– ಬಿಕ್ಕಿ ಬಿಕ್ಕಿ ಅತ್ತ ಎರಡನೇ ಮಗಳು
ಬೆಂಗಳೂರು: ಸ್ಯಾಂಡಲ್‍ವುಡ್ ನಟ ಪುನೀತ್ ರಾಜ್‍ಕುಮಾರ್ ಅವರನ್ನು ಕಳೆದುಕೊಂಡಿರುವ ಅಭಿಮಾನಿಗಳು, ಸ್ಯಾಂಡಲ್‍ವುಡ್ ಸೇರಿದಂತೆ ಇಡೀ ಕುಟುಂಬವೇ ಕಣ್ಣೀರಿಡುತ್ತಿದೆ.
ಅಪ್ಪು ಅವರ ಸದಾಶಿವನಗದರ ನಿವಾಸದಲ್ಲಿ ನೀರವ ಮೌನ ಆವರಿಸಿದೆ. ದೊಡ್ಮನೆಯ ಕಿರಿಯ ಪುತ್ರ ಇನ್ನಿಲ್ಲ ಎನ್ನುವ ಆಘಾತದ ಸುದ್ದಿ ಬರುತ್ತಲೇ ಪುನೀತ್ ರಾಜ್‍ಕುಮಾರ್ ಅವರ ಇಡೀ ಕುಟುಂಬ ಕಣ್ಣೀರ ಮಡುವಿನಲ್ಲಿ ಮುಳುಗಿದೆ. ಪುನೀತ್ ಅವರ ನಿವಾಸ, ಕಂಠೀರವ ಸ್ಟೇಡಿಯಂ ಮುಂದೆ ಅಪ್ಪು ಅಭಿಮಾನಿಗಳ ಆಕ್ರಂದನ ಮುಗಿಲು ಮುಟ್ಟಿದೆ.
ಜಿಮ್ ಮಾಡುವ ವೇಳೆ ಸುಸ್ತಾಗಿ ಎದೆ ನೋವು ಕಾಣಿಸಿಕೊಂಡಿದ್ದರಿಂದ ಕುಟುಂಬ, ವೈದ್ಯರ ಸಲಹೆ ಮೇರೆಗೆ ನಿನ್ನೆ 11 ಗಂಟೆಯ ಸುಮಾರಿಗೆ ವಿಕ್ರಂ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅಷ್ಟೊತ್ತಿಗಾಗಲೇ ವಿಧಿ ತನ್ನ ಆಟ ಮುಗಿಸಿತ್ತು. ಪುನೀತ್ ಇನ್ನಿಲ್ಲ ಎನ್ನವ ಸುದ್ದಿ ಬರುತ್ತಲೇ ಇಡಿ ಕುಟುಂಬಕ್ಕೆ ಸಿಡಿಲು ಬಡಿದಂತಾಗಿದೆ. ಪತಿ ನಿಧನದ ಸುದ್ದಿ ಕೇಳುತ್ತಿದ್ದಂತೆಯೇ ಅಶ್ವಿನಿ ಕಣ್ಣೀರುಡುತ್ತಲೇ ಮೌನಕ್ಕೆ ಶರಣಾಗಿದ್ದಾರೆ. ಇತ್ತ ಮಗಳು ಕೂಡ ಬಿಕ್ಕಿಬಿಕ್ಕಿ ಅಳುತ್ತಿದ್ದು, ಹಿರಿಯ ಮಗಳು ಧೃತಿ ಅಮೆರಿಕಾದಲ್ಲಿ ವಾಸವಾಗಿದ್ದಾರೆ. ಇದೀಗ ಅಂತ್ಯಕ್ರಿಯೆ ನಡೆಸಲು ಇವರ ಬರುವಿಕೆಗಾಗಿ ಕಾಯುತ್ತಿದ್ದಾರೆ. ಇದನ್ನೂ ಓದಿ: ಅಪ್ಪು ಅಗಲಿಕೆಗೆ ಮಂತ್ರಾಲಯ ಶ್ರೀಗಳಿಂದ ಸಂತಾಪ
ಪುನೀತ್ ಅವರ ನಿಧನದ ಸುದ್ದಿ ತಿಳಿದ ಸ್ನೇಹಿತರು, ಚಿತ್ರರಂಗದ ಕಲಾವಿದರು, ಗಣ್ಯರು ಆಸ್ಪತ್ರೆಗೆ ದೌಡಾಯಿಸಿದ್ದರು. ಇಂದು ಪುನೀತ್ ಅವರ ಪಾರ್ಥಿವ ಶರೀರವನ್ನು ಅಭಿಮಾನಿಗಳ ದರ್ಶನಕ್ಕೆಂದು ಕಂಠೀರವ ಸ್ಟೇಡಿಯಂನಲ್ಲಿ ಇರಿಸಲಾಗಿದೆ. ನಾಳೆ ಅಂತ್ಯಕ್ರಿಯೆ ನಡೆಯಲಿದೆ ಎಂದು ಹೇಳಲಾಗುತ್ತದ್ದು, ರಾಜ್ಯದ ಮೂಲೇ ಮೂಲೆಗಳಿಂದ ಅಭಿಮಾನಿ ಬರುತ್ತಿದ್ದಾರೆ. ಇದನ್ನೂ ಓದಿ: ಚಿಕ್ಕಮಗಳೂರಿನ ನೇಚರ್, ಕಾಫಿ ಅಂದ್ರೆ ಪುನೀತ್‍ಗೆ ತುಂಬಾ ಇಷ್ಟ: ಭರತ್