ಬೆಂಗಳೂರು: ಅಪ್ಪು ಸರ್ ಧ್ವನಿಯನ್ನು ಉಳಿಸಿಕೊಳ್ಳೋಕೆ ಆಗಲಿಲ್ಲ ಎಂದು ಜೇಮ್ಸ್ ನಿರ್ದೇಶಕ ಭರ್ಜರಿ ಚೇತನ್ ಭಾವುಕರಾದರು.
ನಗರದಲ್ಲಿ ಜೇಮ್ಸ್ ಚಿತ್ರದ ಸುದ್ದಿಗೋಷ್ಠಿ ನಡೆಸಿ ಮಾತನಾಡುತ್ತಾ ವೇದಿಕೆಯ ಮೇಲೆಯೇ ಭಾವುಕರಾದರು. ಅಪ್ಪು ಸರ್ ಬಾಯಿಂದ ಬಂದ ದಿನಾಂಕಕ್ಕೆ ಚಿತ್ರ ರಿಲೀಸ್ ಆಗ್ತಿದೆ. ದೊಡ್ಮನೆ ಋಣ ನಮ್ಮ ಮೇಲಿದೆ. ಅಪ್ಪು ಸರ್ ಧ್ವನಿಯನ್ನ ಉಳಿಸಿಕೊಳ್ಳೋಕೆ ಆಗಲಿಲ್ಲ. ಶಿವಣ್ಣ ಡಬ್ ಮಾಡಿದ್ದನ್ನ ನೆನಪಿಸಿಕೊಳ್ತೀನಿ ಎಂದರು.
ರಾಘಣ್ಣ ಸಪೋರ್ಟ್ ಕೂಡ ತುಂಬಾ ಇದೆ. ‘ಜೇಮ್ಸ್’ ನನ್ನ 4ನೇ ಸಿನಿಮಾ, 5 ಭಾಷೆಗಳಲ್ಲಿ ಜೇಮ್ಸ್ ರಿಲೀಸ್ ಆಗುತ್ತೆ. ಸಿನಿಮಾದಲ್ಲಿ ಒಟ್ಟು 5 ಹಾಡುಗಳಿವೆ. ಸಿನಿಮಾ ನಾನು ಅಂದುಕೊಂಡಿದ್ದಕ್ಕಿಂತ ಬೇರೆ ರೀತಿಯಲ್ಲಿ ಬಂದಿದೆ ಎಂದು ಹೇಳಿದರು. ಇದನ್ನೂಓದಿ: ಕೊಪ್ಪಳಕ್ಕೆ ಏಕ್ ಲವ್ ಯಾ ತಂಡ ಭೇಟಿ- ಪ್ರೇಮ್, ರಕ್ಷಿತಾ ನೋಡಲು ಮುಗಿಬಿದ್ದ ಅಭಿಮಾನಿಗಳು
ಜೇಮ್ಸ್ ಪವರ್ ಸ್ಟಾರ್ ಪುನೀತ್ ಕೊನೆಯ ಸಿನಿಮಾ. ಅಪ್ಪು ಹುಟ್ಟುಹಬ್ಬ (ಮಾರ್ಚ್ -17) ರಂದು ರಾಜ್ಯಾದ್ಯಂತ ರಿಲೀಸ್ ಆಗಲಿದೆ. ಸುದ್ದಿಗೋಷ್ಠಿ ವೇಳೆ ಶಿವರಾಜ್ ಕುಮಾರ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ನಿರ್ದೇಶಕ ಚೇತನ್, ನಿರ್ಮಾಪಕ ಕಿಶೋರ್ ಪತ್ತಿಕೊಂಡ ಭಾಗಿಯಾಗಲಿದ್ದಾರೆ. ಇದನ್ನೂಓದಿ: ಸೋನಾಕ್ಷಿ ಸಿನ್ಹಾ ವಿರುದ್ಧ ಜಾಮೀನು ರಹಿತ ವಾರೆಂಟ್ ಜಾರಿ