ಬೆಂಗಳೂರು: ನಗುವಿನ ಅರಸ ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ (Puneeth Rajkumar) ಅಗಲಿಕೆಗೆ ಭರ್ತಿ ಮೂರು ವರ್ಷ. 3 ವರ್ಷವಲ್ಲ, ಇನ್ನೂ ನೂರು ವರ್ಷ ಕಳೆದರೂ ಅಪ್ಪು (Appu) ಮರೆಯಲಾಗದ ಮಾಣಿಕ್ಯ. 3ನೇ ವರ್ಷದ ಅಪ್ಪು ಪುಣ್ಯ ಸ್ಮರಣೆಯಲ್ಲಿ ರಾಜ್ಯದ ಮೂಲೆ ಮೂಲೆಗಳಿಂದ ಅಭಿಮಾನಿಗಳು ಭಾಗಿಯಾಗಿದ್ದಾರೆ.
Advertisement
ನಗುಮೊಗದ ಒಡೆಯ ಪುನೀತ್ ಸ್ಟಾರ್ ಬ್ಯಾಕ್‌ಗ್ರೌಂಡ್‌ನಿಂದ ಬಂದಿದ್ದರೂ ಹಮ್ಮು ಬಿಮ್ಮಿಲ್ಲದೇ ಎಲ್ಲರನ್ನೂ ತನ್ನವರೆಂದು ಬಾಚಿ ತಬ್ಬಿಕೊಳ್ಳುತ್ತಿದ್ದರು. ಹೀಗಾಗಿಯೇ ಅವರನ್ನು ಎಲ್ಲರೂ ಪ್ರೀತಿಯಿಂದ ಅಪ್ಪು ಎಂದೇ ಕರೆಯುತ್ತಿದ್ದರು. ಅಪ್ಪು ಕಳೆದುಕೊಂಡು ಇಂದಿಗೆ ಭರ್ತಿ ಮೂರು ವರ್ಷಗಳು. ಇಂದಿಗೂ ಕೂಡಾ ಅವರನ್ನು ಕಳೆದುಕೊಂಡ ದುಃಖ ಮಾತ್ರ ಅವರ ಭಕ್ತಗಣದ ಎದೆಯಿಂದ ಮಾಸಿಲ್ಲ. ಇದನ್ನೂ ಓದಿ: ಸುದೀಪ್ ತಾಯಿ ಅಗಲಿಕೆಗೆ ಸಂತಾಪ ಸೂಚಿಸಿದ ಪ್ರಧಾನಿ ಮೋದಿ- ಪ್ರತಿಕ್ರಿಯಿಸಿದ ಕಿಚ್ಚ
Advertisement
Advertisement
ಅಪ್ಪು 3ನೇ ವರ್ಷದ ಪುಣ್ಯಸ್ಮರಣೆಯಲ್ಲಿ ಪತ್ನಿ ಅಶ್ವಿನಿ, ರಾಘವೇಂದ್ರ ರಾಜ್‌ಕುಮಾರ್, ವಿನಯ್ ರಾಜ್‌ಕುಮಾರ್, ಯುವರಾಜ್ ಕುಮಾರ್, ಅಪ್ಪು ಪುತ್ರಿಯರು ಭಾಗಿಯಾಗಿದ್ದಾರೆ. ಕಂಠೀರವ ಸ್ಟುಡಿಯೋದಲ್ಲಿ ಅಪ್ಪು ಸಮಾಧಿ ಬಳಿ ಇಷ್ಟದ ತಿನಿಸುಗಳನ್ನಿಟ್ಟು ಪೂಜೆ ಸಲ್ಲಿಸಿದ್ದಾರೆ. ಸಮಾಧಿಯನ್ನ ವಿಶೇಷವಾಗಿ ಹೂವುಗಳಿಂದ, ದೀಪಗಳಿಂದ ಅಲಂಕಾರ ಮಾಡಲಾಗಿದೆ. ರಾಜ್ಯದ ಮೂಲೆ ಮೂಲೆಗಳಿಂದ ಅಭಿಮಾನಿಗಳ ದಂಡು ಅಪ್ಪು ಸಮಾಧಿ ಬಳಿ ಜಮಾಯಿಸಿ ನೆಚ್ಚಿನ ನಟನಿಗೆ ನಮನ ಸಲ್ಲಿಸುತ್ತಿದ್ದಾರೆ.
Advertisement
ಅಪ್ಪು ಇಲ್ಲ ಎಂದು ಅವರ ಅಭಿಮಾನಿಗಳು ಸುಮ್ಮನೆ ಕುಳಿತಿಲ್ಲ. ಅವರ ಹೆಸರಿನಲ್ಲಿ ಸಾಕಷ್ಟು ಪುಣ್ಯದ ಕೆಲಸಗಳನ್ನು ವರ್ಷಪೂರ್ತಿ ಮಾಡುತ್ತಿದ್ದಾರೆ. ಇಂದು ಪುಣ್ಯ ಸ್ಮರಣೆ ವಿಶೇಷವಾಗಿ ಕಂಠೀರವ ಸ್ಟುಡಿಯೋದಲ್ಲಿ ಹಾಗೂ ರಾಜ್ಯದ ಮೂಲೆ ಮೂಲೆಗಳಲ್ಲೂ ಅನ್ನದಾನ, ರಕ್ತದಾನ ಶಿಬಿರಗಳು ನಡೆಯುತ್ತಿವೆ. ಅಷ್ಟೇ ಅಲ್ಲದೇ ಇತ್ತೀಚೆಗೆ ಅಪ್ಪು ಅಭಿಮಾನಿ ಯಲಗಚ್ಚಿನಲ್ಲಿ ಗುಡಿಯೊಂದನ್ನ ಕಟ್ಟಿ ಅಭಿಮಾನ ಮೆರೆದಿದ್ದಾನೆ. ಅಲ್ಲೂ ಕೂಡಾ ಇಂದು ವಿಶೇಷ ಪೂಜೆ ನಡೆಯಲಿದೆ.