸುಳಿವೂ ಹರಿದಾಡುತ್ತಿದೆ. ಇದೀಗ ಬೈಕ್ ಚೇಸಿಂಗ್ ಸೀನಿದೆ ಎಂಬ ಅಂಶ ಹೊರ ಬಿದ್ದಿರೋದು ಇಲ್ಲಿ ಪಕ್ಕಾ ಆಕ್ಷನ್ ಸೀನುಗಳೂ ಇವೆಯೆಂಬುದರ ಸಂಕೇತ. ಪವರ್ ಸ್ಟಾರ್ ಚಿತ್ರಗಳೆಂದ ಮೇಲೆ ಅದರಲ್ಲಿ ಆಕ್ಷನ್ ದೃಷ್ಯಾವಳಿಗಳು ಇದ್ದೇ ಇರುತ್ತವೆ. ಯುವರತ್ನದಲ್ಲಿ ಆ ಅಂಶಗಳು ಹೆಚ್ಚೇ ಇರಲಿವೆಯಂತೆ. ಅಂದಹಾಗೆ, ಕಳೆದ ವರ್ಷ ಡಿಸೆಂಬರ್ ತಿಂಗಳಿನಲ್ಲಿ ಮುಹೂರ್ತ ಕಂಡಿದ್ದ ಯುವರತ್ನ ಚಿತ್ರವೀಗ ಚಿತ್ರೀಕರಣದ ಅಂತಿಮ ಘಟ್ಟದಲ್ಲಿದೆ.