CinemaKarnatakaLatestLeading NewsMain PostSandalwood

‘ಕರ್ನಾಟಕ ರತ್ನ’ ಪ್ರಶಸ್ತಿ ಪಡೆದ 9ನೇ ರತ್ನ ಪುನೀತ್ ರಾಜ್ ಕುಮಾರ್

ಪುನೀತ್ ರಾಜ್ ಕುಮಾರ್ (Puneeth Rajkumar) ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿಯನ್ನು ಕರ್ನಾಟಕ ಸರಕಾರ ಇಂದು ಪ್ರದಾನ ಮಾಡಲಾಗುತ್ತಿದೆ. ಅತ್ಯುನ್ನತ ನಾಗರಿಕ ಪ್ರಶಸ್ತಿ ಇದಾಗಿದ್ದು, ಈವರೆಗೂ ಕರ್ನಾಟಕದಲ್ಲಿ ಎಂಟು ಜನರಿಗೆ ನೀಡಲಾಗಿದೆ. ಈ ಗೌರವಕ್ಕೆ ಪಾತ್ರರಾಗುತ್ತಿರುವ 9ನೇ ರತ್ನ ಪುನೀತ್ ರಾಜ್ ಕುಮಾರ್ ಎನ್ನುವುದು ವಿಶೇಷ. ಅಲ್ಲದೇ ಮರಣೋತ್ತರ ಪ್ರಶಸ್ತಿ ಪಡೆಯುತ್ತಿರುವ ಮೊದಲ ರತ್ನ ಇವರಾಗಿದ್ದಾರೆ.

ಯಾವುದೇ ಕ್ಷೇತ್ರದಲ್ಲಿ ಅಸಾಧಾರಣ ಕೊಡುಗೆಯನ್ನು ಪರಿಗಣಿಸಿ ಕರ್ನಾಟಕ ಸರಕಾರ ರಾಜ್ಯದ ಅತ್ಯುನ್ನತ ನಾಗರಿಕ ಪ್ರಶಸ್ತಿ (Award) ಇದಾಗಿದ್ದು, ಪುನೀತ್ ಅವರಿಗೆ ಸಿನಿಮಾ ಮತ್ತು ಸಮಾಜ ಸೇವೆಯನ್ನು ಪರಿಗಣಿಸಿ ಈ ಪ್ರಶಸ್ತಿ ನೀಡಲಾಗುತ್ತಿದೆ. ಸಿನಿಮಾ ರಂಗಕ್ಕೆ ಈವರೆಗೂ ಎರಡು ಪ್ರಶಸ್ತಿಗಳು ಬಂದಿದ್ದು, 1992ರಲ್ಲಿ ಮೊದಲ ಬಾರಿಗೆ ಡಾ.ರಾಜ್ ಕುಮಾರ್ ಪಡೆದರೆ, 2022ರಲ್ಲಿ ಡಾ.ರಾಜ್ ಪುತ್ರ ಪುನೀತ್ ರಾಜ್ ಕುಮಾರ್ ಕರ್ನಾಟಕ ರತ್ನಕ್ಕೆ ಆಯ್ಕೆಯಾಗಿದ್ದರು. ಇದನ್ನೂ ಓದಿ:ಖಾಸಗಿ ವಿಮಾನ ಖರೀದಿಸಿದ್ರಾ ರಿಷಬ್ ಶೆಟ್ಟಿ? ‘ಬಡವ್ರ ಮಕ್ಕಳು ಬೆಳಿಬೇಕು’ ಟ್ರೋಲ್

ದೇಶದಲ್ಲಿ ಭಾರತ ರತ್ನವು ಅತ್ಯುನ್ನತ ನಾಗರಿಕ ಪ್ರಶಸ್ತಿಯಾದರೆ, ಕರ್ನಾಟಕ ಸರಕಾರವು ಕರ್ನಾಟಕ ರತ್ನ (Karnataka Ratna) ಪ್ರಶಸ್ತಿಯನ್ನು ಅತ್ಯುನ್ನತ ನಾಗರಿಕ ಪ್ರಶಸ್ತಿ ಎಂದು 1992ರಲ್ಲಿ ಘೋಷಣೆ ಮಾಡಿತು. ಈ ಪ್ರಶಸ್ತಿಯು 50 ಗ್ರಾಮ್ ತೂಕದ ಚಿನ್ನದ ಪದಕ, ಸನ್ಮಾನ ಪತ್ರ, ನೆನಪಿನ ಕಾಣಿಕೆ ಹಾಗೂ ಒಂದು ಶಾಲನ್ನು ಒಳಗೊಂಡಿದೆ. ಪುನೀತ್ ರಾಜ್ ಕುಮಾರ್ ಅವರಿಗೆ ಸರಕಾರವು ಇಂತಹ ಗೌರವವನ್ನು 16 ನವೆಂಬರ್ 2021ರಲ್ಲಿ ಘೋಷಣೆ ಮಾಡಲಾಯಿತು.

ಈವರೆಗೂ ಸಾಹಿತ್ಯ ಸೇವೆಗಾಗಿ ಕುವೆಂಪು, ಸಿನಿಮಾಗಾಗಿ ಡಾ.ರಾಜ್ ಕುಮಾರ್ (Rajkumar), ರಾಜಕೀಯ ಕ್ಷೇತ್ರದಲ್ಲಿಯ ಸಾಧನೆಗಾಗಿ ಎಸ್.ನಿಜಲಿಂಗಪ್ಪ, ವಿಜ್ಞಾನ ಕ್ಷೇತ್ರದ ಸಾಧನೆಗಾಗಿ ಸಿ.ಎನ್.ಆರ್.ರಾವ್, ಸಂಗೀತ ಸಾಧನೆಗಾಗಿ ಭೀಮಸೇನ್ ಜೋಷಿ, ಸಮಾಜಸೇವೆಗಾಗಿ ಸಿದ್ಧಗಂಗಾ ಮಠದ ಶಿವಕುಮಾರ ಮಹಾಸ್ವಾಮಿಗಳು ಹಾಗೂ ಧರ್ಮಸ್ಥಳದ ವೀರೇಂದ್ರ ಹೆಗ್ಗಡೆ  ಈ ಗೌರವವನ್ನು ಪಡೆದುಕೊಂಡಿದ್ದಾರೆ.

Live Tv

Leave a Reply

Your email address will not be published. Required fields are marked *

Back to top button