ಅಪ್ಪುಗೆ ಅವಮಾನ ಮಾಡೋ ಉದ್ದೇಶ ಯಾವ ಕನ್ನಡಿಗರಿಗೂ ಇರಲ್ಲ: ರಚಿತಾ ರಾಮ್

Public TV
2 Min Read
rachitha ram

ಬೆಂಗಳೂರು: ಅಪ್ಪು ಅವರಿಗೆ ಅವಮಾನ ಮಾಡುವ ಉದ್ದೇಶ ಮತ್ತು ಆಲೋಚನೆ ಯಾವ ಕನ್ನಡಿಗರಿಗೂ ಇರುವುದಿಲ್ಲ ಎಂದು ಸ್ಯಾಂಡಲ್‍ವುಡ್ ನಟಿ ರಚಿತಾ ರಾಮ್ ತಿಳಿದ್ದಾರೆ.

Rachitha Ram

ಏಕ್ ಲವ್ ಯಾ ಸಿನಿಮಾ ತಂಡ ಸಾಂಗ್ ರಿಲೀಸ್ ಕಾರ್ಯಕ್ರಮವನ್ನು ಆಯೋಜಿಸಿತ್ತು, ಈ ವೇಳೆ ನಟ ಪವರ್ ಪುನೀತ್ ರಾಜ್‍ಕುಮಾರ್ ಫೋಟೋ ಮುಂದೆ ಏಕ್ ಲವ್ ಯಾ ಸಿನಿಮಾ ತಂಡ ಶಾಂಪೇನ್ ಚಿಮ್ಮಿಸಿತ್ತು. ಹೀಗಾಗಿ ಇದೇನು ಶ್ರದ್ಧಾಂಜಲಿ ಕಾರ್ಯಕ್ರಮವೋ ಅಥವಾ ಸಂಭ್ರಮಾಚರಣೆಯ ಕಾರ್ಯಕ್ರಮವೋ ಎಂದು ಅಪ್ಪು ಅಭಿಮಾನಿಗಳು ರೊಚ್ಚಿಗೆದ್ದಿದ್ದಾರೆ.

Ek Love Ya film team 1

ಸದ್ಯ ಈ ನಟಿ ರಚಿತಾ ರಾಮ್ ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಫೋಸ್ಟ್‌ವೊಂದನ್ನು ಶೇರ್ ಮಾಡಿಕೊಳ್ಳುವ ಮೂಲಕ ಅಪ್ಪು ಅಭಿಮಾನಿಗಳಲ್ಲಿ ಕ್ಷಮೆಯಾಚಿಸಿದ್ದಾರೆ. ‘ನಿನ್ನೆಯ ಏಕ್ ಲವ್ ಯಾ ಸಿನಿಮಾದ ಸಾಂಗ್ ಲಾಂಚ್ ಕಾರ್ಯಕ್ರಮದಲ್ಲಿ ಅಪ್ಪು ಭಾವಚಿತ್ರದ ಎದುರು ಶಾಂಪೇನ್ ಬಾಟಲ್ ಓಪನ್ ಮಾಡಿ ಹಾಡನ್ನು ಬಿಡುಗಡೆಗೊಳಿಸಿರುವ ಬಗ್ಗೆ ನಿಮ್ಮೆಲ್ಲರಿಗೆ ಅಸಮಾಧಾನವಾಗಿದೆ. ಆ ಬಗ್ಗೆ ದಯವಿಟ್ಟು ಕ್ಷಮೆ ಇರಲಿ ನಾನೂ ಕೂಡ ಚಿತ್ರದ ಭಾಗವಾಗಿರುವುದರಿಂದ, ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರಿಂದ ಕ್ಷಮೆ ಕೇಳುತ್ತೇನೆ. ಇದನ್ನೂ ಓದಿ:  ಅಪ್ಪುಗೆ ಅವಮಾನ ಮಾಡಲು ಯಾರಿಂದಲೂ ಸಾಧ್ಯವಿಲ್ಲ, ಮಾಡುವುದೂ ಇಲ್ಲ: ರಕ್ಷಿತಾ

RACHITA RAM EK LOVE YA 3

ಅಪ್ಪು ಅವರಿಗೆ ಅವಮಾನ ಮಾಡುವ ಉದ್ದೇಶ, ಆಲೋಚನೆ ಯಾವ ಕನ್ನಡಿಗರಿಗೂ ಇರುವುದಿಲ್ಲ. ಅದಾಗಿಯೂ ಉದ್ದೇಶಪೂರ್ವಕವಲ್ಲದ ತಪ್ಪನ್ನು ಅಭಿಮಾನಿಗಳು ಮನ್ನಿಸುತ್ತಾರೆಂದು ನಂಬಿದ್ದೇನೆ’ ಎಂದು ಕೇಳಿಕೊಂಡಿದ್ದಾರೆ. ಆದರೂ ಸಮಾಧಾನಗೊಳ್ಳದ ಅಪ್ಪು ಅಭಿಮಾನಿಗಳು ರಚಿತಾ ರಾಮ್ ಅವರಿಗೆ ಸಖತ್ ಆಗಿ ಕ್ಲಾಸ್ ತೆಗೆದುಕೊಂಡಿದ್ದಾರೆ. ಇದನ್ನೂ ಓದಿ:  ಅಪ್ಪುಗೆ ಅವಮಾನ ಮಾಡುವ ಉದ್ದೇಶ ಇರಲಿಲ್ಲ: ಪ್ರೇಮ್ ಕ್ಷಮೆ

ಶುಕ್ರವಾರ ಏಕ್ ಲವ್ ಯಾ ಸಿನಿಮಾ ತಂಡ ಸಾಂಗ್ ರಿಲೀಸ್ ಕಾರ್ಯಕ್ರಮವನ್ನು ಏರ್ಪಡಿಸಿತ್ತು. ಈ ವೇಳೆ ಅಪ್ಪುಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು. ಆದರೆ ಶ್ರದ್ಧಾಂಜಲಿ ವೇಳೆ ಅಪ್ಪು ಫೋಟೋ ಮುಂದೆ ನಟಿ ರಕ್ಷಿತಾ ಪ್ರೇಮ್ ಶಾಂಪೇನ್ ಚಿಮ್ಮಿಸಿದ್ದರು. ಈ ವೇಳೆ ಅಪ್ಪು ಅವರ ಫೋಟೋ ಎಲ್‍ಇಡಿ ಮೇಲೆ ಬಂದಿದೆ. ಈ ಸುದ್ದಿ ಪಬ್ಲಿಕ್ ಟಿವಿಯಲ್ಲಿ ಪ್ರಸಾರ ಆಗಿತ್ತು. ಇದನ್ನು ಗಮನಿಸಿದ ಸಾರಾ ಗೋವಿಂದ್ ಅವರು, ಅಪ್ಪು ಅಗಲಿಕೆ ನೋವಿನಿಂದ ಹೊರಬಂದಿಲ್ಲ. ಆದರೆ ಇಲ್ಲಿ ಅಪ್ಪು ಅವರಿಗೆ ಅವಮಾನ ಮಾಡಿದಂತಾಗಿದೆ. ಹೀಗಾಗಿ ಚಿತ್ರತಂಡ ಕೂಡಲೇ ಕ್ಷಮೆ ಕೇಳಬೇಕು ಎಂದು ಸೂಚನೆ ನೀಡಿದ್ದರು. ಅಂತೆಯೇ ಇದೀಗ ಪ್ರೇಮ್ ಹಾಗೂ ಅಕುಲ್ ಬಾಲಾಜಿ, ನಟಿ ರಕ್ಷಿತಾ ಪ್ರೇಮ್ ಸೇರಿದಂತೆ ಇಡೀ ಚಿತ್ರತಂಡ ಕ್ಷಮೆ ಕೇಳಿದೆ.

Share This Article