ಪುನೀತ್ ರಾಜ್ಕುಮಾರ್ ಮತ್ತು ರಕ್ಷಿತಾ ನಟನೆಯ `ಅಪ್ಪು’ ಚಿತ್ರ ಬಾಕ್ಸ್ ಆಫೀಸ್ನಲ್ಲಿ ಸಖತ್ ಸೌಂಡ್ ಮಾಡಿತ್ತು. ಪುನೀತ್ ನಟಿಸಿದ ಮೊದಲ ಚಿತ್ರದಲ್ಲೇ ಸೈ ಎನಿಸಿಕೊಂಡಿದ್ರು. ಇದೀಗ `ಅಪ್ಪು’ ಸಿನಿಮಾ ತೆರೆಕಂಡು ಇಂದಿಗೆ 20 ವರ್ಷಗಳಾಗಿದೆ. ಇದೇ ವೇಳೆ ನಟಿ ರಕ್ಷಿತಾ ಪುನೀತ್ ನಪಿನಲ್ಲಿ `ಅಪ್ಪು’ ಚಿತ್ರದ ಕುರಿತು ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ.
Advertisement
ಪವರ್ ಸ್ಟಾರ್ ಪುನೀತ್ `ಅಪ್ಪು’ ಚಿತ್ರದ ಮೊದಲ ಬಾರಿಗೆ ಬಣ್ಣ ಹಚ್ಚಿದ್ದು, ವಿಭಿನ್ನ ಪ್ರೇಮಕಥೆಯೊಂದಿಗೆ ಸಿನಿಪ್ರಿಯರಿಗೆ ಪುನೀತ್ ಮತ್ತು ರಕ್ಷಿತಾ ಮೋಡಿ ಮಾಡಿದ್ರು. ಪುರಿ ಜಗನ್ನಾಥ್ ನಿರ್ದೇಶನದ `ಅಪ್ಪು’ ಚಿತ್ರ ತೆರೆಕಂಡು ಬರೋಬ್ಬರಿ ಇಂದಿಗೆ 20 ವರ್ಷಗಳು ಕಳೆದಿದೆ. ಇದೇ ವೇಳೆ ʻಅಪ್ಪುʼ ಚಿತ್ರದ ನೆನಪಿನ ಬುತ್ತಿಯನ್ನ ಬರವಣಿಗೆಯ ಮೂಲಕ ನಟಿ ರಕ್ಷಿತಾ ಎಮೋಷನಲ್ ಆಗಿ ಪೋಸ್ಟ್ವೊಂದನ್ನು ಶೇರ್ ಮಾಡಿದ್ದಾರೆ.
Advertisement
View this post on Instagram
Advertisement
`ಅಪ್ಪು’ ಸಿನಿಮಾ ಎಂತಹ ಸುಂದರ ಮತ್ತು ಅದ್ಭುತ ಸಿನಿಮಾ, ಈ ಮೂಲಕ ಎಂತಹ ಸ್ಟ್ರಾಂಗ್ ಮತ್ತು ಮಾದರಿ ವ್ಯಕ್ತಿಯನ್ನ ಪಾರ್ವತಮ್ಮ ರಾಜ್ಕುಮಾರ್ ಭೇಟಿಯಾದೆ, ಅವರಿಲ್ಲದೇ ನಾನಿಲ್ಲ. ಇಂದು ಅಪ್ಪು ಅವರನ್ನು ಮಿಸ್ ಮಾಡಿಕೊಳ್ಳತ್ತೇನೆ. ಎಲ್ಲಕ್ಕಿಂತ ಹೆಚ್ಚಾಗಿ ಪುನೀತ್ ಅವರ ನಗು. ಇದನ್ನೂ ಓದಿ: ಹೊಂಬಾಳೆ ಫಿಲ್ಮ್ಸ್: ಯುವರಾಜ್ ಕುಮಾರ್ ಹೊಸ ಸಿನಿಮಾ ಘೋಷಣೆ?
Advertisement
ಇನ್ನೂ ಈ ವೇಳೆ ನಿರ್ದೇಶಕ ಪುರಿ ಜಗನ್ನಾಥ್ ಮತ್ತು ಅಸೋಸಿಯೇಟ್ ಆಗಿದ್ದ ದಿನೇಶ್ ಬಾಬು ಅವರಿಗೆ ನನ್ನ ಕಲಿಕೆಗೆ ನೆರವಾಗಿದ್ದಕ್ಕೆ ಧನ್ಯವಾದಗಳು ಎಂದು ತಿಳಿಸಿದ್ದಾರೆ. ಇನ್ನು ಈ ಚಿತ್ರ ಅರ್ಧ ಜೀವನದ ಅನುಭವ ತಿಳಿಸಿಕೊಟ್ಟಿದೆ. ನನ್ನ ಅಭಿಮಾನಿಗಳಿಗೂ, ಸ್ನೇಹಿತರಿಗೂ ಧನ್ಯವಾದಗಳು ಎಂದು ಎಮೋಷನಲ್ ಆಗಿ `ಅಪ್ಪು’ ಚಿತ್ರದ ಕುರಿತು ಪುನೀತ್ ಅವರ ನೆನಪಿನಲ್ಲಿ ನಟಿ ರಕ್ಷಿತಾ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ.