ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರು ಐಟಿ ದಾಳಿ ಮುಗಿದ ತಕ್ಷಣ ಮನೆಯಿಂದ ಹೊರ ಬಂದು ಅಭಿಮಾನಿಗಳನ್ನು ಮಾತನಾಡಿಸಿ ಹುಬ್ಬಳ್ಳಿಗೆ ತೆರಳಿದ್ದಾರೆ. ಈ ಮಧ್ಯೆ ಮಾಧ್ಯಮದವರು ಐಟಿ ದಾಳಿ ಬಗ್ಗೆ ಪ್ರಶ್ನಿಸಿದ್ದಕ್ಕೆ ಗರಂ ಆಗಿದ್ದಾರೆ.
ಪುನೀತ್ ಮನೆಯಿಂದ ಹೊರ ಬರುತ್ತಿದ್ದಂತೆ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಐಟಿ ದಾಳಿ ನಡೆದ ನಂತರ ನನ್ನ ಯಾವುದೇ ರಿಯಾಕ್ಷನ್ ಇಲ್ಲ. ನಾನು ನಾರ್ಮಲ್ ಆಗಿದ್ದೇನೆ ಅಂದರು. ಇದೇ ವೇಳೆ ಐಟಿ ಅಧಿಕಾರಿಗಳು ನಿಮ್ಮ ದಾಖಲೆಗಳನ್ನು ತೆಗೆದುಕೊಂಡು ಹೋಗಿ ಸೋಮವಾರ ವಿಚಾರಣೆಗೆ ಕರೆದಿದ್ದಾರೆ ಎಂದು ಪ್ರಶ್ನಿಸಿದ್ದಕ್ಕೆ ಆ ವಿಷಯ ನಾನ್ಯಾಕೆ ನಿಮಗೆ ಹೇಳಬೇಕು. ಇದು ಐಟಿ ಅಧಿಕಾರಗಳ ಹಾಗೂ ನನ್ನ ನಡುವೆಯ ವಿಷಯ ಎಂದು ಗರಂ ಆದರು. ಇದನ್ನೂ ಓದಿ: ತೆರಿಗೆ ಇಲಾಖೆಗೆ ನಾವು ನಾಗರಿಕರಾಗಿ ಸಹಕಾರ ನೀಡಿದ್ದೇವೆ – ಪುನೀತ್ ಮೊದಲ ಪ್ರತಿಕ್ರಿಯೆ
Advertisement
Advertisement
ಬಳಿಕ ಪುನೀತ್ ಐಟಿ ಅಧಿಕಾರಿಗಳು ಬಂದು ಅವರ ಕೆಲಸ ಏನು ಅದನ್ನು ಮಾಡಿದ್ದಾರೆ. ಅವರಿಗೆ ನಾವು ಸಹಕರಿಸಿದ್ದೇವೆ. ಐಟಿ ಅಧಿಕಾರಿಗಳು ತುಂಬಾ ಪ್ರೊಫೆಶನಲ್ ಆಗಿ ಕೆಲಸ ಮಾಡಿದ್ದಾರೆ. ಏನೂ ತೊಂದರೆ ಆಗಿಲ್ಲ ಎಂದು ನಗುತ್ತಾ ಪ್ರತಿಕ್ರಿಯಿಸಿದ್ದಾರೆ. ಇದನ್ನೂ ಓದಿ: ರೇಡ್ ಆಗ್ತಿದ್ದಾಗ ಸ್ವಲ್ಪ ಬೇಜಾರ್ ಆಗ್ತಿತ್ತು, ಇರಿಟೇಟ್ ಆದ್ರೂ ಸಹಕಾರ ನೀಡ್ಬೇಕಿತ್ತು- ಶಿವಣ್ಣ
Advertisement
ಇಂದು ಹುಬ್ಬಳ್ಳಿಯ ನೆಹರು ಕ್ರೀಡಾಂಗಣದಲ್ಲಿ ಸಂಜೆ 5 ಗಂಟೆ ಸುಮಾರಿಗೆ ಪುನೀತ್ ಅಭಿನಯದ `ನಟಸಾರ್ವಭೌಮ’ ಸಿನಿಮಾದ ಧ್ವನಿಸುರುಳಿ ಬಿಡುಗಡೆಯಾಗುತ್ತಿದೆ. ಪುನೀತ್ ಮನೆಯ ಐಟಿ ದಾಳಿ ಶುಕ್ರವಾರ ರಾತ್ರಿ ಅಂತ್ಯಗೊಂಡಿರುವ ಹಿನ್ನೆಲೆಯಲ್ಲಿ ಇಂದು ಕಾರ್ಯಕ್ರಮಕ್ಕೆ ಹೋಗಲು ಅಧಿಕಾರಿಗಳು ಅವಕಾಶ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ನಟ ಪುನೀತ್ ಹುಬ್ಬಳ್ಳಿಗೆ ತೆರಳಿದ್ದಾರೆ.