ಮೈಸೂರಿನ ಐತಿಹಾಸಿಕ ಜಂಬೂ ಸವಾರಿಗೆ ಕ್ಷಣಗಣನೆ ಶುರುವಾಗಿದೆ. ವಿಶ್ವವಿಖ್ಯಾತಿ ಜಂಬೂ ಸವಾರಿಯಲ್ಲಿ ನಾನಾ ಇಲಾಖೆಗಳ ಹಾಗೂ ಜಿಲ್ಲೆಗಳ ಸ್ತಬ್ಧ ಚಿತ್ರಗಳು ಮೆರವಣಿಗೆಯಲ್ಲಿ ಇರುತ್ತವೆ. ನಾಡು, ನುಡಿ, ಸಂಸ್ಕೃತಿ, ಸಾಂಸ್ಕೃತಿಕ ರೂಪಕಗಳನ್ನು ಬಿಂಬಿಸುವಂತಹ ಸ್ತಬ್ಧ ಚಿತ್ರಗಳ ಮೆರವಣಿಗೆಗೆ ಇಲ್ಲಿ ಅವಕಾಶ ಕಲ್ಪಿಸಲಾಗುತ್ತದೆ. ಈ ಬಾರಿ ಪುನೀತ್ ರಾಜ್ ಕುಮಾರ್ ಕೂಡ ಸ್ತಬ್ಧ ಚಿತ್ರ ರೂಪದಲ್ಲಿ ಇರಲಿದ್ದಾರೆ.
Advertisement
ಚಾಮರಾಜನಗರವನ್ನು ಪ್ರತಿನಿಧಿಸುವ ಸ್ತಬ್ಧ ಚಿತ್ರದಲ್ಲಿ ಈ ಬಾರಿ ಪುನೀತ್ ರಾಜ್ ಕುಮಾರ್ ಕಾಣಿಸಿಕೊಳ್ಳುತ್ತಿದ್ದು, ಈ ಮೂಲಕ ಮೇರು ನಟನಿಗೆ ಗೌರವ ಸಲ್ಲಿಸಲಾಗುತ್ತಿದೆ. ಡಾ.ರಾಜ್ ಕುಟುಂಬವು ಇದೇ ಭಾಗದವರು ಆಗಿರುವುದರಿಂದ ಜಿಲ್ಲಾಡಳಿತ ಇಂಥದ್ದೊಂದು ನಿರ್ಧಾರ ತಗೆದುಕೊಂಡಿದೆ. ಈ ಬಾರಿಯ ದಸರಾ ಜಂಬೂ ಸವಾರಿ ಮೆರವಣಿಗೆಯಲ್ಲಿ ಪುನೀತ್ ಅವರ ಸ್ತಬ್ಧ ಚಿತ್ರ ಗಮನ ಸೆಳೆಯಲಿದೆ. ಇದನ್ನೂ ಓದಿ:ಮಣಿರತ್ನಂ ನಿರ್ದೇಶನದ ‘ಪೊನ್ನಿಯಿನ್ ಸೆಲ್ವನ್’ ಮೂರು ದಿನದ ಗಳಿಕೆ 230 ಕೋಟಿಗೂ ಅಧಿಕ
Advertisement
Advertisement
ಪುನೀತ್ ರಾಜ್ ಕುಮಾರ್ ಅಗಲಿಕೆ ಇದೇ ತಿಂಗಳು ಒಂದು ವರ್ಷ ಪೂರೈಸುತ್ತಿದೆ. ಈ ಹಿನ್ನೆಲೆಯಲ್ಲಿ ಇಂಥದ್ದೊಂದು ಗೌರವಕ್ಕೆ ಚಾಮರಾಜನಗರ ನಿರ್ಧಾರ ತಗೆದುಕೊಳ್ಳಲಾಗಿದೆ. ಅಲ್ಲದೇ ಪುನೀತ್ ಅವರ ವ್ಯಕ್ತಿತ್ವವನ್ನು ಬಿಂಬಿಸುವಂತಹ ಕೆಲಸವನ್ನೂ ಈ ಸ್ತಬ್ಧ ಚಿತ್ರದ ಮೂಲಕ ಮಾಡಲಾಗಿದೆ. ನಾನಾ ಕಲಾ ಪ್ರಕಾರಗಳ, ಮೇರು ವ್ಯಕ್ತಿಗಳ ಸ್ತಬ್ಧ ಚಿತ್ರಗಳು ಕೂಡ ಈ ಮೆರವಣಿಗೆಯ ಅಂದವನ್ನು ಮತ್ತಷ್ಟು ಹೆಚ್ಚಿಸಲಿವೆ.