ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರಿಗೆ ಸ್ಯಾಂಡಲ್‍ವುಡ್ ನುಡಿನಮನ ಕಾರ್ಯಕ್ರಮವನ್ನು ಹಂಬಿಕೊಂಡಿದೆ.
Advertisement
ನವೆಂಬರ್ 16ರಂದು ಅರಮನೆ ಮೈದಾನದಲ್ಲಿ ಪುನೀತ್‍ಗೆ ನಮನ ಕರ್ಯಕ್ರಮವನ್ನು ಆಯೋಜಿಸಲಾಗಿದೆ. ದಕ್ಷಿಣ ಭಾರತದ ಸಿನಿಗಣ್ಯರು, ರಾಜಕಾರಣಿಗಳು ಭಾಗಿಯಾಗಲಿದ್ದಾರೆ.
Advertisement
Advertisement
ಪುನೀತ್ ರಾಜ್‍ಕುಮಾರ್ ಅವರಿಗೆ ನುಡಿನಮನ ಕಾರ್ಯಕ್ರಮವನ್ನು ಫಿಲ್ಮಂ ಚೇಂಬರ್ ಅಯೋಜಿಸಿದೆ. ನವೆಂಬರ್ 16ಕ್ಕೆ ಅರಮನೆ ಮೈದಾನದಲ್ಲಿ ಈ ಕಾರ್ಯಕ್ರಮ ನಡೆಯಲಿದೆ. ಮಧ್ಯಾಹ್ನ 3 ಗಂಟೆಗೆ ಗಾಯತ್ರಿ ವಿಹಾರದಲ್ಲಿ ಕಾರ್ಯಕ್ರಮ ಆರಂಭವಾಗುತ್ತದೆ. ಈಗಾಲೇ ಭರದಿಂದ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಇದನ್ನೂ ಓದಿ: ಜಿಮ್ ಮಾಡೋವ್ರಿಗೆ ಅಪ್ಪು ಸಾವು ಬಿಗ್ ಶಾಕ್ – ಜಿಮ್‍ಗೆ ಹೋಗದಂತೆ ಮಕ್ಕಳಿಗೆ ಪೋಷಕರ ಆಕ್ಷೇಪ
Advertisement
ಈ ಕಾರ್ಯಕ್ರಮದಲ್ಲಿ ಚಿತ್ರೋದ್ಯಮದ ಗಣ್ಯರು, ಕಲಾವಿದರು ಭಾಗಿಯಾಗುತ್ತಾರೆ. ದಕ್ಷಿಣ ಭಾರತದ ಖ್ಯಾತ ಕಲಾವಿದರಿಗೆ ಆಹ್ವಾನಿಸಲಾಗಿದ್ದು, ಚಿರಂಜೀವಿ, ಕಮಲ್ ಹಾಸನ್, ಧನುಷ್ ಸೇರಿ ಹಲವು ಕಲಾವಿದರಿಗೆ ಆಹ್ವಾನಿಸಲಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ವಿಪಕ್ಷ ನಾಯಕ ಸಿದ್ದರಾಮಯ್ಯ, ಮಾಜಿ ಸಿಎಂ ಬಿಸ್‍ವೈ, ಕುಮಾರಸ್ವಾಮಿ ಹಾಗೂ ಡಿಕೆ ಶಿವಕುಮಾರ್ ಭಾಗಿಯಾಗಲಿದ್ದಾರೆ. ಇದನ್ನೂ ಓದಿ: ‘ಅಪ್ಪು ಜೊತೆ ರಾಜ್ ಸಮಾಧಿ ನೋಡಲು ಬರ್ತಿದ್ದ ನಾವು ಈಗ ಅವರದ್ದೇ ಸಮಾಧಿ ನೋಡೋಕೆ ಬರುವಂಗಾಯ್ತು
ಗುರುಕಿರಣ್ ಅವರ ಗೀತ ನಮನ ಹಾಗೂ ವಿ, ನಾಗೇಂದ್ರ ಪ್ರಸಾದ್ ಹಾಡು ರಚನೆ ಈ ಕಾರ್ಯಕ್ರಮದಲ್ಲಿ ಇರಲಿದೆ. ಪುನೀತ್ ರಾಜ್‍ಕುಮಾರ್ ಅವರು ನಡೆದ ಬಂದಿರು ಹಾದು ಚಿತ್ರಣ ಇರಲಿದೆ. 2 ಸಾವಿರ ಮಂದಿ ದೀಪ ಹಚ್ಚಿ ಶ್ರದ್ಧಾಂಜಲಿ ಸಲ್ಲಿಸಲಾಗುತ್ತಿದೆ. ಇದನ್ನೂ ಓದಿ: ನಾಳೆ ಪುನೀತ್ 11ನೇ ದಿನದ ಪುಣ್ಯಾರಾಧನೆ – ಅಪ್ಪು ಕುಟುಂಬಸ್ಥರಿಂದ ಭಾರೀ ಸಿದ್ಧತೆ
ಪುನೀತ್ ರಾಜ್‍ಕುಮಾರ್ ಅವರ ಕುಟುಂಬದ ಒಪ್ಪಿಗೆಯನ್ನು ಪಡೆದುಕೊಂಡು ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಇಲ್ಲಿ ಅಭಿಮಾನಿಗಳಿಗೆ ಅವಕಾಶ ಇರುವುದಿಲ್ಲ, ಕೆಲವು ಸೀಟ್‍ಗಳು ಮಾತ್ರ ಇರುವುದರಿಂದ ನಾವು ಸಿನಿಮಾ ಕಲಾವಿದರು, ಗಣ್ಯರು, ನಿರ್ಮಾಪಕರು, ನಿರ್ದೇಶಕರು, ಹೀಗೆ ಹಲವರ ಜೊತೆಗೂಡಿ ಕಾರ್ಯಕ್ರಮದ ನಡೆಸಲಿದ್ದೇವೆ ಎಂದು ಜಯರಾಜ್ ಫಿಲ್ಮ್ ಚೇಂಬರ್ ಅವರು ಹೇಳಿದ್ದಾರೆ.