ಜೇಮ್ಸ್ ಚಿತ್ರ ವೀಕ್ಷಣೆಗೆ ಬರುವವರಿಗೆ ಭರ್ಜರಿ ಬಾಡೂಟ!

Public TV
1 Min Read
The Meat Meal is for those watching the James movie

ಹುಬ್ಬಳ್ಳಿ/ ಕೊಪ್ಪಳ: ಪುನೀತ್ ರಾಜ್‍ಕುಮಾರ್ ಅವರ ಅಭಿಮಾನಿಗಳ ಬಳಗ ಹುಬ್ಬಳ್ಳಿ, ಕೊಪ್ಪಳದಲ್ಲಿ ಜೇಮ್ಸ್ ಸಿನಿಮಾ ವೀಕ್ಷಣೆಗೆ ಬರುವವರಿಗೆ ಭರ್ಜರಿ ಬಾಡೂಟವನ್ನು ಸಿದ್ಧಪಡಿಸಿದ್ದಾರೆ.

The Meat Meal is for those watching the James movie 1

ಹುಬ್ಬಳ್ಳಿ,ಯಲ್ಲಿ ಅಪ್ಪು ಅಭಿಮಾನಿಗಳು ಭಾನುವಾರದ ಬಾಡೂಟವನ್ನು ಆಯೋಜಿಸಿದ್ದಾರೆ. ಪುನೀತ್‍ಗೆ ಬಹಳಷ್ಟು ಇಷ್ಟವಾದ ಉತ್ತರ ಕರ್ನಾಟಕದ ಸಾವಜಿ ಊಟ ವಿತರಣೆ ಮಾಡುತ್ತಿದ್ದಾರೆ. ಪುನೀತ್ ಭಾವಚಿತ್ರಕ್ಕೆ ಪೂಜೆ ಮಾಡಿ ಮಟನ್ ಎಡೆಯಿಟ್ಟ ಇಟ್ಟಿದ್ದಾರೆ. ಪುನೀತ್ ಅಭಿಮಾನಿ ರಾಘು ಮತ್ತು ಸ್ನೇಹಿತರಿಂದ ಜೇಮ್ಸ್ ಚಿತ್ರ ವೀಕ್ಷಣೆ ಬಂದ ಪ್ರೇಕ್ಷಕರಿಗೆ ಮಟನ್ ಊಟವನ್ನು ಹಾಕಲಾಗಿದೆ. ಅಪ್ಸರಾ ಟಾಕೀಸ್ ಆವರಣದಲ್ಲಿ ಊಟದ ವ್ಯವಸ್ಥೆ ಮಾಡಲಾಗಿದೆ.

The Meat Meal is for those watching the James movie 2

ಕೊಪ್ಪಳದ ಗಂಗಾವತಿಯಲ್ಲಿ ಪುನೀತ್ ರಾಜ್‍ಕುಮಾರ್ ಅಭಿಮಾನಿಗಳ ಬಳಗ, ಗಂಗಾವತಿ ನಗರದ ಶಿವೆ ಥೇಟರ್ ಮುಂಭಾಗದಲ್ಲಿ 3 ಲಕ್ಷ ರೂಪಾಯಿ ವೆಚ್ಚದಲ್ಲಿ ಬಾಡೂಟ ಆಯೋಜನೆ ಮಾಡಿದ್ದಾರೆ. ಜೇಮ್ಸ್ ಚಿತ್ರ ವೀಕ್ಷಣೆಗೆ ಬರುವವರಿಗೆ 200 ಕೆಜಿ ಚಿಕನ್ ಮಸಾಲಾ, 2.25 ಕ್ವಿಂಟಲ್ ಬಗಾರಖಾನ್ ರೈಸ್ ತಯಾರಿಸಲಾಗಿದೆ. 3 ರಿಂದ 4 ಸಾವಿರ ಜನರಿಗೆ ಚಿಕನ್ ಊಟದ ವ್ಯವಸ್ಥೆ ಮಾಡಿದ್ದಾರೆ. ಮಾಂಸಹಾರಿಗಳಿ ಮಾತ್ರವಲ್ಲದೆ ಸಸ್ಯಹಾರಿಗಳೂ ಸಹ ಊಟದ ವ್ಯವಸ್ಥೆ ಮಾಡಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *