– ಅಪ್ಪು ಕುಟುಂಬ, ಅಭಿಮಾನಿಗಳಿಗೂ ಥ್ಯಾಂಕ್ಸ್
– ಸರ್ಕಾರಕ್ಕೆ ಶಿವಣ್ಣ ಧನ್ಯವಾದ
ಬೆಂಗಳೂರು: ನಟ ಪುನೀತ್ ರಾಜ್ ಕುಮಾರ್ ಅಂತ್ಯಕ್ರಿಯೆ ಸುಸೂತ್ರವಾಗಿ ನಡೆಯುವಂತೆ ಸಹಕರಿಸಿದ ಎಲ್ಲಾ ಪೊಲೀಸ್ ಅಧಿಕಾರಿಗಳಿಗೆ ಹಾಗೂ ಸಿಬ್ಬಂದಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಧನ್ಯವಾದಗಳನ್ನು ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ, ಖ್ಯಾತ ನಟ ಪುನೀತ್ ರಾಜ್ ಕುಮಾರ್ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಮತ್ತು ಅಂತ್ಯಕ್ರಿಯೆ ಸಂದರ್ಭದಲ್ಲಿ ಸಾರ್ವಜನಿಕರಿಗೆ ಅನಾನುಕೂಲ ಆಗದಂತೆ ಎಲ್ಲ ವ್ಯವಸ್ಥೆಗಳನ್ನು ಮಾಡಿ, ಶ್ರದ್ಧೆಯಿಂದ ಕಾರ್ಯನಿರ್ವಹಿಸಿದ ಎಲ್ಲ ಅಧಿಕಾರಿಗಳಿಗೆ ಮತ್ತು ಸಿಬ್ಬಂದಿಗೆ ಹೃತ್ಪೂರ್ವಕ ಧನ್ಯವಾದಗಳು ಎಂದರು.
Advertisement
"ಖ್ಯಾತ ನಟ ಶ್ರೀ ಪುನೀತ್ ರಾಜಕುಮಾರ್ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಮತ್ತು ಅಂತ್ಯಕ್ರಿಯೆ ಸಂದರ್ಭದಲ್ಲಿ ಸಾರ್ವಜನಿಕರಿಗೆ ಅನಾನುಕೂಲ ಆಗದಂತೆ ಎಲ್ಲ ವ್ಯವಸ್ಥೆಗಳನ್ನು ಮಾಡಿ, ಶ್ರದ್ಧೆಯಿಂದ ಕಾರ್ಯನಿರ್ವಹಿಸಿದ ಎಲ್ಲ ಅಧಿಕಾರಿಗಳಿಗೆ ಮತ್ತು ಸಿಬ್ಬಂದಿಗಳಿಗೆ ಹೃತ್ಪೂರ್ವಕ ಧನ್ಯವಾದಗಳು" : ಮುಖ್ಯಮಂತ್ರಿ @BSBommai.#PuneethRajkumar pic.twitter.com/RGzCacHJSq
— CM of Karnataka (@CMofKarnataka) October 31, 2021
Advertisement
ಪುನೀತ್ ರಾಜ್ ಕುಮಾರ್ ನಿಧನ ನಂತರ ಕಳೆದ ಮೂರು ದಿನಗಳಿಂದ ಸಾರ್ವಜನಿಕರ ದರ್ಶನದಿಂದ ಎಲ್ಲ ವ್ಯವಸ್ಥೆ ಬಗ್ಗೆ ಪೊಲೀಸರು, ಅಧಿಕಾರಿಗಳು ಶ್ರಮವಹಿಸಿದ್ದಾರೆ. ಯಾವುದೇ ರೀತಿಯಲ್ಲೂ ಹೆಚ್ಚು ಕಮ್ಮಿ ಆಗಲಿಲ್ಲ. ಅಹಿತಕರ ಘಟನೆ ನಡೆದಿಲ್ಲ. ಪೊಲೀಸರ ಶ್ರಮ, ಶ್ರದ್ಧೆಗೆ ಮೆಚ್ಚುಗೆ ವ್ಯಕ್ತಪಡಿಸ್ತೇನೆ ಎಂದರು. ಇದನ್ನೂ ಓದಿ: ಇಬ್ಬರ ಬಾಳಿಗೆ ಬೆಳಕಾದ ಅಪ್ಪು
Advertisement
ಇಂದು ಬೆಳಿಗ್ಗೆ ಬೆಂಗಳೂರಿನ ಕಂಠೀರವ ಸ್ಟುಡಿಯೋ ಆವರಣದಲ್ಲಿ ನಟ ಪುನೀತ್ ರಾಜಕುಮಾರ್ ಅವರ ಅಂತಿಮ ಸಂಸ್ಕಾರವನ್ನು ಸರ್ಕಾರಿ ಗೌರವದೊಂದಿಗೆ ನೆರವೇರಿಸಲಾಯಿತು. ಈ ಸಂದರ್ಭದಲ್ಲಿ ಮುಖ್ಯಮಂತ್ರಿ @BSBommai ಅವರು ಪುನೀತ್ ಅವರ ಪತ್ನಿ ಅಶ್ವಿನಿ ಅವರಿಗೆ ರಾಷ್ಟ್ರಧ್ವಜವನ್ನು ಹಸ್ತಾಂತರಿಸಿದರು. (1/2)#PuneetRajkumar pic.twitter.com/vqgyCCYUR0
— CM of Karnataka (@CMofKarnataka) October 31, 2021
Advertisement
ಪುನೀತ್ ಕುಟುಂಬದವರು ಕೂಡ ಸಂಪೂರ್ಣ ಸಹಕಾರ ನೀಡಿದ್ದಾರೆ. ಹೀಗಾಗಿ ಅವರ ಕುಟುಂಬದವರಿಗೂ ಧನ್ಯವಾದ. ಅಭಿಮಾನಿಗಳು ಶಿಸ್ತು, ಸಂಯಮ, ಶಾಂತಿಯಿಂದ ನಡೆದುಕೊಂಡಿದ್ದಾರೆ. ಅವರಿಗೂ ಧನ್ಯವಾದಗಳನ್ನು ಅರ್ಪಿಸುತ್ತೇನೆ. ಶಿವರಾಜ್ ಕುಮಾರ್ ಸರ್ಕಾರಕ್ಕೆ ಕೃತಜ್ಞತೆ ತಿಳಿಸಿದ್ದಾರೆ. ಎಂಥದ್ದೇ ಸಂದರ್ಭದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವುದು ಸರ್ಕಾರದ ಕರ್ತವ್ಯ. ಹೀಗಾಗಿ ಸರ್ಕಾರ ತನ್ನ ಕರ್ತವ್ಯ ನಿಭಾಯಿಸಿದೆ ಎಂದು ಹೇಳಿದರು. ಇದನ್ನೂ ಓದಿ: ನನ್ನ ಮಗುವನ್ನು ಕಳೆದುಕೊಂಡಿದ್ದೇನೆ – ಬಿಕ್ಕಿ ಬಿಕ್ಕಿ ಅತ್ತ ಶಿವಣ್ಣ
ಸಚಿವರು, ಆಡಳಿತ ಹಾಗೂ ವಿರೋಧ ಪಕ್ಷಗಳ ಮುಖಂಡರು, ಚಿತ್ರರಂಗದ ಗಣ್ಯರು, ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. (2/2) pic.twitter.com/xhZZjuYCA3
— CM of Karnataka (@CMofKarnataka) October 31, 2021
ಶಿವರಾಜ್ ಕುಮಾರ್ ಅವರ ಕೃತಜ್ಞತೆ ಅವರ ಮತ್ತು ದೊಡ್ಮನೆಯ ದೊಡ್ಡ ಗುಣ. ನಮ್ಮ ಅಧಿಕಾರಿಗಳು ಕೂಡ ಒಳ್ಳೆಯ ರೀತಿಯ ಸಹಕಾರ ಕೊಟ್ಟಿದ್ದಾರೆ. ಇದು ಸರ್ಕಾರ, ಅಧಿಕಾರಿಗಳ ಕರ್ತವ್ಯ ಆಗಿತ್ತು ಎಂದು ಹೇಳುತ್ತಾ ಬಿಬಿಎಂಪಿ, ಕಂದಾಯ ಇಲಾಖೆ ಅಧಿಕಾರಿ, ಸಿಬ್ಬಂದಿ, ಪೊಲೀಸ್ ಇಲಾಖೆಗೆ ಸಿಎಂ ಧನ್ಯವಾದ ಅರ್ಪಿಸಿದರು. ಇದನ್ನೂ ಓದಿ: ಪುನೀತ್ ಅವರಂತೆ ಅಜಾತಶತ್ರು ಮನೋಭಾವ, ಸರಳತೆ ಬೆಳೆಸಿಕೊಳ್ಳಲಿ- ಕಲಾವಿದರಿಗೆ ಡಿಕೆಶಿ ಕರೆ