– 11ಕ್ಕೆ ಏರಿದ ಅಪ್ಪು ಅಭಿಮಾನಿಗಳ ಸಾವು
ತುಮಕೂರು: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಅಕಾಲಿಕ ನಿಧನಕ್ಕೆ ದೇಶಾದ್ಯಂತ ಜನ ಕಂಬನಿ ಮಿಡಿದಿದ್ದಾರೆ. ಇತ್ತ ಶಿವಣ್ಣ ಮನವಿ ಮಾಡಿಕೊಂಡರೂ ಅಭಿಮಾನಿಗಳು ಮಾತ್ರ ತಮ್ಮ ಅಮೂಲ್ಯವಾದ ಜೀವವನ್ನು ಕಳೆದುಕೊಳ್ಳುತ್ತಿರುವುದು ವಿಪರ್ಯಾಸ.
ತುಮಕೂರಿನಲ್ಲಿ ಭರತ್ (30) ಎಂಬ ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಮೂಲಕ ಪುನೀತ್ ಅಭಿಮಾನಿಗಳ ಸಾವಿನ ಸಂಖ್ಯೆ 11ಕ್ಕೆ ಏರಿಕೆ ಆಗಿದೆ. ಹೆಬ್ಬೂರಿನ ಕೋಡಿಪಾಳ್ಯ ಗ್ರಾಮದಲ್ಲಿ ಅಪ್ಪು ಅಭಿಮಾನಿಯಾಗಿದ್ದ ಭರತ್ ನೇಣಿಗೆ ಶರಣಾಗಿದ್ದಾನೆ. ಇದನ್ನೂ ಓದಿ: ಪುನೀತ್ ಸಮಾಧಿ ದರ್ಶನಕ್ಕೆ ಅಭಿಮಾನಿಗಳಿಗೆ ಕೊನೆಗೂ ಅವಕಾಶ
ಅಪ್ಪು ಸಾವನ್ನು ಸಹಿಸಲಾಗುತ್ತಿಲ್ಲ. ಅಪ್ಪು ಹೋದ ಜಾಗಕ್ಕೆ ನಾನು ಹೋಗುತ್ತಿದ್ದೇನೆ. ಪುನೀತ್‍ರಂತೆ ನನ್ನ ಕಣ್ಣನ್ನೂ ದಾನ ಮಾಡಿ ಎಂದು ಡೆತ್ ನೋಟ್ ಬರೆದಿಟ್ಟು ಭರತ್ ನೇಣಿಗೆ ಶರಣಾಗಿದ್ದಾನೆ. ಭರತ್ ಹೇಳಿದಂತೆ ಕುಟುಂಬಸ್ಥರು ಆತನ ಕಣ್ಣುಗಳನ್ನು ದಾನ ಮಾಡಿದರು. ಇದನ್ನೂ ಓದಿ: ಅಪ್ಪು ಜೊತೆಗಿನ ಲಾಸ್ಟ್ ಸೆಲ್ಫಿ ಶೇರ್ ಮಾಡಿದ ರಾಘಣ್ಣ
ಅಭಿಮಾನಿಗಳಲ್ಲಿ ಶಿವಣ್ಣ ಮನವಿ:
ಅಪ್ಪುವಿನ ಅಕಾಲಿಕ ನಿಧನ ನಮಗಿಂತ ನೂರು ಪಟ್ಟು ಹೆಚ್ಚು ಅಭಿಮಾನಿಗಳಿಗೆ ನೋವುಂಟು ಮಾಡಿದೆ. ಅಭಿಮಾನಿಗಳ ಪ್ರೀತಿ ಪಡೆಯಲು ನಮ್ಮ ಕುಟುಂಬ ಪುಣ್ಯ ಮಾಡಿದೆ. ಅಪ್ಪಾಜಿಯವರು ಅಷ್ಟು ಪ್ರೀತಿ ಗಳಿಸಿ ಕೊಟ್ಟು ಹೋಗಿದ್ದಾರೆ. ಪುನೀತ್ ಕೂಡ ಅಷ್ಟೇ ಪ್ರೀತಿ ಗಳಿಸಿಕೊಂಡು ಹೋಗಿದ್ದಾನೆ. ಅಭಿಮಾನಿಗಳು ಬೇರೆ ತರಹದ ಕೆಟ್ಟ ನಿರ್ಧಾರ ತೆಗೆದುಕೊಳ್ಳಬೇಡಿ. ಅಪ್ಪು ನಿಧನದ ಬಳಿಕ ಎಷ್ಟೋ ಫ್ಯಾನ್ಸ್ ಜೀವ ಬಿಟ್ಟಿದ್ದಾರಂತೆ ಅಂತ ಗೊತ್ತಾಯಿತು. ದಯವಿಟ್ಟು ಯಾರು ಅಂತಹ ನಿರ್ಧಾರ ಕೈಗೊಳ್ಳಬೇಡಿ. ಯಾಕಂದ್ರೆ ನಿಮ್ಮ ಫ್ಯಾಮಿಲಿಗೆ ನಿಮ್ಮ ಜೀವ ಮುಖ್ಯವಾಗಿರುತ್ತದೆ ಎಂದು ಶಿವಣ್ಣ ಮಾಡಿಕೊಂಡಿದ್ದರು.