– ಪುನೀತ್ ಸೇವೆ ಮಾತಲ್ಲಿ ವರ್ಣನೆ ಮಾಡಲಾಗುತ್ತಿಲ್ಲ
ಬಳ್ಳಾರಿ: ಪುನೀತ್ ರಾಜ್‍ಕುಮಾರ್ ಅವರ ಶ್ರದ್ಧಾಂಜಲಿ ಸಭೆಯಲ್ಲಿ ಮಾಜಿ ಸಚಿವ ಜನಾರ್ದನ ರೆಡ್ಡಿ ಅವರು ಅಪ್ಪು ನೆನಪುಗಳನ್ನು ಮೆಲುಕು ಹಾಕಿದ್ದಾರೆ. ನಮಗಿಂತ ಸಣ್ಣವನಿಗೆ ಶ್ರದ್ಧಾಂಜಲಿ ಮಾಡೋ ದಿನ ಬರುತ್ತದೆ ಅಂದುಕೊಂಡಿರಲಿಲ್ಲ ಎಂದು ಬೇಸರವನ್ನು ಹೊರಹಾಕಿದ್ದಾರೆ.
Advertisement
ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿದ ಅವರು, ನಮಗಿಂತ ಸಣ್ಣವನಿಗೆ ಶ್ರದ್ಧಾಂಜಲಿ ಸಭೆ ಮಾಡೋ ದಿನ ಬರುತ್ತದೆ ಅಂದುಕೊಂಡಿರಲಿಲ್ಲ. ಪುನೀತ್ ಸೇವೆ ಮಾತಲ್ಲಿ ವರ್ಣನೆ ಮಾಡಲಾಗುತ್ತಿಲ್ಲ. ಅಪ್ಪು ಸಮಾಜ ಸೇವೆ ಇಡೀ ವಿಶ್ವಕ್ಕೆ ಗೊತ್ತಾಗಿದೆ. ಪಾಕಿಸ್ತಾನದ ಅಭಿಮಾನಿಯೊಬ್ಬ ಪುನೀತ್ ಪಾಲೋ ಮಾಡುತ್ತಿದ್ದರು ಅನ್ನೋದು ಕೂಡ ವಿಶೇಷವಾಗಿದೆ. ಕೌಟುಂಬಿಕ ಚಿತ್ರದಿಂದಲೇ ಪುನೀತ್ ಫೇಮಸ್ ಆಗಿದ್ದರು. ಸಂದೇಶ ಇರುವ ಸಿನಿಮಾಗಳಲ್ಲಿ ನಟಸುತ್ತಿದ್ದರು. ನನ್ನ ಮಗನನ್ನು ಶೂಟಿಂಗ್‍ಗೆ ಕರೆದುಕೊಂಡು ಹೋಗುತ್ತಿದ್ದರು. ಹೀರೋ ಮಾಡೋ ವಿಚಾರ ನನಗೆ ಬಿಡಿ ಎಂದಿದ್ದರು. ಇದನ್ನೂ ಓದಿ: ಕಿತ್ತಳೆ ಮಾರಿ ಶಾಲೆ ಕಟ್ಟಿದ ಹರೇಕಳ ಹಾಜಬ್ಬರಿಗೆ ಪದ್ಮಶ್ರೀ
Advertisement
Advertisement
Advertisement
ರಾಜಕುಮಾರ ಪಾರ್ಕ್ ಉದ್ಘಾಟನೆ ವೇಳೆ ಇಡೀ ಕುಟುಂಬವೇ ಬಳ್ಳಾರಿಗೆ ಬಂದಿತ್ತು. ಹದಿನಾರು ವೃದ್ಧಾಶ್ರಮ, ವಿದ್ಯಾಭ್ಯಾಸ, ದಾನದರ್ಮ, ಮಾಡಿದ್ದರು ಯಾರಿಗೂ ಹೇಳುತ್ತಿರಲಿಲ್ಲ. ಇವತ್ತು ಪುನೀತ್‍ನಿಂದಾಗಿ ಸೇವೆ ಮಾಡಲು ಹೊರಗೆ ಬಂದಿದ್ದೇನೆ. ಪುನೀತ್ ಇಲ್ಲವೆನ್ನೋದು ನಂಬಲು ಆಗುತ್ತಿಲ್ಲ. ರಾಜಕೀಯದಲ್ಲಿ ಉನ್ನತ ಸ್ಥಾನ ನನಗೆ ಬೇಕಿಲ್ಲ. ಆದರೆ ಬಳ್ಳಾರಿ ಜನರಿಗೆ ಸೇವೆ ಮಾಡಬೇಕಿದೆ. ಕೊನೆಯ ಉಸಿರಿರೋವರೆಗೂ ಬಳ್ಳಾರಿಯಲ್ಲಿ ಇರಬೇಕಿದೆ. ಬಳ್ಳಾರಿ ಜನರ ಸೇವೆ ಮಾಡುತ್ತೆನೆ. ರಾಜಕುಮಾರ ಸಿನಿಮಾದ ಸ್ಪೂರ್ತಿಯಿಂದ ನಮ್ಮ ವೃದ್ದಾಶ್ರಮದಲ್ಲಿ ಇದ್ದ ತಂದೆ ತಾಯಿಯನ್ನು ಕರೆದುಕೊಂಡು ಹೋಗಿದ್ದಾರೆ ಎಂದು ಹೇಳುತ್ತಾ ಭಾವುಕರಾಗಿದ್ದಾರೆ. ಇದನ್ನೂ ಓದಿ: ಅಪ್ಪು ಸಮಾಧಿಗೆ ಮಂಡಕ್ಕಿ ಹಾರ ಮಾಡಿಕೊಂಡು ಬಂದ ವೃದ್ಧೆ