ಬಾಗಲಕೋಟೆ: ಜಿಲ್ಲೆಯ ಹೊರವಲಯದಲ್ಲಿ ತೋಟಗಾರಿಕೆ ಮೇಳವನ್ನ ಹಮ್ಮಿಕೊಳ್ಳಲಾಗಿದ್ದು, ಫಲ ಪುಷ್ಪ ಪ್ರದರ್ಶನದಲ್ಲಿ ಪುನೀತ್ ರಾಜ್‍ಕುಮಾರ್ ರಂಗೋಲಿಯಲ್ಲಿ ಅರಳಿದ ಕಲಾಕೃತಿ ಅತ್ಯಾಕರ್ಷಕವಾಗಿ ಎಲ್ಲರ ಗಮನ ಸೆಳೆಯುತ್ತಿದೆ.
Advertisement
ಹುಬ್ಬಳ್ಳಿಯ ರಂಗೋಲಿ ಕಲಾವಿದ ಶಿವಲಿಂಗಪ್ಪ ಬಡಿಗೇರ್ ಅವರು ತಮ್ಮ ಕೈಚಳಕದಿಂದ ನಾಲ್ಕು ಗಂಟೆ ಕಾಲ ಬಿಡಿಸಿದ ಅಪ್ಪು ಕಲಾಕೃತಿ ಚಿತ್ರ ಎಲ್ಲರ ಆಕರ್ಷಣ ಕೇಂದ್ರ ಬಿಂದುವಾಗಿದೆ. ಯುವಕ, ಯುವತಿಯರು, ಚಿಕ್ಕ-ಚಿಕ್ಕ ಮಕ್ಕಳು ಫಲಪುಷ್ಪ ಪ್ರದರ್ಶನದಲ್ಲಿ ರಂಗೋಲಿಯಲ್ಲಿ ಅರಳಿದ ಅಪ್ಪು ಚಿತ್ರದ ಮುಂದೆ ನಿಂತು ಸೆಲ್ಫಿ ತೆಗೆದುಕೊಂಡು ಸಂಭ್ರಮಿಸುತ್ತಿದ್ದಾರೆ. ಇದನ್ನೂ ಓದಿ: ಪ್ರಕೃತಿ ಸೌಂದರ್ಯ ಸವಿಯಿರಿ: ಬೆಂಗಳೂರು-ಶಿವಮೊಗ್ಗ ರೈಲಿಗೆ ವಿಸ್ಟಾಡಾಮ್ ಕೋಚ್
Advertisement
Advertisement
ಶಿವಲಿಂಗಪ್ಪ ಬಡಿಗೇರ ಈ ಕುರಿತು ಮಾತನಾಡಿ, ಹಲವಾರು ತೋಟಗಾರಿಕೆ ಮೇಳದಲ್ಲಿ ಕವಿಗಳು, ಸಾಹಿತಿಗಳು ಅನೇಕ ಚಿತ್ರಗಳನ್ನು ರಂಗೋಲಿ ಮೂಲಕ ಬಿಡಿಸಿ ಪ್ರದರ್ಶನ ಮಾಡಿದ್ದೇನೆ. ಈ ನಡುವೆ ನಮ್ಮನ್ನ ಅಗಲಿದ ಪುನೀತ್ ಅವರ ಚಿತ್ರವನ್ನು ಈ ಬಾಗಲಕೋಟೆ ತೋಟಗಾರಿಕೆ ಮೇಳದಲ್ಲಿ ರಂಗೋಲಿಯಲ್ಲಿ ಬಿಡಿಸಿರುವುದು ನನ್ನ ಸೌಭಾಗ್ಯ ಎಂದರು.
Advertisement
ಹೂ ಮನಸ್ಸಿನ ಮನುಷ್ಯನನ್ನು ತೋಟಗಾರಿಕೆ ಮೇಳದ ಫಲಪುಷ್ಪ ಪ್ರದರ್ಶನದಲ್ಲಿ ಜನಮೆಚ್ಚುಗೆ ಪಡೆದು ಎಲ್ಲರೂ ಅವರ ರಂಗೋಲಿ ಭಾವಚಿತ್ರದ ಮುಂದೆ ಸೆಲ್ಫಿ ತೆಗೆದುಕೊಳ್ಳುತ್ತಿರುವುದನ್ನು ನೋಡುತ್ತಿದ್ದರೆ ನನಗೆ ಹೆಮ್ಮೆ ಎನಿಸುತ್ತದೆ. ಜೊತೆಗೆ ಮಹಾನ್ ನಟನನ್ನು ಕಳೆದುಕೊಂಡಿದ್ದಕ್ಕೆ ದುಃಖವೂ ಆಗುತ್ತಿದೆ. ಪುನೀತ್ ಮೃತಪಟ್ಟಿಲ್ಲ ಅವರು ಚಿತ್ರದ ಮೂಲಕ ಜೀವಂತವಾಗಿದ್ದಾರೆ ಎಂದು ನೆನೆದರು. ಇದನ್ನೂ ಓದಿ: ಬೆಂಗಳೂರಿಗರೇ ಗಮನಿಸಿ, ಪೀಣ್ಯ ಫ್ಲೈಓವರ್ ಸಂಚಾರ ಬಂದ್ – ಬದಲಿ ಮಾರ್ಗ ಇಲ್ಲಿದೆ
ಮೂರು ದಿನಗಳ ಕಾಲ ನಡೆಯಲಿರುವ ಈ ಮೇಳದಲ್ಲಿ ವಿವಿಧ ಫಲಪುಷ್ಪ ಪ್ರಾತ್ಯಕ್ಷಿಕೆಗಳು ನಡೆಯಲಿದೆ.