ಬೆಂಗಳೂರು: ಸ್ಯಾಂಡಲ್‍ವುಡ್ ನಟ ಪುನೀತ್ ರಾಜ್‍ಕುಮಾರ್ ಅವರ ಅಭಿಮಾನಿಯೊಬ್ಬರು ಫ್ರೈಡ್ ರೈಸ್, ಗೋಬಿ ಮಂಚೂರಿಯನ್ನು ಬದುಕಿದ್ದಾಗ ಕೊಡಲಾಗಲಿಲ್ಲ, ಈಗ ತೆಗೆದುಕೊಂಡು ಬಂದಿದ್ದೇನೆ ಎಂದು ಅಭಿಮಾನವನ್ನು ತೋರಿಸಿದ್ದಾರೆ.
ಯಲಹಂಕದಿಂದ ಬಂದಿರುವ ಅಭಿಮಾನಿ, ಪುನೀತ್ ಅವರ ಅಂಗ ರಕ್ಷಕ ಚಿಕ್ಕಣ್ಣಗೆ ಆನಂದ್ ಪರಿಚಯಸ್ಥರಾಗಿದ್ದಾರೆ. ಇವರಿಗೆ ಪುನೀತ್ ಅವರನ್ನು ಭೇಟಿಯಾಗುವ ಆಸೆ ಇತ್ತು. ಅದು ಈಡೇರಿರಲಿಲ್ಲ. ಹೀಗಾಗಿ ಅವರ ಸಾವಿನ ಸುದ್ದಿ ಕೇಳಿ ಫ್ರೈಡ್ ರೈಸ್, ಗೋಬಿ ಮಂಚೂರಿಯನ್ನು ತಂದಿದ್ದರು. ಇದನ್ನೂ ಓದಿ: ಚಿಕ್ಕಮಗಳೂರಿನ ನೇಚರ್, ಕಾಫಿ ಅಂದ್ರೆ ಪುನೀತ್‍ಗೆ ತುಂಬಾ ಇಷ್ಟ: ಭರತ್
ಆನಂದ್ ಫ್ರೈಡ್ ರೈಸ್, ಗೋಬಿ ವ್ಯಾಪಾರಿಯಾಗಿದ್ದಾರೆ. ಚಿಕ್ಕಣ್ಣನಿಗೆ, ಆನಂದ್ ಕೇಳಿದ್ದರು ಪುನೀತ್ ರನ್ನ ಪರಿಚಯ ಮಾಡಿಸಬೇಕು ಎಂದು. ಪುನೀತ್‍ಗೆ ಫ್ರೈಡ್ ರೈಸ್, ಗೋಬಿ ಮಂಚೂರಿ ಇಷ್ಟ ಅಂದಿದ್ದರು. ಬದುಕಿದ್ದಾಗ ಕೊಡಲಾಗಾಲಿಲ್ಲ. ಈಗ ತೆಗದುಕೊಂಡು ಬಂದಿದ್ದೇನೆ ಎಂದು ಹೇಳುತ್ತಾ ಆನಂದ್ ಭಾವುಕರಾಗಿದ್ದಾರೆ. ಇದನ್ನೂ ಓದಿ: ಅಪ್ಪು ಅಗಲಿಕೆಗೆ ಮಂತ್ರಾಲಯ ಶ್ರೀಗಳಿಂದ ಸಂತಾಪ
ಜನ ಮೆಚ್ಚುವ ಸಿನಿಮಾ ಹಾಗೂ ಯುವಕರಿಗೆ ಅಡ್ವೈಸ್ ಮಾಡುವಂತಹಾ ಸಿನಿಮಾ ಮಾಡಬೇಕು ಎಂಬುದು ಪುನೀತ್ ರಾಜ್‍ಕುಮಾರ್ ಅವರ ಕನಸಾಗಿತ್ತು. ಅವರಿಗೆ ಚಿಕ್ಕಮಗಳೂರಿನ ನೇಚರ್, ಕಾಫಿ ಎಂದರೆ ತುಂಬಾ ಇಷ್ಟ ಎಂದು ಅವರ ಸ್ನೇಹಿತ ಹಾಗೂ ಸಂಬಂಧಿ ಭರತ್ ಪಬ್ಲಿಕ್ ಟಿವಿ ಜೊತೆ ಪುನೀತ್ ಜೊತೆಗಿನ ಆತ್ಮೀಯತೆಯನ್ನು ಮೆಲುಕು ಹಾಕಿದ್ದಾರೆ.