ನಿಧನದ ಹಿಂದಿನ ದಿನವೇ ಅಪ್ಪುಗೆ ಕೊಂಚ ಕೈ ಸೆಳೆತ ಇತ್ತು: ಜಯಣ್ಣ

Public TV
2 Min Read
Puneeth Rajkumar 1 1

ಬೆಂಗಳೂರು: ನಿಧನದ ಹಿಂದಿನ ದಿನವೇ ಅಪ್ಪುಗೆ ಕೊಂಚ ಕೈ ಸೆಳೆತ ಇತ್ತು ಎಂದು ನಿರ್ಮಾಪಕ ಜಯಣ್ಣ ಹೇಳಿದ್ದಾರೆ.

ಪಬ್ಲಿಕ್ ಟಿವಿ ಜೊತೆಗೆ ಮಾತನಾಡಿದ ಅವರು, ಅಪ್ಪು ನಿಧನದ ಹಿಂದಿನ ದಿನ ವಜ್ರೇಶ್ವರಿ ಕಂಬೈನ್ಸ್‌ಗೆ ಭೇಟಿಕೊಟ್ಟಿದ್ದರು ಪುನೀತ್ ರಾಜ್‍ಕುಮಾರ್ ಅವರ ನಿಧನದ ದಿನವೇ ಅಪ್ಪುಗೆ ಕೊಂಚ ಕೈ ಸೆಳೆತ ಇತ್ತು. ಗುರುವಾರ ನನ್ನ ಜೊತೆ ಪುನೀತ್ ಮಾತಾಡಿದ್ದರು. ಆಗಲೇ ಅವರಿಗೆ ನೋವು ಕಾಣಿಸಿಕೊಂಡಿರಬಹುದು. ನಿಧನದ ಹಿಂದಿನ ದಿನ ಅಪ್ಪು ನಮ್ಮ ಕಚೇರಿಗೆ ಬಂದು ಮಾತಾಡಿದ್ದರು ಎಂದು ಹೇಳಿದ್ದಾರೆ.

PUNEET

ವರ್ಷಕ್ಕೆ ಎರಡು ಸಿನಿಮಾ ಮಾಡಲು ಒಪ್ಪಿಕೊಂಡಿದ್ದ ಪುನೀತ್ ಅವರಿಗೆ ನಾನು ಎರಡು ವರ್ಷಕ್ಕೆ ಒಂದು ಸಿನಿಮಾ ಮಾಡಿದ್ರೆ ಇಂಡಸ್ಟ್ರಿಗೆ ಕಷ್ಟವಾಗುತ್ತದೆ. ಇನ್ಮುಂದೆ ವರ್ಷಕ್ಕೆ ಎರಡು ಸಿನಿಮಾ ಮಾಡಬೇಕು ಎಂದು ಹೇಳಿದ್ದೆ. ಇನ್ಮುಂದೆ ಎರಡು ಸಿನಿಮಾ ಮಾಡ್ತೀನಿ ಅಂತ ಅಪ್ಪು ಸರ್ ಒಪ್ಪಿಕೊಂಡಿದ್ದರು ಎಂದು ಅಪ್ಪು ಕೊನೆಯ ಬಾರಿ ಮಾತನಾಡಿದ ಕ್ಷಣಗಳನ್ನು ಮೆಲುಕು ಹಾಕಿದ್ದಾರೆ. ಇದನ್ನೂ ಓದಿ: ಚಪ್ಪಲಿ ತೆಗೆದು ಅಭಿಮಾನಿಗಳಿಂದ ಅಪ್ಪುಗೆ ಅಂತಿಮ ನಮನ- ಬಿಬಿಎಂಪಿಯಿಂದ ರಾಶಿ ರಾಶಿ ಸ್ಲಿಪ್ಪರ್ಸ್ ತೆರವು

puneeth rajkumar 1 7

ಅಪ್ಪು ನಮ್ಮೆಲ್ಲರನ್ನು ಅಗಲಿ ಇಂದಿಗೆ ಆರು ದಿನ. ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ಅಪ್ಪು ಸಮಾಧಿ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದೆ. ಬೆಳಗ್ಗೆ 9 ಗಂಟೆಯಿಂದ ಸಂಜೆ 6 ಗಂಟೆವರೆಗೆ ದರ್ಶನಕ್ಕೆ ಅವಕಾಶ ಇರಲಿದೆ. ಬೆಳಗ್ಗೆಯಿಂದಲೇ ಸಾವಿರಾರು ಮಂದಿ ಅಭಿಮಾನಿಗಳು ಅಪ್ಪು ಸಮಾಧಿ ದರ್ಶನ ಪಡೆದು ನಮಿಸಿ ಕಣ್ಣೀರು ಹಾಕುತ್ತಿದ್ದಾರೆ. ಇದನ್ನೂ ಓದಿ: ಅಪ್ಪು ಸಮಾಧಿ ಬಳಿ ನೃತ್ಯ ನಮನ ಸಲ್ಲಿಸಿದ ಪುಟಾಣಿಗಳು

puneeth rajkumar 1 5

ಪುನೀತ್‍ರಾಜ್ ಕುಮಾರ್ ನಿವಾಸಕ್ಕೆ ಭೇಟಿ ನೀಡಿರುವ ತೆಲುಗು ನಟ ರಾಮ್‍ಚರಣ್ ತೇಜ ಅಪ್ಪು ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ. ಬಳಿಕ ಮಾತಾಡಿದ ರಾಮ್‍ಚರಣ್ ಕಣ್ಣೀರಿಟ್ಟಿರು. ಪುನೀತ್ ಬಹಳ ಒಳ್ಳೆಯ ವ್ಯಕ್ತಿ. ಸಾವು ಯಾರಿಗಾದರೂ ಬರುತ್ತದೆ, ಆದರೆ ಪುನೀತ್ ನಮ್ಮನ್ನು ಅಗಲಿರುವುದು ಜೀರ್ಣಿಸಿಕೊಳ್ಳಲಾಗುತ್ತಿಲ್ಲ. ನಮ್ಮ ಮನಗೆ ಅವರು ಬಂದ್ರೂ ನಾವೇ ಅತಿಥಿಗಳು ಅನ್ನೋ ಭಾವನೆ ಬರುವ ರೀತಿ ನಡೆದುಕೊಳ್ಳುತ್ತಿದ್ದರು. ಅಪ್ಪು ಅಷ್ಟು ವಿನಯಶೀಲರು ಎಂದು ರಾಮ್‍ಚರಣ್ ನೆನೆದು ಕಣ್ಣೀರಿಟ್ಟರು. ಇದಾದ ಬಳಿಕ ಶಿವಣ್ಣ ಅವರ ಮನೆಗೂ ರಾಮ್‍ಚರಣ್ ತೇಜ ಭೇಟಿ ನೀಡಿದ್ದರು.

Share This Article
Leave a Comment

Leave a Reply

Your email address will not be published. Required fields are marked *