ಬೆಂಗಳೂರು: ನಾನು ಒಬ್ಬ ನಟನಾಗಿ ಕಲೆಯ ಜೊತೆ ಗುರುತಿಸಿಕೊಳುತ್ತೇನೆ ಹೊರತು ರಾಜಕಾರಣದ ಜೊತೆಗಲ್ಲ. ದೇವೇಗೌಡರ ಕುಟುಂಬ ಹಾಗೂ ಅಂಬಿ ಕುಟುಂಬ ನಮ್ಮ ಕುಟುಂಬ ಹಾಗೆ. ಇಬ್ಬರೂ ನಮ್ಮ ಹಿತೈಷಿಗಳೇ ಆಗಿದ್ದು, ಇಬ್ಬರಿಗೂ ಒಳ್ಳೆಯದಾಗಲಿ ಎಂದು ನಟ ಪುನೀತ್ ರಾಜ್‍ಕುಮಾರ್ ಹೇಳಿದ್ದಾರೆ.
ಕನ್ನಡ ಚಿತ್ರರಂಗ ಸುಮಲತಾಗೆ ಬೆಂಬಲ ಕೊಡುತ್ತಿದೆ ಎಂಬ ಸುದ್ದಿ ಹಿನ್ನೆಲೆ ಪುನೀತ್ ರಾಜ್‍ಕುಮಾರ್ ಅವರು ಈ ಪತ್ರವನ್ನು ಬರೆದಿದ್ದಾರೆ. ಆ ಮೂಲಕ ನನ್ನ ಹೆಸರನ್ನು ಚುನಾವಣೆಗೆ, ರಾಜಕಾರಣಕ್ಕೆ ಸಂಬಂಧಿಸಬೇಡಿ ಎಂದು ಪತ್ರದಲ್ಲಿ ಸ್ಪಷ್ಟನೆ ನೀಡಿ ಅಭಿಮಾನಿಗಳಿಗೆ ಸಂದೇಶ ರವಾನಿಸಿದ್ದಾರೆ.
An important information to all of you ???? pic.twitter.com/a6fIMWyPBF
— Puneeth Rajkumar (@PuneethRajkumar) March 20, 2019
ಪತ್ರದಲ್ಲಿ ಏನಿದೆ?
ಎಲ್ಲರಿಗೂ ನನ್ನ ನಮಸ್ಕಾರ.. ನನಗು ರಾಜಕಾರಣಕ್ಕೂ ಯಾವುದೇ ಸಂಬಂಧ ಇಲ್ಲ ಎಂಬುವುದು ನಿಮಗೆ ತಿಳಿದಿರುವ ವಿಚಾರ. ನಾನು ಒಬ್ಬ ನಟನಾಗಿ ನನ್ನನ್ನು ಕಲೆಯ ಜೊತೆಗೆ ಗುರುತಿಸಿಕೊಳ್ಳುತ್ತೇನೆ ಹೊರತು ರಾಜಕಾರಣದಲಲ್ಲ..
ನಾನು ಹೇಳ ಬಯಸುವ ವಿಚಾರವೇನೆಂದರೆ ಮತ ಚಲಾಯಿಸುವುದು ಪ್ರತಿಯೊಬ್ಬರ ನಾಗರೀಕರ ಕರ್ತವ್ಯ ಹಾಗು ಅವರ ಆಯ್ಕೆಗೆ ಸಂಬಂಧ ಪಟ್ಟಿದ್ದು. ಅದನ್ನು ಈ ದೇಶದ ಹಾಗು ಈ ನಾಡಿನ ನಾಗರೀಕನಾಗಿ ನಾನು ಗೌರವಿಸುತ್ತೇನೆ. ಕನ್ನಡ ಜನತೆಗೆ ಹಾಗು ನಮ್ಮ ಅಭಿಮಾನಿಗಳಿಗೆ ಅವರ ಮತವನ್ನು ಪ್ರಬುದ್ಧವಾಗಿ ಚಲಾಯಿಸಿ ಎಂದು ಕೇಳಿಕೊಂಡಿದ್ದೇನೆ ಹೊರತು ಯಾವುದೇ ಪಕ್ಷ ಹಾಗೂ ವ್ಯಕ್ತಿಗೆ ಎಂದಿಗೂ ಸೂಚಿಸಿರುವುದಿಲ್ಲ.
ಗೌರವಾನ್ವಿತ ದೇವೇಗೌಡರ ಕುಟುಂಬವು ಹಾಗು ಅಂರೀಶ್ ರವರ ಕುಟುಂಬವು ನಮ್ಮ ಕುಟುಂಬದ ಹಾಗೆ, ಇಬ್ಬರು ನಮ್ಮ ಹಿತೈಷಿಗಳೇ. ಇಬ್ಬರಿಗೂ ಒಳ್ಳೆದಾಗಲಿ, ಆ ಭಗವಂತ ನಿಮಗೆ ಜನಸೇವೆ ಮಾಡುವ ಶಕ್ತಿ ಇನ್ನಷ್ಟು ಕೊಡಲಿ ಎಂದು ಪ್ರಾರ್ಥಿಸುತ್ತ ನನ್ನ ಹೆಸರನ್ನು ಚುನಾವಣೆಗೆ ಹಾಗು ರಾಜಕಾರಣಕ್ಕೆ ಸಂಬಂಧಿಸಬೇಡಿ ಎಂದು ಎಲ್ಲರಲ್ಲೂ ವಿನಂತಿಸಿ ಕೊಳ್ಳುತ್ತೇನೆ ಎಂದು ತಿಳಿಸಿದ್ದಾರೆ.