ಗದಗ: ಯುವರತ್ನ, ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರಿಗೆ ಇಂದು ಎಲ್ಲಾ ಚಿತ್ರಮಂದಿರಗಳಲ್ಲಿ ಅಭಿಮಾನಿಗಳು ಸ್ವರ ಶ್ರದ್ಧಾಂಜಲಿ ಅರ್ಪಿಸಲಿದ್ದಾರೆ.
ಗಜೇಂದ್ರಗಡ ತಾಲೂಕಿನ ರಾಜೂರ ಗ್ರಾಮದ ಮಂಜುನಾಥ ಹಾದಿಮನಿ ಎಂಬ ಕಲಾವಿದ ಅಭಿಮಾನಿ, ಅಪ್ಪು ಅವರ ಭಾವಚಿತ್ರ ತ್ರಿ-ಡಿ (3D)ಪೇಂಟಿಂಗ್ ಮಾಡುವ ಮೂಲಕ ಶ್ರದ್ಧಾಂಜಲಿ ಅರ್ಪಿಸಿದ್ದಾರೆ. ಕಲಾವಿದ ಮಂಜುನಾಥ ವಿಶಿಷ್ಟವಾಗಿ ಪುನೀತ್ ರಾಜ್‍ಕುಮಾರ್ ಅವರನ್ನ ನೆನೆದಿದ್ದಾರೆ. ಇದನ್ನೂ ಓದಿ: ಜಿಮ್ ಮಾಡೋವ್ರಿಗೆ ಅಪ್ಪು ಸಾವು ಬಿಗ್ ಶಾಕ್ – ಜಿಮ್‍ಗೆ ಹೋಗದಂತೆ ಮಕ್ಕಳಿಗೆ ಪೋಷಕರ ಆಕ್ಷೇಪ
ಯುವ ಕಲಾವಿದ ಮಂಜುನಾಥ ಹಾದಿಮನಿ ಅವರು ಅಪ್ಪುವಿನ ಅಪ್ಪಟ ಅಭಿಮಾನಿ. ಒಂದಲ್ಲಾ ಒಂದು ದಿನ ಅಪ್ಪು ಅವರನ್ನು ಭೇಟಿಯಾಗಬೇಕು. ಯಾವುದಾರೊಂದು ವೇದಿಕೆಯಲ್ಲಿ ಅವರ ಕಣ್ಮುಂದೆ ಅವರ ಭಾವಚಿತ್ರ ಬಿಡಿಸಬೇಕು ಎಂದುಕೊಂಡಿದ್ದ. ವಿಧಿಯಾಟಕ್ಕೆ ಯುವ ಕಲಾವಿದನ ಕನಸು ಕನಸಾಗಿಯೇ ಉಳಿಯಿತು. ಈಗ ಅವರು ಇಲ್ಲ ಅನ್ನೋದನ್ನ ಅರಗಿಸಿಕೊಳ್ಳಲು ಅದೆಷ್ಟೋ ಜನರಿಗೆ ಆಗುತ್ತಿಲ್ಲ. ಇದನ್ನೂ ಓದಿ: ಕೇರಳದಲ್ಲಿ120 ವರ್ಷಗಳಲ್ಲಿಯೇ ಅತ್ಯಧಿಕ ಮಳೆ
ರಾಜ್ಯದ ಅನೇಕ ಚಿತ್ರಮಂದಿರಗಳಲ್ಲಿ ಅಪ್ಪುಗೆ ಸ್ವರ ಶ್ರದ್ಧಾಂಜಲಿ, ನುಡಿನಮನ ಸಲ್ಲಿಸಲಿದ್ದಾರೆ. ಹೀಗಾಗಿ ಗದಗ ಯುವ ಕಲಾವಿದ ಸಹ ತನ್ನ ಕೈ ಚಳಕದಿಂದ ಅವರ ಸುಂದರ ಚಿತ್ರ ಬಿಡಿಸುವ ಮೂಲಕ ಶ್ರದ್ಧಾಂಜಲಿ ಅರ್ಪಿಸಿದರು. ಪುನೀತ್ ಅವರನ್ನ ಬಣ್ಣಗಳಲ್ಲಿ ಸೃಷ್ಟಿಸಿ ಗೌರವ ಸಲ್ಲಿಸಿದ ಮಂಜುನಾಥ್ ಕಲೆಗೆ ವ್ಯಾಪಕ ಮೆಚ್ಚುಗೆ ವ್ಯಕ್ತಿವಾಗಿದೆ.