ತಂದೆ ಡಾ. ರಾಜ್‍ಕುಮಾರ್ ಬಗ್ಗೆ ಪುಸ್ತಕ ಬರೆದಿದ್ದ ಅಪ್ಪು

Public TV
2 Min Read
puneeth rajkumar 7 1

– 10ನೇ ವಯಸ್ಸಿಗೆ ರಾಷ್ಟ್ರಪ್ರಶಸ್ತಿ ಗೆದ್ದ ಬಾಲ ನಟ
– ಮಕ್ಕಳ ನೆಚ್ಚಿನ ತಾರೆ ಅಪ್ಪು

ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರ ನಿಧನಕ್ಕೆ ಸ್ಯಾಂಡಲ್‍ವುಡ್, ಕುಟುಂಬ ಅಭಿಮಾನಿಗಳು ಕಣ್ಣೀರು ಹಾಕುತ್ತಿದ್ದಾರೆ. ಇವರ ಸರಳತೆ, ಮುಗ್ಧತೆಯಿಂದ ದೊಡ್ಡವರಿಗೆ ಮಾತ್ರವಲ್ಲದೇ ಮಕ್ಕಳಿಗೂ ಇಷ್ಟವಾಗುವ ವ್ಯಕ್ತಿತ್ವವನ್ನು ಹೊಂದಿದ್ದವರು. ಇವರು ತಂದೆಯ ಕುರಿತಾಗಿ ಪುಸ್ತಕವನ್ನು ಬರೆದು ಮೆಚ್ಚುಗೆಗೆ ಪಾತ್ರರಾಗಿದ್ದರು.

puneeth 2

ಹೀರೋ ಆದ ಮೇಲೂ ಮಕ್ಕಳ ಅಚ್ಚು ಮೆಚ್ಚಿನ ನಟ ಎಂದರೆ ಅದು ಪುನೀತ್ ರಾಜ್‍ಕುಮಾರ್ ಮಾತ್ರ. ಅವರ ನಟನೆಯ ಚಿತ್ರಗಳ ಮೊದಲ ಪ್ರೇಕ್ಷಕರು ಕೂಡ ಮಕ್ಕಳೇ ಆಗಿದ್ದರು. ಮಕ್ಕಳು ಹಟ ಮಾಡಿ ಹೆತ್ತವರ ಜೊತೆ ಪುನೀತ್ ಸಿನಿಮಾ ನೋಡಲು ಬರುತ್ತಿದ್ದರು. ಬಹುತೇಕ ಮಕ್ಕಳು ಅಪ್ಪು ಎಂದರೆ ಚಲಿಸುವ ಮೋಡಗಳು ಚಿತ್ರದ ಹಾಡು ನೆನೆಪಿಸಿಕೊಳ್ಳುತ್ತಿದ್ದರು. ಆ ಮಟ್ಟಿಗೆ ಮಕ್ಕಳು ಇಷ್ಟ ಪಡುತ್ತಿದ್ದರು. ಇದನ್ನೂ ಓದಿ: ಅಪ್ಪು ಅಗಲಿಕೆಗೆ ಮಂತ್ರಾಲಯ ಶ್ರೀಗಳಿಂದ ಸಂತಾಪ

puneeth rajkumar 4 1

ಪ್ರವಾಸ ಪ್ರಿಯ ಅಪ್ಪು: ಮಂತ್ರಾಲಯ, ಉತ್ತರ ಕಾರ್ನಟಕದ ಪವಾಡ ಮಹಿಮಠ, ಆಧಯಾತ್ಮಿಕ ತಾಣಗಳಿಗೆ ಭೇಟಿ ನೀಡುತ್ತಿದ್ದರು. ಪ್ರತಿ ವರ್ಷ ಹುಟ್ಟುಹಬ್ಬಕ್ಕೆ ಕುಟುಂಬ ಸಮೇತರಾಗಿ ಒಂದೊಂದು ದೇಶಕ್ಕೆ ಹೋಗುತ್ತಿದ್ದರು. ಅಮೆಕಾರಿ, ಲಂಟನ್, ಯುರೋಪ್ ದೇಶಗಳಿಗೆ ಹೋಗಿ ಬರುತ್ತಿದ್ದರು. ಕೊರೊನ ಆಕಾರಣದಿಂದಾಗಿ ಕಳೆದ 2ವರ್ಷದಿಂದ ವಿದೇಶ ಪ್ರವಾಸಕ್ಕೆ ಬ್ರೇಕ್ ಹಾಕಿದ್ದರು. ಶೂಟಿಂಗ್ ಮುಗಿದ ಕೂಡಲೇ ತಾವು ಚಿತ್ರೀಕರಣ ಮಾಡುವ ಸ್ಥಳದ ಸುತ್ತಮುತ್ತ ಏನಾದರೂ ಪ್ರೇಕ್ಷಣೀಯ ಸ್ಥಳಗಳ ಬಗ್ಗೆ ಮಾಹಿತಿ ಇದ್ದರೆ ಸ್ನೇಹಿತರ ಜೊತೆಗೆ ಅಲ್ಲಿ ಹೋಗಿ ಬರುತ್ತಿದ್ದರು. ಈ ಮೂಲಕವಾಗಿ ಪ್ರವಾಸ ಪ್ರಿಯ ನಟ ಎನಿಸಿಕೊಂಡಿದ್ದರು. ಇದನ್ನೂ ಓದಿ: ರಾಜಕುಮಾರನಂತೆ ಬಾಳಬೇಕಿದ್ದ ನನ್ನ ತಮ್ಮ ಇನ್ನಿಲ್ಲ ಅಂತಂದ್ರೆ ನಂಬಲು ಅಸಾಧ್ಯ: ಸುಧಾರಾಣಿ

puneeth rajkumar 6 1

ತಂದೆ ಡಾ. ರಾಜ್ ಬಗ್ಗೆ ಪುಸ್ತಕ ಬರೆದಿದ್ದ ಅಪ್ಪು: ತಮ್ಮ ತಂದೆ ಡಾ. ರಾಜ್‍ಕುಮಾರ್ ಅವರ ಬಗ್ಗೆ ಪುನೀತ್ ರಾಜ್‍ಕುಮಾರ್ ಅವರು ದಾಖಲಸಿದ ಜೀವನಚರಿತ್ರೆಯನ್ನು ಡಾ, ಪ್ರಕೃತಿ ಬನವಾಸಿ ಇದನ್ನು ಬರವಣೆಗೆಗೆ ಇಳಿಸಿದ್ದಾರೆ. ತಮ್ಮ ಬದುಕಿನ ಮೇಲೆ ತಂದೆಯ ಪ್ರಭಾವ, ಅವರ ಜೊತೆಗೆ ಕಳೆದ ದಿನ, ಅಪರೂಪದ ಘಟನೆಗಳು ಇತ್ಯಾದಿಗಳನ್ನು ಬಯಾಗ್ರಫಿಯಲ್ಲಿ ವಿವರಿಸುತ್ತಾ ಹೋಗಿದ್ದಾರೆ. ಇದನ್ನೂ ಓದಿ: ರಾಜಕುಮಾರನಂತೆ ಬಾಳಬೇಕಿದ್ದ ನನ್ನ ತಮ್ಮ ಇನ್ನಿಲ್ಲ ಅಂತಂದ್ರೆ ನಂಬಲು ಅಸಾಧ್ಯ: ಸುಧಾರಾಣಿ

puneeth rajkumar 5 1

ಕನ್ನಡ ಹಾಗೂ ಇಂಗ್ಲೀಷ್‍ಗಳೆರಡರಲ್ಲೂ ಈ ಕೃತಿ ಲಭ್ಯವಿದೆ. 272 ಪುಟಗಳ ಈ ಪುಸ್ತಕ ಒಂದು ಲಕ್ಷ ಪದಗಳು ಹಾಗೂ 1750 ಡಾ. ರಾಜ್, ಪುನೀತ್ ಹಾಗೂ ಅವರ ಕುಟುಂಬದ ಅಪರೂಚಪದ ಛಾಯಾಚಿತ್ರಗಳನ್ನು ಒಳಗೊಂಡಿದೆ. ಈ ಪುಸ್ತಿ ಪಿನೀತ್ ಅವರು ತಮ್ಮ ಜೀವಿತಾವಧಿಯಲ್ಲಿ ಮಾಡಿರುವ ಕಾರ್ಯಗಳಲ್ಲಿ ಅಪರೂಪದ ವಿಶೇಷ ಸಾಧನೆಯಾಗಿದೆ. ಪಾರ್ವತಮ್ಮ ಪಬ್ಲಿಕೇಶನ್‍ನಿಂದ ಈ ಕೃತಿಯನ್ನು 2012 ಜನವರಿ1ಕ್ಕೆ ಬಿಡುಗಡೆ ಮಾಡಲಾಗಿತ್ತು. ಇದನ್ನೂ ಓದಿ: ಅಪ್ಪು ಅಗಲಿಕೆಗೆ ಮಂತ್ರಾಲಯ ಶ್ರೀಗಳಿಂದ ಸಂತಾಪ

PUNEETH 6

RCB, ಬೆಂಗಳೂರು ಬುಲ್ಸ್ ರಾಯಭಾರಿ: ಪುನೀತ್ ರಾಜ್‍ಕುಮಾರ್ ಕ್ರೀಡೆಯಲ್ಲಿ ಬಹಳ ಆಸಕ್ತಿಯನ್ನು ಹೊಂದಿದ್ದರು. RCB,, ಪ್ರೊ ಕಬ್ಬಡ್ಡಿಯ ಬೆಂಗಳೂರು ಬುಲ್ಸ್ ತಂಡದ ರಾಯಭಾರಿಯಾಗಿದ್ದರು. ಪುನೀತ್ ಐಪಿಎಲ್ ಪಂದ್ಯಗಳನ್ನು ವೀಕ್ಷಿಸಲು ಚಿನ್ನಸೌಆಮಿ ಕ್ರೀಡಾಂಗಣಕ್ಕೆ ಆಗಮಿಸಿ ಅಭಿಮಾನಿಗಳೊಂದಿಗೆ ಬೆರೆಯುತ್ತಿದ್ದರು.  ಇದನ್ನೂ ಓದಿ:   ಪತಿ ನಿಧನದ ಸುದ್ದಿ ಕೇಳ್ತಿದ್ದಂತೆ ಕಣ್ಣೀರಿಡುತ್ತಲೇ ಮೌನಕ್ಕೆ ಶರಣಾದ ಪತ್ನಿ ಅಶ್ವಿನಿ

Share This Article
Leave a Comment

Leave a Reply

Your email address will not be published. Required fields are marked *