ಅಪ್ಪುವಿನಂತೆ ಸಾವಿನಲ್ಲೂ ಸಾರ್ಥಕತೆ ಮೆರೆದ ಮಾವ ರೇವನಾಥ್

Public TV
1 Min Read
puneeth rajkumar Father in law revanath eye donation

ಬೆಂಗಳೂರು: ಹೃದಯಾಘಾತದಿಂದ ನಿಧನರಾದ ಅಶ್ವಿನಿ ಪುನೀತ್ ರಾಜ್‍ಕುಮಾರ್ ಅವರ ತಂದೆ ರೇವನಾಥ್ ಅವರ ಕಣ್ಣುಗಳನ್ನು ದಾನ ಮಾಡಲಾಗಿದೆ.

ರೇವನಾಥ್ (78) ಅವರು ಪುನೀತ್ ಅವರ ನಿಧನ ನಂತರ ತೀವ್ರ ಒತ್ತಡಕ್ಕೆ ಒಳಗಾಗಿದ್ದರು. ಇಂದು ಹೃದರ್ಯಾಘಾತದಿಂದ ಸಾವನ್ನಪಿದ್ದಾರೆ. ಬೆಂಗಳೂರಿನ ಎಂ.ಎಸ್ ರಾಮಯ್ಯ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ರೇವಾನಾಥ್ ನಿಧನ ಹಿನ್ನೆಲೆ ಕುಟುಂಬಸ್ಥರು ಅವರ ಕಣ್ಣುಗಳನ್ನು ದಾನ ಮಾಡಿದ್ಧಾರೆ.

PUNEETH RAJKUMAR 13

ರೇವನಾಥ್ ಕಣ್ಣು ದಾನ ಪಡೆದು ತೆರಳಿದ ರಾಜ್‍ಕುಮಾರ್ ನೇತ್ರದಾನ ಕೇಂದ್ರದ ಸಿಬ್ಬಂದಿ. ನಾರಾಯಣ್ ನೇತ್ರಾಲಯಕ್ಕೆ ಕಣ್ಣುಗಳನ್ನು ತೆಗೆದುಕೊಂಡು ಹೋಗಿದ್ದಾರೆ. ಅಳಿಯ ಪುನೀತ್ ರಾಜ್‍ಕುಮಾರ್ ಅವರು ಹಾದಿಯಲ್ಲೆ ರೇವನಾಥ್ ಕೂಡ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ. ಎಂಎಸ್ ರಾಮಯ್ಯ ಆಸ್ಪತ್ರೆಗೆ ನಟ ಶ್ರೀ ಮುರುಳಿ, ಶಿವರಾಜ್‌ಕುಮಾರ್ ಹಾಗೂ ಕುಟುಂಬಸ್ಥರು ಬಂದಿದ್ದಾರೆ. ಮೃತದೇಹ ಅಂತಿಮ ದರ್ಶನ ಪಡೆದು ಆಸ್ಪತ್ರೆಯಿಂದ ತೆರಳಿದ್ದಾರೆ. ಇದನ್ನೂ ಓದಿ: ಅಶ್ವಿನಿ ಪುನೀತ್ ರಾಜ್‍ಕುಮಾರ್ ತಂದೆ ಹೃದಯಾಘಾತದಿಂದ ನಿಧನ

puneeth rajkumar 3

ನಟ ಪುನೀತ್ ರಾಜ್‍ಕುಮಾರ್ ದೇಹ ಮಣ್ಣಲ್ಲಿ ಮಣ್ಣಾಗಿರಬಹುದು. ಆದರೆ ಅಪ್ಪು ಎರಡು ನೇತ್ರಗಳು ನಾಲ್ವ ಜೀವಕ್ಕೆ ಬೆಳಕು ನೀಡಿವೆ. ಡಾ. ರಾಜ್ ಕುಮಾರ್ ಅವರ ಹಾದಿಯಂತೆ ಪುನೀತ್ ದಾನ ಮಾಡಿದ ಎರಡು ಕಣ್ಣುಗಳಿಂದ ನಾರಾಯಣ ನೇತ್ರಾಲಯ ನಾಲ್ವರು ದೃಷ್ಟಿ ವಿಕಲಚೇತನರಿಗೆ ಬೆಳಕು ಕೊಡಿಸಿದೆ. ನಟ ಪುನೀತ್ ನಾಲ್ವರ ಕಣ್ಣಲ್ಲಿ ಇರಲಿದ್ದಾರೆ. ಅಪ್ಪು ಎರಡು ನೇತ್ರ ನಾಲ್ವರಿಗೆ ದೃಷ್ಟಿ ನೀಡುವ ಮೂಲಕ ಸಾವಿನಲ್ಲೂ ದಾಖಲೆ ಬರೆದಿದ್ದಾರೆ. ಇವರ ಹಾದಿಯಲ್ಲಿಯೇ ಪುನೀತ್ ರಾಜ್‍ಕುಮಾರ್ ಅವರ ಮಾವ ರೇವನಾಥ್ ಕೂಡಾ ಸಾರ್ಥಕತೆ ಮೆರೆದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *