ಹಾಸನ: ಪುನೀತ್ ರಾಜ್ ಕುಮಾರ್ ಅವರ ಸಾವಿನಿಂದ ಬೇಸತ್ತು, ರಾಜಕಾರಣಿಗಳಿಗೆ ಶಾಪ ಹಾಕಿದ ಪತ್ರವೊಂದು ಹಾಸನಾಂಬೆ ದೇವಸ್ಥಾನದ ಹುಂಡಿಯಲ್ಲಿ ಪತ್ತೆಯಾಗಿದೆ.
ಭಕ್ತನೊಬ್ಬ ಪುನೀತ್ ಅವರ ಸಾವಿನಿಂದ ಮರುಗಿದ್ದು, ಅವರ ಸಾವಿನ ಬದಲು ಜನತೆಗೆ ಮೋಸ ಮಾಡುತ್ತಿರುವ ರಾಜಕಾರಣಿಗಳಿಗೆ ಸಾವು ಬರಬೇಕಿತ್ತು ಎಂಬುದಾಗಿ ತನ್ನ ನೋವನ್ನು ಪತ್ರದಲ್ಲಿ ಬರೆದು, ಅದನ್ನು ಹಾಸನಾಂಬೆ ದೇವಸ್ಥಾನದ ಹುಂಡಿಯಲ್ಲಿ ಹಾಕಿದ್ದಾನೆ. ಇದನ್ನೂ ಓದಿ: ಪದ್ಮಶ್ರೀ ಅಲ್ಲ, ಪುನೀತ್ ಅಮರಶ್ರೀ: ಶಿವರಾಜ್‍ಕುಮಾರ್
ಪತ್ರದಲ್ಲಿ ಏನಿದೆ?
ಅಮ್ಮ ಆ ಧರ್ಮಾತ್ಮ ಪುನೀತ್ ರಾಜ್‍ಕುಮಾರ್ ಸಾಯುವುದರ ಬದಲು, ಈ ರಾಜಕೀಯದಲ್ಲಿ ನಾಟಕವಾಡಿ ಅವರು ತಿಂದು, ಅವರ ಮರಿಮೊಮ್ಮಕ್ಕಳು ತಿಂದು ತೇಗಿದರು ಕರಗದ ಆಸ್ತಿ ಮಾಡಿದ್ದಾರಲ್ಲ ಅವರು ಸಾಯಬೇಕಿತ್ತು. ಸಭೆಗಳಲ್ಲಿ ನಾಟಕವಾಡುತ್ತಾರಲ್ಲಾ ಅಂಥಾ ಬೇ.. ರಾಜಕಾರಣಿಗಳನ್ನು ಸಾಯಿಸು. ಆಗ ನಮ್ಮ ಕರ್ನಾಟಕ ರಾಜ್ಯ ಮುಂದುವರಿಯುತ್ತದೆ. ಇದನ್ನೂ ಓದಿ: ಹೊಸ ಸಿನಿಮಾ ಅನೌನ್ಸ್ ಮಾಡಿದ ಬಾಹುಬಲಿ ಬೆಡಗಿ ಅನುಷ್ಕಾ ಶೆಟ್ಟಿ
ಬಡವರು ಕರ್ನಾಟಕದಲ್ಲಿ ಸುಖವಾಗಿರುತ್ತಾರೆ. ನಿನ್ನೆ, ಮೊನ್ನೆ ಬಂದ ಈ ಕೆಲ ರಾಜಕಾರಣಿಗಳು ಕೋಟಿ ಕೋಟಿ ಆಸ್ತಿ ಮಾಡಿಕೊಂಡು ಬೀಗುತ್ತಾರಲ್ಲ ಅವರಿಗೆ ಕರ್ಮದ ಸಾವು ಬರಲಿ. ಪಾಪ ಪುನೀತ್ ಇದ್ದಿದ್ದರೆ ನಾಲ್ಕು ಜನ ನೆಮ್ಮದಿಯಿಂದ ಇರುತ್ತಿದ್ದರು ತಾಯಿ. ಎಂದು ಭಕ್ತ ಪತ್ರದಲ್ಲಿ ಬರೆದಿದ್ದಾನೆ.