ಬೆಂಗಳೂರು: ಕೆಲ ಸಂದರ್ಭಗಳಲ್ಲಿ ಸೆಲೆಬ್ರಿಟಿಗಳ ನಡುವೆ ಅನಿರೀಕ್ಷಿತ ಭೇಟಿ ಸಂಭವಿಸುತ್ತೆ. ಹಾಗೆ ಸಿಕ್ಕಾಗ ಯಾವ ಕ್ಷೇತ್ರದವರೇ ಆಗಿದ್ದರೂ ಪರಸ್ಪರ ಸೆಲ್ಫಿ ತೆಗೆದುಕೊಂಡು ಸಂಭ್ರಮಿಸುತ್ತಾರೆ. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರಿಗೂ ಕೂಡಾ ಚೆನ್ನೈ ಏರ್‌ಪೋರ್ಟನಲ್ಲಿ ಅಂಥಾದ್ದೇ ಒಂದು ವಿಶೇಷ ವ್ಯಕ್ತಿತ್ವ ಹಠಾತ್ತನೆ ಎದುರಾಗಿದೆ!
ಕೆಲಸದ ನಿಮಿತ್ತವಾಗಿ ಚೆನ್ನೈಗೆ ತೆರಳಿದ್ದ ಪುನೀತ್ ವಾಪಾಸಾಗುವಾಗ ಏರ್ ಪೋರ್ಟಿನಲ್ಲಿ ಅನಿಲ್ ಕುಂಬ್ಳೆ ಕಾಣಿಸಿಕೊಂಡಿದ್ದಾರೆ. ಸ್ವತಃ ಪುನೀತ್ ಅವರೇ ಬಳಿ ಸಾಗಿ ಮಾತಾಡಿಸಿದಾಗ ಹೌಹಾರಿದ ಕುಂಬ್ಳೆ ಆಲಿಂಗಿಸಿಕೊಂಡು ಉಭಯ ಕುಶಲೋಪರಿ ವಿಚಾರಿಸಿದ್ದಾರೆ. ನಂತರ ಸೆಲ್ಫಿ ತೆಗೆದುಕೊಂಡು ಸಂಭ್ರಮಿಸಿದ್ದಾರೆ.
What a surprise! Wonderful to meet #Puneet Rajkumar at Chennai airport! pic.twitter.com/D6JHoAFfDM
— Anil Kumble (@anilkumble1074) August 13, 2018
ನಂತರ ಈ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ ಲೋಡ್ ಮಾಡಿದ ಪುನೀತ್ ಅನಿಲ್ ಕುಂಬ್ಳೆಯವರನ್ನು ಭೇಟಿ ಮಾಡಿದ ಬಗ್ಗೆ ಖುಷಿಯಿಂದ ಹೇಳಿಕೊಂಡರೆ, ಅತ್ತ ಕುಂಬ್ಳೆ ಸಹ ಈ ಫೋಟೋ ಜಾಹೀರು ಮಾಡಿ ಪವರ್ ಸ್ಟಾರ್ ಭೇಟಿಯ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ್ದಾರೆ.
ವಿಶೇಷವೆಂದರೆ ಈ ಭೇಟಿ ಅನಿರೀಕ್ಷಿತವಾಗಿದ್ದರೂ ಅನಿಲ್ ಕುಂಬ್ಳೆ ಮತ್ತು ಪುನೀತ್ ರಾಜ್ ಕುಮಾರ್ ಕಪ್ಪು ಬಣ್ಣದ ಡ್ರೆಸ್ ಮೂಲಕ ಕಾಕತಾಳೀಯವೆಂಬಂತೆ ಕಂಗೊಳಿಸಿದ್ದಾರೆ!
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
https://www.instagram.com/p/Bma_EytAeZO/?hl=en&taken-by=puneethrajkumar.official