ಧಾರವಾಡ: ನಟ ಪುನೀತ್ ರಾಜಕುಮಾರ ನಿಧನ ಹಿನ್ನೆಲೆ, ಧಾರವಾಡ ಕಲಾವಿದ ಪುನೀತ್ ಪ್ರತಿಮೆ ರಚನೆ ಮಾಡಿ ಶ್ರದ್ಧಾಂಜಲಿ ಅರ್ಪಿಸಿದ್ದಾರೆ.
ಪುನೀತ್ ಅವರಿಗೆ ಧಾರವಾಡ ನಾಗರಿಕರು ಶ್ರದ್ಧಾಂಜಲಿ ಅರ್ಪಿಸಿದ್ದಾರೆ. ಪುನೀತ್ ಅಭಿಯನದ ಕೊನೆಯ ಚಿತ್ರ ಯುವರತ್ನ ಧಾರವಾಡ ನಗರದಲ್ಲಿ ಚಿತ್ರಿಕರಣಗೊಂಡಿತ್ತು. ಈ ಹಿನ್ನೆಲೆ ಕೆಸಿಡಿ ಕಾಲೇಜ್ ಆಗರಣದಲ್ಲಿ ಸಾರ್ವಜನಿಕರು ಶ್ರದ್ಧಾಂಜಲಿ ಅರ್ಪಿಸಲಾಗಿದೆ.
ಕಲಾವಿದ ಮಂಜುನಾಥ ಹಿರೇಮಠ ಪುನೀತ್ ರಾಜಕುಮಾರ ಅವರ ಮಣ್ಣಿನ ಪ್ರತಿಮೆ ತಯಾರಿಸಿದ್ದಾರೆ. ಇದನ್ನೇ ಕಾಲೇಜ್ ಎದುರುಗಡೆ ಇಟ್ಟು ವಿದ್ಯಾರ್ಥಿಗಳು, ಕಲಾವಿದರು, ಕನ್ನಡ ಹೋರಾಟಗಾರರು, ವಿವಿಧ ನಾಗರಿಕರು ಸೇರಿ ಶ್ರದ್ಧಾಂಜಲಿ ಅರ್ಪಿಸಿದರು. ಇನ್ನು ಯುವರತ್ನ ಸಿನೆಮಾ ಶೂಟಿಂಗ್ ವೇಳೆ ಪುನೀತ್ ಓಡಾಡಿದ್ದ ಜಾಗದಲ್ಲೇ ಪ್ರತಿಮೆಯಿಟ್ಟು ಶ್ರದ್ಧಾಂಜಲಿ ಅರ್ಪಿಸಲಾಯಿತು. ಇದನ್ನೂ ಓದಿ: ಪತಿ ನಿಧನದ ಸುದ್ದಿ ಕೇಳ್ತಿದ್ದಂತೆ ಕಣ್ಣೀರಿಡುತ್ತಲೇ ಮೌನಕ್ಕೆ ಶರಣಾದ ಪತ್ನಿ ಅಶ್ವಿನಿ