-1 ನಿಮಿಷ 20 ಸೆಕೆಂಡ್ ಗಂಧದ ಗುಡಿ ಟೀಸರ್‌ನಲ್ಲಿ ಅಪ್ಪು
ಬೆಂಗಳೂರು: ಪಾರ್ವತಮ್ಮ ರಾಜ್‍ಕುಮಾರ್ ಹುಟ್ಟುಹಬ್ಬದಂದೆ ದಿ. ನಟ ಪುನೀತ್ ರಾಜ್‍ಕುಮಾರ್ ಅವರ ಕನಸಿನ ಗಂಧದಗುಡಿ ಸಾಕ್ಷ್ಯಚಿತ್ರದ ಟೈಟಲ್ ಟೀಸರ್ ರಿಲೀಸ್ ಆಗಿದೆ.
ನ.1ರಂದು ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಅದರ ಟೈಟಲ್ ಟೀಸರ್ ಲಾಂಚ್ ಮಾಡಬೇಕು ಎಂಬುದು ಅವರ ಪುನೀತ್ ಅವರ ಕನಸಾಗಿತ್ತು. ಆದರೆ ಅದಕ್ಕೂ ಮುನ್ನವೇ ಅವರು ನಿಧನರಾಗಿದ್ದು ತೀವ್ರ ನೋವಿನ ಸಂಗತಿ. ಇಂದು (ಡಿ.6) ಸಾಕ್ಷ್ಯಚಿತ್ರದ ಶೀರ್ಷಿಕೆ ಟೀಸರ್ ಅನಾವರಣ ಮಾಡಲಾಗಿದೆ.
ಗಂಧದ ಗುಡಿ ಚರಿತ್ರೆಯನ್ನು ಮರುಕಳಿಸುವಂತಿದೆ ಈ ಗಂಧದ ಗುಡಿ ಟೀಸರ್ ಕರ್ನಾಟಕ ಅರಣ್ಯ ಸಂಪತ್ತಿನ ಮಾಹಿತಿಯನ್ನು ಮತ್ತು ಪ್ರಕೃತಿ ಸೌಂದರ್ಯದ ಬಗ್ಗೆ ಇರುವ ವಿಶೇಷ ಕಾಳಜಿಯ ಡಾಕ್ಯುಮೆಂಟರಿ ಇದಾಗಿದೆ. ಡಾ.ರಾಜ್‍ಕುಮಾರ್ ಹಾಗೂ ಶಿವರಾಜ್ಕುಮಾರ್ ಅವರು ಕೂಡ ಗಂಧದಗುಡಿ ಹೆಸರಿನಲ್ಲಿ ಸಿನಿಮಾ ಮಾಡಿದ್ದರು. ಅಣ್ಣಾವ್ರ ಗಂಧದಗುಡಿ ಸಿನಿಮಾ ದಾಖಲೆ ಸೃಷ್ಟಿಸಿತ್ತು. ಶಿವಣ್ಣ ಅವರ ಗಂಧದ ಗುಡಿ ಸಾಕಷ್ಟು ಹೆಸರು ಮಾಡಿತ್ತು. ಇದೀಗ ಅದೇ ಹೆಸರಿನಲ್ಲಿ ಅಪ್ಪು ಅವರ ಡಾಕ್ಯುಮೆಂಟರಿ ಚಿತ್ರ ಸಿದ್ಧವಾಗಿದೆ ಸಿನಿಮಾದಲ್ಲಿ ಪ್ರಾಣಿ, ಪರಿಸರ ಸಂರಕ್ಷಣೆಯ ಕುರಿತಾಗಿ ಸಂದೇಶವನ್ನು ಸಾರುವ ಸಿನಿಮಾವನ್ನು ಮಾಡಿದ್ದರು. ಇದೀಗ ತಂದೆ ಮತ್ತು ಅಣ್ಣನ ಹಾದಿಯಲ್ಲೇ ಅಪ್ಪು ಕೂಡಾ ಇದೇ ರೀತಿಯ ಪ್ರಯೋಗವನ್ನು ಮಾಡಲು ಮುಂದಾಗಿದ್ದಾರೆ. ಟೀಸರ್ ನೋಡಿದ ಅಭಿಮಾನಿಗಳು ಸಖತ್ ಖುಷಿಯಾಗಿ ಮೆಚ್ಚುಗೆ ಸೂಚಿಸುತ್ತಿದ್ದಾರೆ.
PRK ಆಡಿಯೋ ಯೂಟ್ಯೂಬ್ ಚಾನೆಲ್‍ನಲ್ಲಿ ಇಂದು ಬೆಳಗ್ಗೆ ಟೈಟಲ್ ಟೀಸರ್ ಬಿಡುಗಡೆ ಮಾಡಲಾಗಿದೆ. ಕರ್ನಾಟಕದ ಪ್ರಸಿದ್ಧ ಅರಣ್ಯಗಳನ್ನೆಲ್ಲಾ ಅಪ್ಪು ಸುತ್ತಿದ್ರು. ಕರ್ನಾಟಕದ ಸೌಂದರ್ಯವನ್ನು ಈ ಡಾಕ್ಯುಮೆಂಟರಿಯಲ್ಲಿ ತೋರಿಸಲಾಗಿದೆ. ಹೀಗಾಗಿ ಇದಕ್ಕೆ ಗಂಧದ ಗುಡಿ ಎಂದು ಹೆಸರಿಡಲಾಗಿದೆ. 1 ನಿಮಿಷ 20 ಸೆಕೆಂಡ್ ಇರುವ ಈ ಟೀಸರ್ ರೋಮಾಂಚನಕಾರಿಯಾಗಿದೆ. 5 ದಶಕಗಳ ನಂತರ ಮತ್ತೆ ಗಂಧದಗುಡಿ ಅಭಿಮಾನಿಗಳ ಎದುರು ಬರಲಿದೆ ಎನ್ನುವುದು ಸಂತೋಷದ ವಿಚಾರವಾಗಿದೆ. ಇದನ್ನೂ ಓದಿ: ಅಪ್ಪು ಕನಸು ನನಸು- ಗಂಧದ ಗುಡಿ ಸಾಕ್ಷ್ಯಚಿತ್ರದ ಟೈಟಲ್ ಟೀಸರ್ ಔಟ್
ಟೀಸರ್‌ನಲ್ಲಿ ದಟ್ಟಕಾಡಿನ ನಡುವೆ ಪುನೀತ್ ರಾಜ್‍ಕುಮಾರ್ ಅವರು ಜರ್ನಿಯನ್ನು ಆರಂಭಿಸುತ್ತಾರೆ. ಬೆಟ್ಟ, ಗುಡ್ಡ ಪ್ರಕೃತಿಯ ಸೌಂದರ್ಯದ ನಡುವೆ ಆನೆ, ಹುಲಿ, ಹಾವು ಸುಮುದ್ರ, ನದಿ ಹಾಗೂ ಇನ್ನಿತರ ಸುಂದರವಾದ ತಾಣಗಳ ದೃಶ್ಯವನ್ನು ಕಣ್ಣಿಗೆ ಕಟ್ಟುವಂತೆ ಮನಸ್ಸಲ್ಲಿ ಅಚ್ಚಾಗಿ ಉಳಿಯುವಂತೆ ಅದ್ಭುತವಾಗಿ ಸೆರೆ ಹಿಡಿಯಲಾಗಿದೆ. ಟೀಸರ್ ಕೊನೆಯಲ್ಲಿ ರಾಜ್ ಕುಮಾರ್ ಅವರ ಧ್ವನಿಯಲ್ಲಿ ನಿನ್ನ ಕೈ ಮುಗಿಯುತ್ತೆನೆ ಅಭಯಾರಣ್ಯವನ್ನು ಉಳಿಸು, ಪ್ರಾಣಿಗಳನ್ನು ಉಳಿಸು ಎಂದು ಹೇಳುತ್ತಿರುವ ಸಂದೇಶದ ಸಾಲುಗಳನ್ನು ಕೇಳ ಬಹುದಾಗಿದೆ.
ಅಮೋಘವರ್ಷ ನಿರ್ದೇಶನದ ಡಾಕ್ಯುಮೆಂಟರಿ ಇದಾಗಿದೆ. ಸಾಮಾನ್ಯವಾಗಿ ಡಾಕ್ಯುಮೆಂಟರಿ ಸಿನಿಮಾಗಳನ್ನು ಥಿಯೇಟರ್ನಲ್ಲಿ ರಿಲೀಸ್ ಮಾಡುವುದು ಕಡಿಮೆ. ಆದರೆ ಅಪ್ಪು ಅವರ ಗಂಧದ ಗುಡಿ ಸಿನಿಮಾವನ್ನು ಚಿತ್ರಮಂದಿರದಲ್ಲೇ ರಿಲೀಸ್ ಆಗಲಿದ್ದು, ಮುಂದಿನ ವರ್ಷ 2022ರಲ್ಲಿ ತೆರೆಕಾಣಲಿದೆ.
ಅಶ್ವಿನಿ ಪುನೀತ್ ರಾಜ್‍ಕುಮಾರ್ ಅವರು `ಹಿಂದೆಂದೂ ಕಾಣದ ಸಿನಿಮಾ ಅನುಭವ. ನಿಮ್ಮ ಮುಂದೆ’ ಅಂತ ಟ್ವೀಟ್ ಮಾಡಿದ್ದರು. ಈ ಮೂಲಕ ಟೀಸರ್ ಬಿಡುಗಡೆ ಬಗ್ಗೆ ಮಾಹಿತಿ ನಿಡಿದ್ದರು. ನವೆಂಬರ್ 1ರ ಕನ್ನಡ ರಾಜ್ಯೋತ್ಸವದಂದು ಅಪ್ಪು ಈ ಟೀಸರ್ ಬಿಡುಗಡೆಗೆ ಸಿದ್ಧತೆ ನಡೆಸಿದ್ದರು. ಈ ಬಗ್ಗೆ ಪುನೀತ್, ದಶಕಗಳ ಹಿಂದೆ ಕಥೆಯೊಂದು ಹುಟ್ಟಿತ್ತು. ನಮ್ಮ ಜನ, ನಮ್ಮ ನೆಲದ ಹಿರಿಮೆಯನ್ನು ಮೆರೆದಿತ್ತು. ನಮ್ಮ ಅಡವಿಯ ಹಸಿರನ್ನು ಜಗತ್ತಿಗೇ ಹರಡಿತ್ತು. ಪೀಳಿಗೆಗೆ ಸ್ಫೂರ್ತಿ ನೀಡಿ ಅಜರಾಮರವಾಗಿತ್ತು. ಆ ಚರಿತ್ರೆ ಮರುಕಳಿಸುವ ಸಮಯವೀಗ ಬಂದಿದೆ’ ಎಂದಷ್ಟೇ ನೇತ್ರಾಣಿಯಲ್ಲಿ ಮಾಡಿದ ಸ್ಕೂಬಾ ಡೈವಿಂಗ್‍ನ ಫೋಟೊವೊಂದರ ಜೊತೆ ಅಶ್ವಿನಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡು ಡಾಕ್ಯುಮೆಂಟರಿ ಬಿಡುಗಡೆಯ ಸುಳಿವು ನೀಡಿದ್ದರು.