ಪುನೀತ್ ರಾಜ್ಕುಮಾರ್ (Puneeth Rajkumar) ಅವರ 49ನೇ ವರ್ಷದ ಹುಟ್ಟುಹಬ್ಬವನ್ನು (Birthday) ಅಭಿಮಾನಿಗಳು ಅದ್ಧೂರಿಯಾಗಿ ಸೆಲೆಬ್ರೇಟ್ ಮಾಡುತ್ತಿದ್ದಾರೆ. ಅಭಿಮಾನಿಗಳ ಜೊತೆ ಅಪ್ಪು ಕುಟುಂಬ ಕೂಡ ಪುನೀತ್ ಸಮಾಧಿಯ ದರ್ಶನ ಪಡೆದಿದ್ದಾರೆ. ಈ ವೇಳೆ, ಪುನೀತ್ ಸ್ಥಾನವನ್ನು ಯಾರು ತುಂಬೋಕೆ ಆಗಲ್ಲ. ಆದರೆ ಯುವನನ್ನು ಬೆಳೆಸಿ, ಹರಸಿ ಎಂದು ರಾಘಣ್ಣ (Raghavendra Rajkumar) ಅಭಿಮಾನಿಗಳಲ್ಲಿ ವಿಶೇಷ ಮನವಿ ಮಾಡಿದ್ದಾರೆ.
ನಮ್ಮೆಲ್ಲರ ಪವರ್ ಅಪ್ಪು ಅನ್ನೋ ಮ್ಯಾರಥಾನ್. ಓಡೋದು ಅಂದರೆ ಪುನೀತ್ಗೆ ತುಂಬಾ ಇಷ್ಟ. ಉತ್ತಮ ಆರೋಗ್ಯಕ್ಕಾಗಿ ಓಡಬೇಕು ಎಂದು ರಾಘಣ್ಣ ಫ್ಯಾನ್ಸ್ಗೆ ಆರೋಗ್ಯದ ಬಗ್ಗೆ ಕಿವಿ ಮಾತು ಹೇಳಿದ್ದಾರೆ. ಇದನ್ನೂ ಓದಿ:ಸಹೋದರ ಅಪ್ಪುಗೆ ವಿಶೇಷವಾಗಿ ಶುಭಕೋರಿದ ಶಿವಣ್ಣ
Advertisement
ಪುನೀತ್ ಬರ್ತ್ಡೇ ದಿನವನ್ನು ಅಪ್ಪು ಸ್ಫೂರ್ತಿ ದಿನವನ್ನಾಗಿ ಸರಿಯಾಗಿ ಆಚರಿಸಿ, ಇದು ಅಭಿಮಾನಿಗಳ ಹುಟ್ಟುಹಬ್ಬ ಎಂದು ರಾಘಣ್ಣ ಮಾತನಾಡಿದ್ದಾರೆ. ಇನ್ನೂ ಒಳ್ಳೆಯ ಕೆಲಸ ಮಾಡಲು ಅಪ್ಪುಗೆ ಆಯುಷ್ಯ ಸಾಲಲಿಲ್ಲ ಎಂದು ರಾಘಣ್ಣ ಭಾವುಕರಾಗಿದ್ದಾರೆ. ಪ್ರೀತಿಯಿಂದ ಜನರಿಗೆ ಏನು ಹಂಚ್ತಿರಾ ಹಂಚಿ. ಅಲ್ಲಿ ಅಪ್ಪು ಕಾಣ್ತಾರೆ ಎಂದು ರಾಘಣ್ಣ ಮಾತನಾಡಿದ್ದಾರೆ. ಸ್ಫೂರ್ತಿ ದಿನ ಬಂದರೆ ಮಕ್ಕಳು ಖುಷಿಯಾಗಬೇಕು. ಈ ದಿನವನ್ನ ಅಪ್ಪುಗಾಗಿ ಗಿಡ ನೆಡಿ, ಉಚಿತ ಶಿಕ್ಷಣ ನೀಡಿ ಸಮಾಜಮುಖಿ ಕೆಲಸ ಮಾಡಿ ಎಂದು ರಾಘಣ್ಣ ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ. ಪುನೀತ್ ಸ್ಥಾನವನ್ನು ಯಾರು ತುಂಬೋಕೆ ಆಗಲ್ಲ. ಆದರೆ ಅಪ್ಪುರಂತೆಯೇ ಮಗ ಯುವನನ್ನು ಬೆಳೆಯಿಸಿ ಹಾರೈಸಿ ಎಂದು ರಾಘಣ್ಣ ಮಾತನಾಡಿದ್ದಾರೆ.
Advertisement
Advertisement
ಈ ವೇಳೆ, ಚಿಕ್ಕ ವಯಸ್ಸಿನಿಂದಲೇ ನನ್ನ ಚಿಕ್ಕಪ್ಪ ನನಗೆ ಸ್ಫೂರ್ತಿ ಎಂದು ಯುವ ಮಾತನಾಡಿದ್ದಾರೆ.
ಚಿಕ್ಕಮ್ಮ ಅಶ್ವಿನಿ ಪುನೀತ್ರಾಜ್ಕುಮಾರ್ ಊರಲ್ಲಿ ಇಲ್ಲ ಎಂದು ಯುವ ಮಾತನಾಡಿದ್ದಾರೆ. 3 ದಿನದ ಹಿಂದೆ ಜಾಕಿ ಚಿತ್ರವನ್ನ ನೋಡ್ಕೊಂಡು ಬಂದೆ. ಬಹಳ ಖುಷಿಯಾಯ್ತು ಎಂದು ಯುವ ಮಾತನಾಡಿದ್ದಾರೆ.