CinemaDistrictsKarnatakaLatestMain PostSandalwood

ಪುನೀತ್ ರಾಜ್ ಕುಮಾರ್ ಅವರಿಗೆ ಮರಣೋತ್ತರ ಬಸವಶ್ರೀ ಪುರಸ್ಕಾರ ಪ್ರದಾನ

ಟ ಪುನೀತ್ ರಾಜ್ ಕುಮಾರ್ ಅವರಿಗೆ ಚಿತ್ರದುರ್ಗದ ಮುರುಘಾಮಠ ನೀಡುವ ಬಸವಶ್ರೀ ರಾಷ್ಟ್ರೀಯ ಪುರಸ್ಕಾರ ಪ್ರದಾನ ಮಾಡಲಾಯಿತು. ಮುರಾಘಮಠದ ಅನುಭವ ಮಂಟಪದಲ್ಲಿ ನಡೆದ ಕಾರ್ಯಕ್ರಮದಲ್ಲಿ ಡಾ.ಶಿವಮೂರ್ತಿ ಮುರುಘಾ ಶರಣರಿಂದ ಪುನೀತ್ ಪತ್ನಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಪ್ರಶಸ್ತಿ ಸ್ವೀಕರಿಸಿದರು. ಇದನ್ನೂ ಓದಿ : ಬೆಳ್ಳಿತೆರೆಯಲ್ಲಿ ಕಾಯಕಯೋಗಿ ಬಸವಣ್ಣ: ಯಾರೆಲ್ಲ ಪಾತ್ರ ಮಾಡಿದ್ದಾರೆ ಗೊತ್ತಾ?

ಐದು ಲಕ್ಷ ನಗದು ಹಾಗೂ ಪ್ರಶಸ್ತಿ ಫಲಕ ಒಳಗೊಂಡಿರುವ ಈ ಪ್ರಶಸ್ತಿಯನ್ನು ಈಗಾಗಲೇ ಹಲವು ಗಣ್ಯರಿಗೆ ನೀಡಲಾಗಿದೆ. ಸಿನಿಮಾ ಕ್ಷೇತ್ರದ ಸಾಧನೆಗಾಗಿ ಇದೇ ಮೊದಲು ನಟರೊಬ್ಬರಿಗೆ ಈ ಪ್ರಶಸ್ತಿ ಸಂದಿರುವುದು ವಿಶೇಷ. ಅಪ್ಪು ಅಭಿನಯದ ಹಾಡಿಗೆ ವೇದಿಕೆಯಲ್ಲಿ ಮಕ್ಕಳ ನೃತ್ಯ ಮಾಡುತ್ತಿರುವಾಗ  ವೇದಿಕೆಗೆ ಆಗಮಿಸಿದ ಅಶ್ವಿನಿ ಪುನೀತ್ ರಾಜಕುಮಾರ್, ಮುರುಘಾಮಠದ ಡಾ.ಶಿವಮೂರ್ತಿ ಮುರುಘಾ ಶರಣರಿಂದ ಪ್ರಶಸ್ತಿ ಸ್ವೀಕರಿಸಿದ್ದು ವಿಶೇಷವಾಗಿತ್ತು. ಇದನ್ನೂ ಓದಿ : ಚಲಿಸುವ ಬೋಟ್ ನಲ್ಲಿ ಚೆಲುವೆ ರಾಧಿಕಾ ಕುಮಾರಸ್ವಾಮಿ

ಈ ಕಾರ್ಯಕ್ರಮದಲ್ಲಿ ಕೃಷಿ ಸಚಿವ ಬಿ.ಸಿ.ಪಾಟೀಲ್, ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ, ಎಂಎಲ್ ಸಿ ಕೆ.ಎಸ್.ನವೀನ್, ಡಿಸಿ ಕವಿತಾ ಮನ್ನಿಕೇರಿ, ಜಿ.ಪಂ. ಸಿಇಓ ಡಾ.ನಂದಿನಿದೇವಿ, ಎಸ್ಪಿ ಕೆ.ಪರಶುರಾಮ್ ಉಪಸ್ಥಿತರಿದ್ದರು. ವಚನ ಗಾಯನದೊಂದಿಗೆ ಬಸವಶ್ರೀ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಆರಂಭವಾಯಿತು. ಇದನ್ನೂ ಓದಿ: ಗ್ರ್ಯಾಮಿ ಅವಾರ್ಡ್ ಮ್ಯೂಸಿಕ್ ಕೇಳಿದಾಗ ಬಹಳ ಖುಷಿ ಆಯ್ತು: ಸಿಎಂ ಬೊಮ್ಮಾಯಿ

ಬಸವ ಜಯಂತಿ ಪ್ರಯುಕ್ತ ಸರ್ವ ಶರಣರ ಭಾವಚಿತ್ರಕ್ಕೆ ಮುರುಘಾಶ್ರೀ ನೇತೃತ್ವದಲ್ಲಿ ಪುಷ್ಪನಮನ ಸಲ್ಲಿಸಲಾಯಿತು. ಅಶ್ವಿನಿ ಪುನೀತ್ ರಾಜಕುಮಾರ್, ಬಿ.ಸಿ.ಪಾಟೀಲ್ ಪುಷ್ಪನಮನ ಸಲ್ಲಿಸಿದರು.  ನಂತರ ಪ್ರಶಸ್ತಿ ಪಡೆಯುವ ವೇಳೆ ಅಶ್ವಿನಿ ಪುನೀತ್ ರಾಜ್ ಕುಮಾರ್, ಭಾವುಕರಾದರು. ಬಳಿಕ ಮುರುಘಾಮಠಕ್ಕೆ ಧನ್ಯವಾದ ಅರ್ಪಸಿದರು.

Leave a Reply

Your email address will not be published.

Back to top button