ಪುನೀತ್ ರಾಜ್ ಕುಮಾರ್ (Puneeth Rajkumar) ಅವರಿಗೆ ಮರಣೋತ್ತರ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಅಪ್ಪು ಗೆಳೆಯ ಜ್ಯೂನಿಯರ್ ಎನ್.ಟಿ.ಆರ್ ಅತಿಥಿಯಾಗಿ ಆಗಮಿಸಿದ್ದರು. ಈ ಸಂದರ್ಭದಲ್ಲಿ ಅಪ್ಪು (Appu) ಬಗ್ಗೆ ಜ್ಯೂನಿಯರ್ (Jr. NTR) ಮನದಾಳದ ಮಾತುಗಳನ್ನು ಆಡಿದರು. ನಾನೊಬ್ಬ ಸ್ಟಾರ್ ಆಗಿ ಇಲ್ಲಿಗೆ ಬಂದಿಲ್ಲ, ಕೇವಲ ಅಪ್ಪು ಸ್ನೇಹಿತನಾಗಿ ಇಲ್ಲಿದ್ದೇನೆ ಎಂದು ತಿಳಿಸಿದರು. ಅಲ್ಲದೇ, ಬಹುತೇಕ ಕನ್ನಡದಲ್ಲೇ ಅಪ್ಪು ಬಗ್ಗೆ ಮಾತನಾಡಿದರು. ಈ ನಡೆ ಅಪ್ಪು ಅಭಿಮಾನಿಗಳಲ್ಲಿ ಸಂಭ್ರಮ ಹೆಚ್ಚಿಸಿದೆ, ಅಪ್ಪು ಫ್ಯಾನ್ಸ್ ಜ್ಯೂನಿಯರ್ ಮಾತಿಗೆ ಫಿದಾ ಆಗಿದ್ದಾರೆ.
Advertisement
ವ್ಯಕ್ತಿತ್ವ ಎನ್ನುವುದು ವ್ಯಕ್ತಿಯ ಸಂಪಾದನೆ. ವ್ಯಕ್ತಿತ್ವದಿಂದ, ನಗುವಿನಿಂದ, ಅಹಂಕಾರವಿಲ್ಲದೇ ಯಾರಾದರೂ ಈ ರಾಜ್ಯದ ಸಕಲ ಹೃದಯವನ್ನು ಗೆದ್ದಿದ್ದಾರೆ ಅಂದರೆ, ಅದು ಪುನೀತ್ ರಾಜ್ ಕುಮಾರ್ ಎಂದು ಅಪ್ಪುನನ್ನು ಗುಣಗಾನ ಮಾಡಿದರು ಗೆಳೆಯ, ತೆಲುಗಿನ ಖ್ಯಾತ ನಟ ಜ್ಯೂನಿಯರ್ ಎನ್.ಟಿ.ಆರ್. ಕರ್ನಾಟಕ ರಾಜ್ಯೋತ್ಸವದ ಶುಭಾಶಯಗಳನ್ನು ಹೇಳುತ್ತಾ, ಅವರು ಕನ್ನಡದಲ್ಲೇ ಮಾತು ಶುರು ಮಾಡಿದರು. ಇದನ್ನೂ ಓದಿ:ಅಪ್ಪುಗೆ ‘ಕರ್ನಾಟಕ ರತ್ನ’ ಪ್ರದಾನ: ಅತಿಥಿಯಾಗಿ ಬೆಂಗಳೂರಿಗೆ ಬಂದ ಜ್ಯೂನಿಯರ್ ಎನ್.ಟಿ.ಆರ್
Advertisement
Advertisement
ನಿನ್ನೆ ಬೆಂಗಳೂರಿನಲ್ಲಿ ನಡೆದ ಪುನೀತ್ ರಾಜ್ ಕುಮಾರ್ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ (Karnataka Ratna) ಪ್ರದಾನ ಸಮಾರಂಭದ ಅತಿಥಿಯಾಗಿ ಭಾಗಿಯಾಗಿದ್ದ ಜ್ಯೂನಿಯರ್ ಎನ್.ಟಿ.ಆರ್ ‘ಪುನೀತ್ ಒಬ್ಬ ಸೂಪರ್ ಸ್ಟಾರ್, ಗ್ರೇಟ್ ಸ್ಟಾರ್, ಅದ್ಭುತ ಪತಿ, ಹೃದಯ ಶ್ರೀಮಂತ. ಅವರ ನಗುವಿನಲ್ಲಿದ್ದ ಶ್ರೀಮಂತಿಕೆ ನಾವು ಎಲ್ಲಿ ಹುಡುಕೋನ? ಅವರು ನಗುವಿನ ಒಡೆಯರಾಗಿದ್ದರು’ ಎಂದು ಗೆಳೆಯನ ಕುರಿತು ಮಾತನಾಡಿದರು.
Advertisement
ಪುನೀತ್ ರಾಜ್ ಕುಮಾರ್ ಅವರಿಗೆ ಸಿಕ್ಕಿರುವುದು ಕರ್ನಾಟಕ ರತ್ನ, ಆದರೆ, ಯಾರೂ ತಪ್ಪಾಗಿ ಭಾವಿಸಬಾರದು. ನನ್ನ ಪ್ರಕಾರ ಕರ್ನಾಟಕ ರತ್ನದ ಅರ್ಥನೇ ಪುನೀತ್ ರಾಜ್ ಕುಮಾರ್. ನಾನು ಇಲ್ಲಿಗೆ ಬಂದಿದ್ದು, ಹೆಮ್ಮೆಯ ಗೆಳೆಯನಾಗಿ. ಅವನಿಗಾಗಿ ನಾನು ಇಲ್ಲಿ ನಿಂತಿದ್ದೇನೆ. ಈ ಗೆಳೆತನ ಯಾವಾಗಲೂ ನನ್ನ ಹೃದಯದಲ್ಲಿ ಇರುತ್ತದೆ ಎಂದು ಮಾತು ಮುಗಿಸಿದರು ಜ್ಯೂನಿಯರ್ ಎನ್.ಟಿ.ಆರ್.
ಕರ್ನಾಟಕ ರತ್ನ ಪ್ರಶಸ್ತಿ ಪ್ರಾರಂಭವಾದಾಗ ಮೊದಲ ಪ್ರಶಸ್ತಿಯನ್ನು ರಾಷ್ಟ್ರಕವಿ ಕುವೆಂಪು ಮತ್ತು ಡಾ.ರಾಜ್ ಕುಮಾರ್ ಅವರಿಗೆ ದೊರೆತಿತ್ತು. ಮೂವತ್ತು ವರ್ಷಗಳ ನಂತರ ಮತ್ತೆ ಸಿನಿಮಾ ರಂಗಕ್ಕೆ ಅದರಲ್ಲೂ ಡಾ.ರಾಜ್ ಕುಟುಂಬಕ್ಕೆ ಈ ಗೌರವ ದೊರೆತಿದೆ. ಹಾಗಾಗಿಯೇ ಡಾ.ರಾಜ್ ಕುಟುಂಬದ ಅನೇಕ ಸದಸ್ಯರು ಈ ಸಮಾರಂಭದಲ್ಲಿ ಹಾಜರಿದ್ದರು. ಡಾ.ರಾಜ್ ಕುಮಾರ್ ಅವರ ಅಷ್ಟೂ ಮಕ್ಕಳು ಈ ಕಾರ್ಯಕ್ರಮಕ್ಕೆ ಸಾಕ್ಷಿಯಾಗಿದ್ದು ವಿಶೇಷ.