ಬೆಂಗಳೂರು: ಸ್ಯಾಂಡಲ್‍ವುಡ್ ನಟ ಪುನೀತ್ ಅವರ ಅಂತಿಮ ದರ್ಶನವನ್ನು ತೆರೆದ ವಾಹನದಲ್ಲಿ ಮಾಡಲಾಗುತ್ತದೆ.
ಕಂಠೀರವ ಸ್ಟೇಡಿಯಂ ನಿಂದ ಕಂಠೀರವ ಸ್ಟುಡಿಯೋವರೆಗೆ ಅಂತಿಮ ಯಾತ್ರೆ ನಡೆಯಲಿದೆ. 3-30 ಕ್ಕೆ ಕಂಠೀರವ ಸ್ಟೇಡಿಯಂ ನಿಂದ ಪಾರ್ಥಿವ ಶರೀರವನ್ನ ಕೊಂಡೊಯ್ಯಲಾಗುತ್ತದೆ. 5-30 ರ ಆಸುಪಾಸಿಗೆ ಕಂಠೀರವ ಸ್ಟೇಡಿಯಂಗೆ ಪಾರ್ಥಿವ ಶರೀರ ತಲುಪಲಿದೆ. ನಂತರ ಇಡೀಗ ಸುಮುದಾಯದ ವಿಧಿವಿಧಾನಗಳ ಮೂಲಕವಾಗಿ ಅಂತಿಮ ವಿಧಿವಿಧಾನ ನಡೆಸಲಾಗುತ್ತದೆ.
Advertisement
Advertisement
ಈಗಾಗಲೇ ಯುವರತ್ನನನ ಅಂತಿಮ ದರ್ಶನವನ್ನು ಪಡೆಯಲು ಅಭಿಮಾನಿಗಳು ಜಾಮಯಿಸುತ್ತಿದ್ದಾರೆ. ಅಭಿಮಾನಿಗಳ ನಿಯಂತ್ರಣಕ್ಕೆ ಪೊಲೀಸರು ಹರಸಾಹಸ ಪಡುತ್ತಿದ್ದಾರೆ. ಈಗಾಲೇ ಟಾಲಿವುಡ್, ಸ್ಯಾಂಡಲ್‍ವುಡ್ ಸೇರಿದಂತೆ ಹಲವು ನಟ, ನಟಿಯರು ಬಂದು ಪುನೀತ್ ಅವರ ಅಂತಿಮ ದರ್ಶನ ಪಡೆದಿದ್ದಾರೆ. ಪುನೀತ್ ಅವರ ಮಗಳು ದೆಹಲಿಗೆ ಬಂದು ತಲುಪಿದ್ದಾರೆ. ಇನ್ನೇನು ಕೆಲವೇ ಗಂಟೆಯಲ್ಲಿ ಬೆಂಗಳೂರಿಗೆ ಬಂದು ತಲುಪಲಿದ್ದಾರೆ. ನಂತರ ಅಂತಿಮ ವಿಧಿ ವಿಧಾನ ನಡೆಯಲಿದೆ. ಇದನ್ನೂ ಓದಿ: ಪತಿ ನಿಧನದ ಸುದ್ದಿ ಕೇಳ್ತಿದ್ದಂತೆ ಕಣ್ಣೀರಿಡುತ್ತಲೇ ಮೌನಕ್ಕೆ ಶರಣಾದ ಪತ್ನಿ ಅಶ್ವಿನಿ