ಪವರ್ ಸ್ಟಾರ್ ವಿಧಿವಶ- ಚಾಮರಾಜನಗರದಲ್ಲಿ ಸ್ವಯಂ ಪ್ರೇರಿತ ಬಂದ್

Public TV
1 Min Read
CNG PUNEETH

ಚಾಮರಾಜನಗರ: ಸ್ಯಾಂಡಲ್‍ವುಡ್ ಪವರ್ ಸ್ಟಾರ್ ವಿಧಿವಶರಾಗಿರುವ ಹಿನ್ನೆಲೆಯಲ್ಲಿ ಚಾಮರಾಜನಗರದಲ್ಲಿ ಸ್ವಯಂಪ್ರೇರಿತ ಬಂದ್‍ಗೆ ಕರೆ ನೀಡಲಾಗಿದೆ.

ಅಗಲಿದ ನೆಚ್ಚಿನ ನಟನ ಗೌರವಾರ್ಥವಾಗಿ ಅಂಗಡಿ ಮುಂಗಟ್ಟು ಹೊಟೇಲ್, ಸಿನಿಮಾ ಮಂದಿರಗಳನ್ನು ಸ್ವಯಂ ಪ್ರೇರಿತವಾಗಿ ಬಂದ್ ಮಾಡುವಂತೆ ಅಪ್ಪು ಅಭಿಮಾನಿಗಳು ಮನವಿ ಮಾಡಿಕೊಂಡಿದ್ದಾರೆ. ಪುನೀತ್ ಭಾವಚಿತ್ರ ಹಿಡಿದು ಬೈಕ್ ಗಳಲ್ಲಿ ತೆರಳಿ ಈ ಮನವಿ ಮಾಡಿದ್ದಾರೆ.

CNG BANDH 4

ನಗರದ ಪ್ರಮುಖ ವೃತ್ತಗಳಲ್ಲಿ ಪುನೀತ್ ಫ್ಲೆಕ್ಸ್, ಕಟೌಟ್ ಇಟ್ಟು ಶ್ರದ್ಧಾಂಜಲಿ ಸಲ್ಲಿಸಲಾಗುತ್ತಿದೆ. ಒಟ್ಟಿನಲ್ಲಿ ಅಗಲಿದ ನಟನಿಗೆ ತವರು ಜಿಲ್ಲೆಯ ಜನ ಕಂಬನಿ ಮಿಡಿಯುತ್ತಿದ್ದಾರೆ. ಇದನ್ನೂ ಓದಿ: ಆಯಸ್ಸಲ್ಲಿ 10 ವರ್ಷ ಅಪ್ಪುಗೆ ಕೊಟ್ಟು ನನ್ನ ಆ ರೀತಿ ಮಾಡಿದ್ರೆ ಚೆನ್ನಾಗಿರ್ತಿತ್ತು: ಸೋಮಶೇಖರ್ ರೆಡ್ಡಿ ಕಣ್ಣೀರು

CNG BANDH 1

ನಿನ್ನೆ ಮಧ್ಯಾಹ್ನ ವೇಳೆ ನಟ ಪುನೀತ್ ಅವರು ನಗರದ ವಿಕ್ರಂ ಆಸ್ಪತ್ರೆಯಲ್ಲಿ ವಿಧಿವಶರಾಗಿದ್ದಾರೆ. ಬಳಿಕ ಸಂಜೆ 5 ಗಂಟೆ ಸುಮಾರಿನಿಂದ ಅವರ ಮೃತದೇಹವನ್ನು ಅಂತಿಮ ದರ್ಶನಕ್ಕೆ ಇಡಲಾಗಿದೆ. ಮೊದಲು ಸದಾಶಿನಗರದ ಅವರ ನಿವಾಸಕ್ಕೆ ಮೃತದೇಹ ತೆಗೆದುಕೊಂಡು ಹೋಗಲಾಗಿತ್ತು. ಅಲ್ಲಿ ಕುಟುಂಬಸ್ಥರು ಅಂತಿಮ ದರ್ಶನ ಪಡೆದುಕೊಂಡ ಬಳಿಕ ಕಂಠೀರವ ಸ್ಟೇಡಿಯಂನಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ.

CNG BANDH 3

ಮಧ್ಯರಾತ್ರಿಯಿಂದ ಹಿಡಿದು ಇದುವರೆಗೂ ಅಪ್ಪು ಅಭಿಮಾನಿಗಳು ಅಂತಿಮ ದರ್ಶನ ಪಡೆಯುತ್ತಲೇ ಇದ್ದಾರೆ. ಮುಂಜಾನೆಯಾದರೂ ಅಭಿಮಾನಿಗಳ ಸಾಲು ಕರಗಲಿಲ್ಲ. ಸದ್ಯ ಅಮೆರಿಕದಲ್ಲಿರುವ ಮಗಳು ಬಂದ ಬಳಿಕ ಅಂತ್ಯಕ್ರಿಯೆ ನಡೆಯುತ್ತದೆ. ಇದನ್ನೂ ಓದಿ: ಪುನೀತ್ ನಿಧನಕ್ಕೆ ಕಂಬನಿ ಮಿಡಿದ ಭಾರತೀಯ ಸಿನಿತಾರೆಯರು

Share This Article
Leave a Comment

Leave a Reply

Your email address will not be published. Required fields are marked *