ರಾಯಚೂರು: ಪುನೀತ್ ರಾಜ್‍ಕುಮಾರ್ ಅವರು ರಾಯರ ಸನ್ನಿಧಿಗೆ ಭೇಟಿ ನೀಡಿದ್ದ ವೇಳೆ ನಡೆದಿರುವ ಒಂದು ಘಟನೆಯ ಕುರಿತು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಯಾಗುತ್ತಿದೆ.
ಅಪ್ಪು ರಾಯರ ಸನ್ನಿದಾನಕ್ಕೆ ಭೇಟಿ ನೀಡಿದ್ದ ವೇಳೆ ಅಪ್ಪು ಮಾತನಾಡುತ್ತಿದ್ದಾಗ ರಾಯರ ಮೂರ್ತಿ ಮತ್ತು ವೀಣೆ ಸ್ವಲ್ಪ ಅಲುಗಾಡಿತ್ತು. ನಾನು ಮುಂದಿನ ಬಾರಿ ಬರುತ್ತೇನೆ ಎಂದು ಹೇಳುವಾಗಲೇ ಮೂರ್ತಿ ಅಲುಗಾಡಿದ್ದು, ರಾಯರು ನೀಡಿದ ಮುನ್ಸೂಚನೆ ಎಂಬ ಅಭಿಪ್ರಾಯವನ್ನು ಅಭಿಮಾನಿಗಳು ವ್ಯಕ್ತಪಡಿಸುತ್ತಿದ್ದಾರೆ. ಇದನ್ನೂ ಓದಿ: ನನ್ನ ಮಗುವನ್ನು ಕಳೆದುಕೊಂಡಿದ್ದೇನೆ – ಬಿಕ್ಕಿ ಬಿಕ್ಕಿ ಅತ್ತ ಶಿವಣ್ಣ
View this post on Instagram
ಮಂತ್ರಾಲಯ ರಾಯರ ಮಠಕ್ಕೂ ಪುನೀತ್ ರಾಜಕುಮಾರ ಕುಟುಂಬಕ್ಕೂ ಅವಿನಾಭಾವ ಸಂಬಂಧವಿದೆ. ಕೊನೆಯದಾಗಿ ಪುನೀತ್ ರಾಜಕುಮಾರ 2021 ಏಪ್ರಿಲ್5 ರಂದು ಯುವರತ್ನ ಸಿನೆಮಾ ಯಶಸ್ಸು ಕಾಣುತ್ತಿದ್ದ ಹಿನ್ನೆಲೆ ಸಿನಿ ತಂಡದೊಂದಿಗೆ ಮಂತ್ರಾಲಯಕ್ಕೆ ಭೇಟಿ ನೀಡಿ ರಾಯರ ದರ್ಶನ ಪಡೆದಿದ್ದರು. ಇದನ್ನೂ ಓದಿ: ಪುನೀತ್ ನೆನಪು ಮಗಳಿಗೆ ಕಾಡುತ್ತಿದೆ: ರಮೇಶ್ ಅರವಿಂದ್
ಅದಕ್ಕೂ ಮುನ್ನ 2020 ಮಾರ್ಚ್ 2ರಂದು ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ವಧರ್ಂತಿ ಉತ್ಸವ ಹಿನ್ನೆಲೆ ಶ್ರೀ ಮಠಕ್ಕೆ ಆಗಮಿಸಿದ್ದ ಪುನೀತ್ ಭಾವುಕರಾಗಿ ಮಾತನಾಡಿದ್ದರು. ತಮ್ಮ ನೆನಪುಗಳನ್ನ ಬಿಚ್ಚಿಟ್ಟಿದ್ದರು. ವೇದಿಕೆ ಮೇಲೆ ರಾಯರ ಹಾಡು ಹೇಳಿದ ಪುನೀತ್ ರಾಯರಿಗೆ ತಮ್ಮ ಭಕ್ತಿ ಸಮರ್ಪಿಸಿದ್ದರು. ಗುರು ವೈಭವೋತ್ಸವದ ಕೊನೆಯ ದಿನದ ಸಮಾರಂಭದಲ್ಲಿ ಪುನೀತ್ ರಾಜಕುಮಾರ್‍ರನ್ನ ಸನ್ಮಾನಿಸಲಾಗಿತ್ತು. ಇದನ್ನೂ ಓದಿ: ಮಣ್ಣಲ್ಲಿ ಮಣ್ಣಾದ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್
ಆರಾಧನಾ ವೇಳೆ ಮಂತ್ರಾಲಯಕ್ಕೆ ಆಗಮಿಸಿ ಮೂರು ಹಾಡುಗಳನ್ನ ಹಾಡುವುದಾಗಿ ಪುನೀತ್ ಹೇಳಿದ್ದರು. ಆದರೆ ಕೊರೊನಾ ಲಾಕ್‍ಡೌನ್ ಕಾರಣಕ್ಕೆ ಆರಾಧನೆ ಕಾರ್ಯಕ್ರಮವನ್ನ ಸರಳವಾಗಿ ಆಚರಿಸಿದ್ದರಿಂದ ಪುನೀತ್ ಮಂತ್ರಾಲಯಕ್ಕೆ ಬಂದಿರಲಿಲ್ಲ. ಸಾವಿರಾರು ಅಭಿಮಾನಿಗಳನ್ನ ಹೊಂದಿರುವ ಪುನೀತ್ ಈಗ ನೆನಪು ಮಾತ್ರ.