ಬೆಂಗಳೂರು: ಪುನೀತ್ ರಾಜ್‍ಕುಮಾರ್ ಅವರು ಸ್ಯಾಂಡಲ್‍ವುಡ್ ಆಳಿದ ‘ಯುವರತ್ನ’ ಅವರ ಹಿನ್ನೆಲೆಯನ್ನು ಒಮ್ಮೆ ಹಿಂದಿರುಗಿ ನೋಡುವುದಾದರೆ ಅವರ ಸಾಧನೆ ಅಪಾರವಾಗಿದೆ.
Advertisement
ಜನನ: 1975 ಮಾರ್ಚ್ 17ರಂದು ಸೋಮವಾರ ಚೆನ್ನೈನಲ್ಲಿ ಹುಟ್ಟಿದ ಪುನೀತ್ ರಾಜ್‍ಕುಮಾರ್ ಅವರು ಬಾಲ್ಯವನ್ನು ಅಲ್ಲಿಯೇ ಕಳೆದರು. ಅವರ ಮೂಲ ಹೆಸರು ಲೋಹಿತ್, ಬಾಲನಟನಾಗಿ ಲೋಹಿತ್ ಎಂದೇ ಹೆಸರಾಗಿದ್ದ ಅಪ್ಪು, ನಂತರ ಹೀರೋ ಆಗಿ ನಟಿಸುವ ಹೊತ್ತಿಗೆ ಪುನೀತ್ ರಾಜ್‍ಕುಮಾರ್ ಎಂದು ಹೆಸರು ಬದಲಾಯಿಸಿಕೊಂಡರು. ಇದನ್ನೂ ಓದಿ: ಪತಿ ನಿಧನದ ಸುದ್ದಿ ಕೇಳ್ತಿದ್ದಂತೆ ಕಣ್ಣೀರಿಡುತ್ತಲೇ ಮೌನಕ್ಕೆ ಶರಣಾದ ಪತ್ನಿ ಅಶ್ವಿನಿ
Advertisement
Advertisement
ಬಾಲ್ಯ: ಆತ್ಮೀಯರಿಗೆ ಅಪ್ಪು, ಅಭಿಮಾನಿಗಳಿಗೆ ಪವರ್‍ಸ್ಟಾರ್, ಚಿತ್ರರಂಗದ ಮಂದಿಗೆ ರಾಜಕುಮಾರ,ಪುನೀತ್ ಬಹುಮುಖ ಪ್ರತಿಭೆಯಾಗಿದ್ದರು. ಬಾಲನಟ, ಗಾಯಕ, ಟೆಲಿವಿಷನ್ ನಿರೂಪಕ, ನಿರ್ಮಾಪಕ, ಹಂಚಿಕೆದಾರ, ಉದ್ಯಮಿ ಹೀಗೆ ಹಲವು ಬಗೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು.
Advertisement
ಕನ್ನಡ ನಾಡು ಕಂಡ ಮೇರುನಟ ರಾಜ್‍ಕುಮಾರ್ ಮಗನಾದ ಪುನೀತ್, ಥೇಟ್ ರಾಜಕುವರನಂತೆಯೇ ಬೇಳೆದರು. ಅಮ್ಮನ ಅಕ್ಕರೆ, ತಂದೆಯ ವಾತ್ಸಲ್ಯ ಮತ್ತು ಸಹೋದರ, ಸಹೋದರಿಯರ ಪ್ರೀತಿಯನ್ನು ಉಂಡು ಬೇಳೆದ ಅಪ್ಪು ಆರು ವರ್ಷವರಿದ್ದಾಗಲೇ ಕರ್ನಾಟಕಕ್ಕೆ ಬಂದರು. ಹೀಗಾಗಿ ಪುನೀತ್ ತಮಿಳು ಮತ್ತು ಕನ್ನಡ ಎರಡನ್ನೂ ಲೀಲಾಜಾಲವಾಗಿ ಮಾತನಾಡುತ್ತಿದ್ದರು.
ಸಿನಿಪಯಣ: ಪುನೀತ್ ಆರು ತಿಂಗಳು ಮಗುವಿದ್ದಾಗ 1976 ರಲ್ಲಿ ತೆರೆಕಂಡ ಪ್ರೇಮದ ಕಾಣಿಕೆ ಚಿತ್ರದ ಮೂಲಕ ತೆರೆಯ ಮೇಲೆ ಕಾಣಿಸಿಕೊಂಡರು. ನಂತರ ಬಂದ ಸನಾದಿ ಅಪ್ಪಣ್ಣ, ತಾಯಿಗೆ ತಕ್ಕ ಮಗ, ವಸಂತ ಗೀತ, ಭೂಮಿಗೆ ಬಂದ ಭಗವಂತ, ಭಾಗ್ಯವಂತರು ಮುಂತಾದ ಚಿತ್ರಗಳಲ್ಲಿ ನಟಿಸಿ ತಮ್ಮ ಅಭಿನಯ ಪ್ರೌಢಿಮೆ ಮೆರೆದರು. ಇದನ್ನೂ ಓದಿ: ಅಪ್ಪು ಅಗಲಿಕೆಗೆ ಮಂತ್ರಾಲಯ ಶ್ರೀಗಳಿಂದ ಸಂತಾಪ
ಭಾಗ್ಯವಂತ ಚಿತ್ರದ ಬಾನ ದಾರಿಯಲ್ಲಿ ಸೂರ್ಯ, ಚಲಿಸುವ ಮೋಡಗಳು ಚಿತ್ರದ ಕಾಣದಂತೆ ಮಾಯವಾದನೋ, ಯಾರಿವನು ಚಿತ್ರದ ಕಣ್ಣಿಗೆ ಕಾಣುವ ದೇವರು ಮುಂತಾದ ಗೀತೆಗಳನ್ನು ಹಾಡಿ ಹಿನ್ನೆಲೆ ಗಾಯಕರಾಗಿಯೂ ಪ್ರಶಂಸೆ ಪಡೆದರು. ಚಲಿಸುವ ಮೋಡಗಳು ಮತ್ತು ಎರಡು ನಕ್ಷತ್ರಗಳು ಚಿತ್ರದ ಅಭಿನಯಕ್ಕಾಗಿ ಕರ್ನಾಟಕ ರಾಜ್ಯ ಪ್ರಶಸ್ತಿ ಪಡೆದರು. ಇದನ್ನೂ ಓದಿ: ರಾಜಕುಮಾರನಂತೆ ಬಾಳಬೇಕಿದ್ದ ನನ್ನ ತಮ್ಮ ಇನ್ನಿಲ್ಲ ಅಂತಂದ್ರೆ ನಂಬಲು ಅಸಾಧ್ಯ: ಸುಧಾರಾಣಿ
ನಾಯಕನಟ: 2002 ರಲ್ಲಿ ತೆರೆಕಂಡ ಪುರಿ ಅಪ್ಪು ಚಿತ್ರದಿಂದ ನಾಯಕನಟನಾಗಿ ಕನ್ನಡ ಚಿತ್ರರಂಗದಲ್ಲಿ ಎರಡನೇ ಇನ್ನಿಂಗ್ಸ್ ಆರಂಭಿಸಿದರು. ಈ ಚಿತ್ರ ಅದ್ಧೂರಿ ಯಶಸ್ಸು ಕಂಡಿತ್ತು. ನಂತರ ಅಭಿ, ವೀರ ಕನ್ನಡಿಗ, ಮೌರ್ಯ, ಆಕಾಶ್, ನಮ್ಮ ಬಸವ, ಅಜಯ್ ಮುಂತಾದ ಚಿತ್ರಗಳು ಬಾಕ್ಸಾಫೀಸಿನಲ್ಲಿ ಒಳ್ಳೆಯ ದಾಖಲೆ ಮಾಡಿ ಅದ್ದೂರಿ ಪ್ರದರ್ಶನ ಕಂಡವು. ಆಗ ಪಪು ಅವರ ಲಕ್ ಬದಲಾಯಿತು. ನಂತರ ಅಪ್ಪು ನಟನೆ ಮಾಡಿದ ಪ್ರತಿಯೊಂದು ಸಿನಿಮಾ ಕೂಡ ಒಳ್ಳೆಯ ಪ್ರದರ್ಶನ ಕಂಡವು.
ವೈವಾಹಿಕ ಜೀವನ: 1999 ಡಿಸೆಂಬರ್ 1ರಂದು ಚಿಕ್ಕಮಂಗಳೂರಿನ ಅಶ್ವನಿ ರೇವಂತ್ ಅವರನ್ನು ಪ್ರೀತಿಸಿ ವಿವಾಹ ಆದರು. ಆರಂಭದಲ್ಲಿ ಇಬ್ಬರೂ ಸ್ನೇಹಿತರಾಗಿದ್ದರು. ಸ್ನೇಹ ಪ್ರೀತಿಗೆ ತಿರುಗಿದ ಮೇಲೆ ಪೋಷಕರ ಒಪ್ಪಿಗೆ ಪಡೆದು ಮದುವೆಯಾಗಿದ್ದರು. ಇವರಿಗೆ ಧೃತಿ ಹಾಗೂ ವಂದಿತಾ ಇಬ್ಬರು ಹೆಣ್ಣು ಮಕ್ಕಳಿದ್ದಾರೆ.
ನಟನೆ, ಸಿನಿಮಾ, ನಿರ್ಮಾಣವೆಂದು ಎಷ್ಟು ಬ್ಯುಸಿ ಇದ್ದರು ಕುಟುಂಬಕ್ಕಾಗಿ ಸಮಯವನ್ನು ಮೀಸಲು ಇಡುತ್ತಿದ್ದರು. ಕುಟುಂಬದ ಜೊತೆಗೆ ವಿದೇಶ ಪ್ರವಾಸ ಹೋಗುತ್ತಾ ಸಮಯವನ್ನು ಕಳೆಯುತ್ತಿದ್ದರು. ಪವರ್ ಸ್ಟಾರ್ ಪರ್ಫೆಕ್ಟ್ ಫ್ಯಾಮಿಲಿ ಮ್ಯಾನ್ ಆಗಿದ್ದರು.
ಗಾಯಕ: ಗಾಯಕನಾಗಿ ಸುಮಾರು 50ಕ್ಕೂ ಹೆಚ್ಚು ಚಿತ್ರಗಳಲ್ಲಿ ಹಾಡಿರುವ ಪುನೀತ್, ಗಾಯನದಿಂದ ಬರುವ ಸಂಪೂರ್ಣ ಹಣವನ್ನು ಸಮಾಜಸೇವೆಗೆ ವಿನಿಯೋಗಿಸುತ್ತಾರೆ. ಮೈಸೂರಿನ ಶಕ್ತಿ ಧಾಮ ಆಶ್ರಮದ ಮೂಲಕ ಸಮಾಜ ಸೇವೆಯಲ್ಲಿ ತೊಡಗಿರುವ ಪುನೀತ್ `ಬೆಂಗಳೂರು ಪ್ರೀಮಿಯರ್ ಫುಟ್‍ಬಾಲ್ ತಂಡದ ಒಡೆತನವನ್ನು ಹೊಂದಿದ್ದಾರೆ. ಕರ್ನಾಟಕ ಸರ್ಕಾರದ ನಂದಿನಿ ಹಾಲು ಉತ್ಪನ್ನಗಳು ಮತ್ತು ಎಲ್‍ಇಡಿ ಬಲ್ಬ್‍ಗಳ ರಾಯಭಾರಿ. ಒಂದು ಆವೃತ್ತಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ರಾಯಭಾರಿಯಾಗಿದ್ದರು. ಇದನ್ನೂ ಓದಿ: ಕರಗದ ಅಪ್ಪು ಅಭಿಮಾನಿಗಳ ಸಾಗರ – ನೂಕುನುಗ್ಗಲು, ಬ್ಯಾರಿಕೇಡ್ ತಳ್ಳಿ ಆಕ್ರಂದನ
ನಿರೂಪಕ, ನಿರ್ಮಾಪಕ: ಕಿರುತೆರೆಯಲ್ಲಿ ನಿರೂಪಕರಾಗಿ ಕನ್ನಡದ ಕೋಟ್ಯಧಿಪತಿಯ ಎರಡು ಸೀಸನ್‍ಗಳನ್ನು ಮತ್ತು ಫ್ಯಾಮಿಲಿ ಪವರ್ ಎಂಬ ರಿಯಾಲಿಟಿ ಶೋಗಳನ್ನು ನಿರೂಪಿಸಿದ್ದಾರೆ. ವೀಕೆಂಡ್ ವಿಥ್ ರಮೇಶ್ ಕಾರ್ಯಕ್ರಮದ ಮೊಟ್ಟಮೊದಲ ಅತಿಥಿಯಾಗಿ ಭಾಗವಹಿಸಿದ್ದು ವಿಶೇಷವಾಗಿದೆ. ಕವಲುದಾರಿ, ಮಯಾಬಜಾರ್ ಸಿನಿಮಾವನ್ನು ತಮ್ಮ ಹೋಮ್ ಬ್ಯಾನರ್‍ನಲ್ಲಿಯೇ ನಿರ್ಮಿಸಿದ್ದಾರೆ. ಪುನೀತ್ ತಮ್ಮ ಪ್ರೋಡಕ್ಷನ್ ಹೌಸ್ ಮೂಲಕ ಕಿರುತೆರೆ ಧಾರಾವಾಹಿ ಕೂಡ ನಿರ್ಮಿಸಿದ್ದಾರೆ. ತಾಯಿಯ ನೆನಪಿನಲ್ಲಿ ಪಿ.ಅರ್.ಕೆ ಆಡಿಯೋ ಕಂಪನಿಯೊಂದನ್ನು ಸ್ಥಾಪಿಸಿದ್ದಾರೆ. ಇದನ್ನೂ ಓದಿ: ಉತ್ತರ ಕನ್ನಡ ಜಿಲ್ಲೆಯ ಬಗ್ಗೆ ಕೊನೆಯದಾಗಿ ವಿಶೇಷ ಪೋಸ್ಟ್ ಮಾಡಿದ್ದ ಅಪ್ಪು
ಪ್ರಶಸ್ತಿ: ಬಾಲನಟನಾಗಿದ್ದಾಗ ಚಲಿಸುವ ಮೋಡಗಳು ಮತ್ತು ಎರಡು ನಕ್ಷತ್ರಗಳು ಚಿತ್ರದ ಅಭಿನಯಕ್ಕಾಗಿ ಕರ್ನಾಟಕ ರಾಜ್ಯ ಪ್ರಶಸ್ತಿ ಪಡೆದರು. ನಾಯಕನಾಗಿ ನಟಿಸಿದ ಮೊದಲ ಹತ್ತು ಚಿತ್ರಗಳು ಶತದಿನ ಪೂರೈಸಿದ್ದು ದಾಖಲೆ. ನಾಯಕನಾಗಿ ಎರಡು ರಾಜ್ಯ ಪ್ರಶಸ್ತಿ, ನಾಲ್ಕು ಫಿಲ್ಮಫೇರ್, ಎರಡು ಸೈಮಾ ಹೀಗೆ ಹತ್ತು ಹಲವು ಪ್ರಶಸ್ತಿ ಪಡೆದಿದ್ದಾರೆ.