ಮೈಸೂರು: ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರಿಗೆ ವಿಶೇಷ ಶರ್ಟ್ ಹೊಲಿದು, ಅವರ ನೆಚ್ಚಿನ ಹನುಮಂತು ಹೋಟೆಲ್ ಪಲಾವ್ ತೆಗೆದುಕೊಂಡು ಅಪ್ಪು ಸಮಾಧಿಗೆ ಅಭಿಮಾನಿಯೊಬ್ಬರು ಮೈಸೂರಿನಿಂದ ಬೆಂಗಳೂರಿಗೆ ಹೊರಟಿದ್ದಾರೆ.
ಮೈಸೂರಿನ ದೇವರಾಜ ಮೊಹಲ್ಲಾದಲ್ಲಿನ ಫ್ರೆಂಡ್ಸ್ ಸ್ಟಿಚ್ ಟೈಲರ್ ಸಾಗರ್ ಪುನೀತ್ ಅವರಿಗಾಗಿ ಒಂದು ಶರ್ಟ್ ಹೊಲಿದುಕೊಂಡು, ಅವರಿಗೆ ಪ್ರಿಯವಾದ ಮೈಸೂರಿನ ಹನುಮಂತು ಮಟನ್ ಪಲಾವ್, ಕಜ್ಜಾಯ, ರವೆ ಉಂಡೆಯನ್ನು ಪಾರ್ಸಲ್ ಮಾಡಿಸಿಕೊಂಡು ಬೆಂಗಳೂರಿನಲ್ಲಿನ ಅಪ್ಪು ಸಮಾಧಿಗೆ ಅವರ ತಂದೆ ಜೊತೆ ದ್ವಿಚಕ್ರ ವಾಹನದಲ್ಲಿ ತೆರಳಿದ್ದಾರೆ. ಇದನ್ನೂ ಓದಿ: ನಾನು ಅತ್ತಾಗ ಕಪಿಲ್‍ದೇವ್ ಕಣ್ಣನ್ನು ಒರೆಸಿ ಎತ್ತಿಕೊಂಡಿದ್ದರು: ಸುದೀಪ್
ಪುನೀತ್ ರಾಜಕುಮಾರ್ ಅವರು ಪೃಥ್ವಿ ಸಿನಿಮಾದ ಶೂಟಿಂಗ್ ವೇಳೆ ಸಾಗರ್ ಅವರ ಬಳಿ ಒಂದು ಶರ್ಟ್ ಸ್ಟಿಚ್ ಮಾಡಿಸಿದ್ದರು. ಮುಂದೆ ಒಂದು ದಿನ ಅಂಗಡಿಗೆ ಬಂದು ಶರ್ಟ್ ಹೊಲಿಸುತ್ತೇನೆ ಎಂದು ಹೇಳಿದ್ದರು. ಇದನ್ನೂ ಓದಿ: ಮತ್ತೊಮ್ಮೆ ನಾವು ಕ್ಯೂಟ್ ಜೋಡಿಗಳು ಎಂದು ತೋರಿಸಿಕೊಟ್ಟ ಯಶ್, ರಾಧಿಕಾ
ಅಪ್ಪುವಿಗಾಗಿ ವಿಶೇಷವಾದ ಶರ್ಟ್ ಹೊಲಿಯುವುದು ಸಾಗರ್ ಕನಸಾಗಿತ್ತು. ಆದರೆ ಆ ಕನಸು ಈಡೇರುವ ಮುನ್ನವೇ ಅಪ್ಪು ನಿಧನರಾಗಿದ್ದಾರೆ. ಹೀಗಾಗಿ ಇಂದು ಅಪ್ಪುವಿಗಾಗಿ ಪ್ರೀತಿಯಿಂದ ಹೊಲಿದ ಶರ್ಟ್, ಅವರು ಇಷ್ಟಪಡುತ್ತಿದ್ದ ಊಟವನ್ನು ತೆಗೆದುಕೊಂಡು ಅಪ್ಪು ಸಮಾಧಿ ದರ್ಶನಕ್ಕೆ ತೆರಳಿದ್ದಾರೆ.