ಬೆಂಗಳೂರು: ಶಿವಮೊಗ್ಗದ ಮಾಲ್ ನಲ್ಲಿ ಸಾವರ್ಕರ್ ಭಾವಚಿತ್ರ ವಿವಾದ ಮತ್ತೊಂದು ತಿರುವು ಪಡೆದುಕೊಂಡಿದೆ. ಅದಕ್ಕೆ ಪ್ರತಿಯಾಗಿ ಟಿಪ್ಪು ಭಾವಚಿತ್ರ ವಿರೂಪಗೊಳಿಸಿಲಾಗಿದೆ. ಬೆಂಗಳೂರಲ್ಲಿ ಕಾಂಗ್ರೆಸ್ ಸ್ವಾತಂತ್ರ್ಯ ನಡಿಗೆ ಬ್ಯಾನರ್ ನಲ್ಲಿ ಹಾಕಲಾಗಿದ್ದ ಟಿಪ್ಪು ಫೋಟೋ ಹರಿದು ರಾಷ್ಟ್ರ ರಕ್ಷಣ ಪಡೆಯ ಕಾರ್ಯಕರ್ತರು ವಿಕೃತಿ ಮೆರೆದಿದ್ದಾರೆ.
Advertisement
75ನೇ ವರ್ಷದ ಸ್ವತಂತ್ರ ದಿನಾಚರಣೆಯ ಅಮೃತ ಮಹೋತ್ಸವಕ್ಕೆ ಇನ್ನೇನು ಕೇವಲ ಒಂದು ದಿನವಷ್ಟೆ ಬಾಕಿ ಇದೆ. ರಾಜಧಾನಿ ಬೆಂಗಳೂರಿನ ಮೂಲೆ ಮೂಲೆಯಲ್ಲಿ ರಾಷ್ಟ್ರಧ್ವಜ ರಾರಾಜಿಸ್ತಿದೆ. ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿ ಮಡಿದ ಗಣ್ಯರ ಫ್ಲೆಕ್ಸ್ ಗಳು ಎಲ್ಲೆಲ್ಲೂ ರಾರಾಜಿಸುತ್ತಿದೆ. ಆದರೆ ಇದೇ ಸ್ವಾತಂತ್ರ್ಯ ಅಮೃತ ಮಹೋತ್ಸವ ರಾಜಕೀಯ ತಿರುವನ್ನು ಪಡೆದುಕೊಂಡಿದೆ.
Advertisement
Advertisement
ಈ ವೀಡಿಯೋವನ್ನ ಒಮ್ಮೆ ನೋಡಿ ಟಿಪ್ಪು ಫೋಟೋಯಿರುವ ಬ್ಯಾನರ್ ನನ್ನು ಪುನೀತ್ ಕೆರೆಹಳ್ಳಿ ಅಂಡ್ ಟೀಮ್ ಯಾವ ರೀತಿಯಲ್ಲಿ ಹರಿದು ಹಾಕ್ತಾಯಿದ್ದಾರೆ ಅಂತ. ಹೌದು ಶನಿವಾರ ರಾತ್ರಿ 10:30 ರ ಸುಮಾರಿಗೆ ನಡೆದಿರುವ ಘಟನೆಯಿದು. ರಾಜಧಾನಿ ಬೆಂಗಳೂರಿನಾದ್ಯಂತ ಪ್ರಮುಖ ರಸ್ತೆಗಳಲ್ಲಿ ರಾಷ್ಟ್ರ ಧ್ವಜಗಳು, ಲೈಟಿಂಗ್ಸ್ ಗಳು ರಾರಾಜಿಸುತ್ತಿದೆ. ಹೀಗಿರುವ ಆಗಸ್ಟ್ 15 ರಂದು ಕೈ ಪಡೆ ಸ್ವಾತಂತ್ರ್ಯ ನಡಿಗೆ ಹಮ್ಮಿಕೊಂಡಿದ್ದು ಸ್ವಾತಂತ್ರ್ಯ ಹೋರಾಟಗಾರರು ಸೇರಿದಂತೆ ಕಾಂಗ್ರೆಸ್ ನ ಪ್ರಮುಖ ನಾಯಕರ ಫೋಟೊ ಇರುವ ಫ್ಲೆಕ್ಸ್ ಗಳನ್ನು ರಸ್ತೆಯುದ್ದಕ್ಕೂ ಹಾಕಿದ್ದಾರೆ. ಆದರೆ ಇದು ಪುನೀತ್ ಕೆರೆಹಳ್ಳಿ ಕಣ್ಣು ಕೆಂಪಾಗಿಸಿದೆ.
Advertisement
ಶಿವಮೊಗ್ಗದಲ್ಲಿ ಸಾವರ್ಕರ್ ಭಾವಚಿತ್ರ ಹಾಕಿದ್ದಕ್ಕೆ ಅವಮಾನಿಸಿದ್ದಾರೆಂದು ಹಡ್ಸನ್ ಸರ್ಕಲ್ ಮತ್ತು ಕೆಆರ್ ವೃತ್ತದಲ್ಲಿ ಕಾಂಗ್ರೆಸ್ ಫ್ಲೆಕ್ಸ್ ನಲ್ಲಿದ್ದ ಟಿಪ್ಪು ಫೋಟೊ ಹರಿದು ವಿಕೃತಿ ಮೆರೆದಿದ್ದಾರೆ. ಈ ವಿಚಾರ ಗೊತ್ತಾಗುತ್ತಿದ್ದಂತೆ ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ ಶಿವಕುಮಾರ್ ಮತ್ತು ಸಂಸದ ಡಿ.ಕೆ ಸುರೇಶ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿ ಇಂತಹ ಕಿಡಿಗೇಡಿಗಳ ವಿರುದ್ಧ ಕಾನೂನು ರೀತಿಯ ಕ್ರಮಕೈಗೊಳ್ಳೋದಕ್ಕೆ ಸೂಚನೆ ನೀಡಿದ್ದಾರೆ. ಇದನ್ನೂ ಓದಿ: ಅಂಗಾಂಗ ದಾನಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಸಹಿ
ಗಲಾಟೆ ವಿಚಾರ ತಿಳಿಯುತ್ತಿದ್ದಂತೆ ಕೇಂದ್ರ ವಿಭಾಗದ ಡಿಸಿಪಿ ಶ್ರೀನಿವಾಸ್ ಗೌಡ ಸ್ಥಳಕ್ಕೆ ಭೇಟಿ ನೀಡಿದ್ರು. ಸರ್ಕಲ್ ನಲ್ಲಿದ್ದಂತಹ ಸಿಸಿಟಿವಿ ದೃಶ್ಯ ಮತ್ತು ಮೊಬೈಲ್ ನಲ್ಲಿ ಸೆರೆಯಾಗಿರುವ ವಿಡಿಯೋಗಳ ಮೂಲಕ ಹಲಸೂರು ಗೇಟ್ ಪೊಲೀಸರು ಕಿಡಿಗೇಡಿಗಳ ಹುಡುಕಾಟಕ್ಕೆ ಮುಂದಾಗಿದ್ದಾರೆ. ಒಟ್ಟಿನಲ್ಲಿ ಅಮೃತ ಮಹೋತ್ಸವವನ್ನು ದೇಶಾದ್ಯಂತ ಆಚಕಣೆ ಮಾಡಲು ಮುಂದಾಗುತ್ತಿದ್ದು, ಇಂತಹ ಕಿಡಿಗೇಡಿ ಕೃತ್ಯಗಳಿಂದ ಅದಕ್ಕೆ ದಕ್ಕೆಯಾಗುತ್ತಿರೋದಂತು ಸುಳ್ಳಲ್ಲ.