ಚಿಕ್ಕೋಡಿ(ಬೆಳಗಾವಿ): ರಾಜರತ್ನ ಪುನೀತ್ ರಾಜ್‍ಕುಮಾರ್ ಸಾವನ್ನಪ್ಪಿ 13 ದಿನ ಕಳೆದರೂ ಜನರ ಮನಸ್ಸಿನಿಂದ ಪುನೀತ್ ನೆನಪು ಮಾತ್ರ ಮಾಸುತ್ತಿಲ್ಲ. ಇದಕ್ಕೆ ಸಾಕ್ಷಿ ಎನ್ನುವಂತೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಸಂಕೇಶ್ವರ ಪಟ್ಟಣದಲ್ಲಿ ನಡೆದ ರಾಜ್ಯೋತ್ಸವ ಕಾರ್ಯಕ್ರಮ.
Advertisement
ಪುನೀತ್ ಸಾವಿನ ಹಿನ್ನೆಲೆಯಲ್ಲಿ ನವೆಂಬರ್ 1 ರಂದು ಸರಳವಾಗಿ ರಾಜ್ಯೋತ್ಸವ ಆಚರಣೆ ಮಾಡಿದ್ದ ಕನ್ನಡಾಭಿಮಾನಿಗಳು, ಪುನೀತ್ ಪುಣ್ಯಸ್ಮರಣೆ ಕಾರ್ಯಕ್ರಮಗಳು ಮುಗಿದ ಹಿನ್ನೆಲೆಯಲ್ಲಿ ಇಂದು ಅದ್ದೂರಿಯಾಗಿ ಕನ್ನಡ ರಾಜ್ಯೋತ್ಸವ ಆಚರಣೆ ಮಾಡಿದರು. ಅದ್ದೂರಿ ರಾಜ್ಯೋತ್ಸವದಲ್ಲಿ ಎಲ್ಲೆಡೆ ಪುನೀತ್ ಭಾವಚಿತ್ರಗಳ ಅದ್ದೂರಿ ಮೆರವಣಿಗೆ ನಡೆಸಿ ಅಗಲಿದ ನಾಯಕನಿಗೆ ಶ್ರದ್ಧಾಂಜಲಿ ಸಲ್ಲಿಸಿದರು. ಇದನ್ನೂ ಓದಿ: ನನ್ನ ನಾಲಿಗೆಯನ್ನು ಪವಿತ್ರವಾಗಿ ಇಟ್ಟುಕೊಂಡಿದ್ದೇನೆ: ಈಶ್ವರಪ್ಪ
Advertisement
Advertisement
ಟ್ರ್ಯಾಕ್ಟರ್ ನಲ್ಲಿ ಪುನೀತ್ ಭಾವಚಿತ್ರ ಇಟ್ಟು ಕನ್ನಡಾಭಿಮಾನಿಗಳು ಮೆರವಣಿಗೆ ನಡೆಸಿದರು. ಮಹಾರಾಷ್ಟ್ರದ ಗಡಿಗೆ ಹೊಂದಿಕೊಂಡಿರುವ ಸಂಕೇಶ್ವರ ಪಟ್ಟಣದಲ್ಲಿ ಪ್ರತಿ ಬಾರಿಯೂ ಅದ್ದೂರಿಯಾಗಿ ರಾಜ್ಯೋತ್ಸವ ಆಚರಣೆ ಮಾಡಲಾಗುತ್ತದೆ. ಆದರೆ ಕಳೆದ ಎರಡು ವರ್ಷಗಳಿಂದ ಕೋವಿಡ್ ಕಾರಣ ರಾಜ್ಯೋತ್ಸವ ಆಚರಣೆ ಮಾಡದ ಹಿನ್ನೆಲೆಯಲ್ಲಿ ಈ ಬಾರಿ ಸಾವಿರಾರು ಕನ್ನಡಾಭಿಮಾನಿಗಳು ಭುವನೇಶ್ವರಿ ಭಾವಚಿತ್ರದ ಮೆರವಣಿಗೆ ನಡೆಸಿ ಅದ್ದೂರಿಯಾಗಿ ರಾಜ್ಯೋತ್ಸವ ಆಚರಣೆ ಮಾಡಿದರು.
Advertisement
ಈ ವೇಳೆ ಪುನೀತ್ ಅವರ ಹಾಡುಗಳಿಗೆ ಅಭಿಮಾನಿಗಳು ಕುಣಿದು ಕುಪ್ಪಳಿಸಿದರು. ಅಲ್ಲದೇ ವಿವಿಧ ಮಹಾನಾಯಕರ ವೇಷಭೂಷಣ ತೊಟ್ಟು ಶಾಲಾ ಮಕ್ಕಳು ಮೆರವಣಿಗೆಯಲ್ಲಿ ಭಾಗಿಯಾಗಿದ್ದು, ಜನರ ಗಮನ ಸೆಳೆಯುವಂತೆ ಮಾಡಿತು. ಇದನ್ನೂ ಓದಿ: ಬಿಗ್‌ಬಾಸ್ ಲವ್ ಬರ್ಡ್ಸ್ ಭೇಟಿಯಾದ ಶುಭಾ ಪೂಂಜಾ