ಬೆಂಗಳೂರು: ಲೋಕಸಭೆ ಚುನಾವಣೆಗೂ ಮುನ್ನ ನಟ ಪುನೀತ್ ರಾಜ್‍ಕುಮಾರ್ ಅವರನ್ನು ಪಕ್ಷಕ್ಕೆ ಸೇರಿಸಲು ಬಿಜೆಪಿ ಮುಂದಾಗಿದ್ದ ವಿಚಾರ ಈಗ ಮುನ್ನೆಲೆಗೆ ಬಂದಿದೆ.
ಲೋಕಸಭೆ ಚುನಾವಣೆಗೂ ಮುನ್ನ ಬಿಜೆಪಿ ಪ್ರಮುಖ ನಾಯಕರು ಪುನೀತ್ ಅವರನ್ನು ಭೇಟಿಯಾಗಿದ್ದರು. ನಟ ಜಗ್ಗೇಶ್, ನಿರ್ಮಾಪಕ ಎಸ್.ವಿ.ಬಾಬು ಭೇಟಿಯಾಗಿ ಬಿಜೆಪಿಗೆ ಬರುವಂತೆ ಆಹ್ವಾನ ಕೊಟ್ಟಿದ್ದರು. ಗುಜರಾತಿನ ಬಿಜೆಪಿ ಮುಖಂಡ ಶರ್ಮಾರಿಂದಲೂ ಪುನೀತ್ ಮನವೊಲಿಕೆ ಮಾಡಿದ್ದರು. ಆದರೆ ಬಿಜೆಪಿ ಆಹ್ವಾನವನ್ನು ಪುನೀತ್ ರಾಜ್‍ಕುಮಾರ್ ಒಪ್ಪಿರಲಿಲ್ಲ. ಇದನ್ನೂ ಓದಿ: ಅಪ್ಪು ಪುತ್ಥಳಿಗೆ ಮುತ್ತಿಟ್ಟು ರಾಘವೇಂದ್ರ ರಾಜ್‍ಕುಮಾರ್ ಭಾವುಕ
Advertisement
Advertisement
ಲೋಕಸಭೆ ಚುನಾವಣೆ ವೇಳೆ ಪ್ರಧಾನಿ ಮೋದಿ ಅವರನ್ನು ಪುನೀತ್ ಭೇಟಿಯಾಗಿದ್ದರು. ಈ ವೇಳೆ ಪ್ರಧಾನಿ ಮೋದಿಯವರ ಆಹ್ವಾನವನ್ನೇ ಪುನೀತ್ ನಯವಾಗಿ ತಿರಸ್ಕರಿಸಿದ್ದರು. ಇದನ್ನೂ ಓದಿ: ಚಾಮುಂಡಿ ಬೆಟ್ಟವನ್ನು ಕಾಂಕ್ರೀಟ್ ಕಾಡು ಮಾಡಬೇಡಿ – ಮೋದಿಗೆ ಪತ್ರ ಬರೆದ ಭೈರಪ್ಪ
Advertisement
ಈ ವಿಚಾರವಾಗಿ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಮ್ಯಾನೇಜರ್ ವಜ್ರೇಶ್ವರಿ ಕುಮಾರ್, ಚುನಾವಣೆಗೂ ಮುನ್ನ ಒಂದು ಟೀಮ್ ಬಂದು ಅಪ್ಪು ಅವರನ್ನು ಭೇಟಿಯಾಗಿತ್ತು. ಆದರೆ ಅಪ್ಪು ಅವರಿಗೆ ರಾಜಕೀಯ ಕುರಿತಾಗಿ ಒಲವು ಇರಲಿಲ್ಲ. ಎಲ್ಲಾ ಪಕ್ಷದದಲ್ಲಿ ನನ್ನ ಸ್ನೇಹಿತರು ಇದ್ದಾರೆ. ನನಗೆ ಎಲ್ಲರೂ ಬೇಕು ಎಂದು ಹೇಳಿದ್ದರು ಎಂಬುದಾಗಿ ತಿಳಿಸಿದರು. ಇದನ್ನೂ ಓದಿ: ನಿಕ್ ಜೊತೆಗಿನ ವಿಚ್ಛೇದನ ಗಾಸಿಪ್ಗೆ ಬ್ರೇಕ್ ಹಾಕಿದ ಪ್ರಿಯಾಂಕ ಚೋಪ್ರಾ
Advertisement
ಮ್ಯಾನೇಜರ್ ಹೇಳಿದ್ದು ಏನು?
ಪ್ರಧಾನಿ ಮೋದಿ ಅವರನ್ನು ಬೆಂಗಳೂರಿನ ಎಚ್‍ಎಎಲ್ ವಿಮಾನ ನಿಲ್ದಾಣದಲ್ಲಿ ಪುನೀತ್ ಮತ್ತು ಅಶ್ವಿನಿ ದಂಪತಿ ಭೇಟಿಯಾಗಿದ್ದರು. ಈ ವೇಳೆ ಮೋದಿ ನಿಮ್ಮಂತ ಯುವಕರ ಅಗತ್ಯ ದೇಶಕ್ಕೆ ಇದೆ ಎಂದು ಹೇಳಿದ್ದರು. 7 ನಿಮಿಷಗಳ ಕಾಲ ನಡೆದ ಮಾತುಕತೆಯ ವೇಳೆ ರಾಜಕೀಯ ನನಗೆ ಇಷ್ಟವಿಲ್ಲ, ನಾನು ನಮ್ಮ ತಂದೆಯವರಂತೆ ಇರಬೇಕು ಎಂದು ಅಪ್ಪು ಉತ್ತರ ನೀಡಿದ್ದರು.
ಈ ಹಿಂದೆ ಅಪ್ಪು ಅವರನ್ನು ಆಂಧ್ರಪ್ರದೇಶದ ಸೋಮವೀರ್ ರಾಜ್, ಗುಜರಾತಿನ ಬಿ.ಬಿ.ಎ ಶರ್ಮಾ ಅವರು ಬಂದು ಭೇಟಿಯಾಗಿದ್ದರು. ಮೋದಿ ಅವರು ಭೇಟಿಯಾದಾಗ ನೇರವಾಗಿ ಬಿಜೆಪಿಗೆ ಬನ್ನಿ ಎಂದು ಹೇಳಿರಲಿಲ್ಲ. ಇದನ್ನೂ ಓದಿ: ದುನಿಯಾ ವಿಜಯ್ ಬರದಿದ್ದರೆ ತಾಳಿ ಕಟ್ಟಿಸಿಕೊಳ್ಳಲ್ಲ – ಯುವತಿ ಪಟ್ಟು
ಮೋದಿ ಬಿಜೆಪಿ ನಾಯಕ ಅಂತ ಭೇಟಿ ಮಾಡೋದು ಬೇಡ. ದೇಶದ ಪ್ರಧಾನಿ ಅಂತಾದರೂ ಭೇಟಿಯಾಗಿ ಎಂದು ಬಿಜೆಪಿ ನಾಯಕರು ಒತ್ತಡ ಹಾಕಿದ್ದರು. ಬಿಜೆಪಿ ನಾಯಕರ ಒತ್ತಡಕ್ಕೆ ಮಣಿದು ಅಪ್ಪಾಜಿ ಕುರಿತಾದ ಪುಸ್ತಕ ನೆಪದಲ್ಲಿ ಮೋದಿ ಅವರನ್ನು ಪುನೀತ್ ಭೇಟಿಯಾಗಿದ್ದರು.
ಮೋದಿ ನಿಮ್ಮಂತಹ ಯುವಕರು ದೇಶಕ್ಕೆ ಬೇಕು ಎಂದು ಹೇಳಿದ್ದರು. ಆದರೆ ಅಪ್ಪು ಅವರು ಯಾವತ್ತು ರಾಜಕೀಯ ಕುರಿತಾಗಿ ಆಸಕ್ತಿಯನ್ನು ತೋರಿಸಿರಲಿಲ್ಲ. ಮೋದಿ ಆಹ್ವಾನಕ್ಕೆ ಪುನೀತ್ ರಾಜ್‍ಕುಮಾರ್ ನಕ್ಕು ಸುಮ್ಮನಾಗಿದ್ದರು.
ಚುನಾವಣಾ ಸಮಯದಲ್ಲಿ ಭೇಟಿಯಾಗುತ್ತಿರುವಾಗ ಅಪ್ಪು,”ಈ ಸಮಯದಲ್ಲಿ ಭೇಟಿಯಾದರೆ ನಾನು ಬಿಜೆಪಿ” ಎಂದು ಜನ ಅಂದುಕೊಳ್ಳಬಹುದು ಎಂಬ ಆತಂಕವನ್ನು ವ್ಯಕ್ತಪಡಿಸಿದ್ದರು.