ಬೆಂಗಳೂರು: ಸ್ಯಾಂಡಲ್ವುಡ್ ನಟ ಪುನೀತ್ ರಾಜ್ಕುಮಾರ್ ಅವರು ತಮ್ಮ ಮಡದಿಗೆ ಮನೆಯಲ್ಲಿ ಪ್ರೀತಿಯಿಂದ ಹಾಡುತ್ತಿದ್ದ ಹಾಡಿನ ಕುರಿತಾಗಿ ಹೇಳಿರುವ ವೀಡಿಯೋ ಇದೀಗ ವೈರಲ್ ಆಗಿದೆ.
Advertisement
ಖಾಸಗಿ ವಾಹಿನಿಯ ಸಂದರ್ಶನ ಕಾರ್ಯಕ್ರಮದಲ್ಲಿ ಪುನೀತ್ ರಾಜ್ಕುಮಾರ್ ಅವರು ಭಾಗವಹಿಸಿದ್ದರು. ಈ ವೇಳೆ ಅವರಿಗೆ ಮಡದಿ ಕುರಿತಾಗಿ ಕೆಲವು ಪ್ರಶ್ನೆಗಳನ್ನು ಕೇಳಲಾಗಿತ್ತು. ಅಪ್ಪು ಮಡದಿ ಅಶ್ವಿನಿ ಕುರಿತಾಗಿ ಇರುವ ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ.
Advertisement
Advertisement
ಅಪ್ಪು ಸರ್ ಸಿನಿಮಾಗಳಿಗೆ ಹಾಡಿದ್ದನ್ನು ಕೇಳಿದ್ದೇವೆ ಆದರೆ ಮನೆಯಲ್ಲಿ ನಿಮ್ಮ ಪತ್ನಿಗಾಗಿ ಯಾವತ್ತಾದರೂ ಹಾಡಿದ್ದೀರ ಎಂದು ಪ್ರಶ್ನೆ ಕೇಳಲಾಗಿತ್ತು. ಆಗ ಅಪ್ಪು ನಗುತ್ತಾ ನಾನು ಮನೆಯಲ್ಲಿ ಪತ್ನಿಗಾಗಿ ಆಗಾಗ ತಮಾಷೆಗಾಗಿ ಹಾಡುತ್ತಿರುತ್ತೇನೆ. ಎಂಥ ಸೌಂದರ್ಯ ಕಂಡೆ.. ಓಹೋ ಎಂಥ ಸೌಂದರ್ಯ ಕಂಡೆ… ಎಂದು ಹಾಡುತ್ತೇನೆ ಈ ಹಾಡು ನನಗೆ ತುಂಬಾ ಇಷ್ಟ ಎಂದು ಹೇಳಿದ್ದಾರೆ. ಈ ಸಂದರ್ಭದಲ್ಲಿ ಭಾರೀ ಖುಷಿ ಮರ್ರೆ ನನ್ನ ಹೆಂಡ್ತಿ ಕಂಡ್ರೆ ಒಂದು ಚೂರು ಬೈಯೋದಿಲ್ಲ ರಾತ್ರಿ ಕುಡ್ಕೊಂಡು ಹೋದ್ರೆ.. ಎಂದು 2 ಸಾಲು ಹಾಡನ್ನು ಹೇಳಿದ್ದಾರೆ. ಈ ಹಾಡನ್ನು ತಮ್ಮ ಹೆಂಡತಿಯನ್ನು ಪ್ರೀತಿಸುವವರಿಗಾಗಿ ಬರೆದಿದ್ದಾಗಿದೆ. ನಿಮ್ಮ ಮಧ್ಯೆ ಚಿಕ್ಕ, ಪುಟ್ಟ ಗಲಾಟೆ ಆದರೆ ಈ ಹಾಡನ್ನು ಹೇಳಿ ಸರಿ ಹೋಗುತ್ತದೆ ಎಂದು ಅಪ್ಪು ಸಲಹೆ ಕೂಡ ನೀಡಿದ್ದಾರೆ. ಇದನ್ನೂ ಓದಿ: ಡೆಸರ್ಟ್ ಸಫಾರಿ ಬಳಿಕ ಬಿಕಿನಿಯಲ್ಲಿ ಜಾನ್ವಿ, ಖುಷಿ ಕಪೂರ್ ಮೋಜು, ಮಸ್ತಿ
Advertisement
ನೀವು ಯಾವತ್ತು ಆದರೂ ಕುಡ್ಕೊಂಡು ಮನೆಗೆ ಹೋಗಿದ್ರಾ? ಎಂದು ಕೇಳಿದಾಗ ಇಲ್ಲ ನಾನು ಯಾವತ್ತೂ ಹಾಗೇ ಮಾಡಿಲ್ಲ ಎಂದು ನಗುತ್ತಾ ಹೇಳಿದ್ದಾರೆ. ಅಪ್ಪು ಅವರು ನಿರ್ದೇಶನ ಮಾಡುತ್ತಾರಾ ಎನ್ನುವ ಪ್ರಶ್ನೆಗೆ ಉತ್ತರಿಸಿದ ಅವರು, ನಾನು ಈಗ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದೇನೆ. ಮುಂದೆ ಶಿವಣ್ಣನಿಗೆ ನಿರ್ದೇಶನ ಮಾಡುವ ಆಸೆ ಇದೆ ಎಂದು ಹೇಳಿದ್ದಾರೆ. ಈ ವೀಡಿಯೋ ತುಣುಕು ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಇದನ್ನೂ ಓದಿ: ಮನೆಯಲ್ಲಿದ್ರೆ ಮಕ್ಕಳ ಸಂಖ್ಯೆ ಹೆಚ್ಚಾಗುತ್ತೆ ಅನ್ನೋ ಭಯವಿದೆ: ಸೈಫ್ ಆಲಿ ಖಾನ್