ಕೊಪ್ಪಳ: ಪೌರಾಣಿಕ ಪ್ರಸಿದ್ಧಿಯಾದ ಅಂಜನಾದ್ರಿ ಬೆಟ್ಟದ ಬರೋಬ್ಬರಿ 575 ಮೆಟ್ಟಿಲುಗಳನ್ನು ನಟ ಪುನೀತ್ ರಾಜ್‍ಕುಮಾರ್ ಕೇವಲ 6.5 ನಿಮಿಷದಲ್ಲಿ ಏರಿದ್ದರು.
Advertisement
ಪಿಎಸ್‍ಐ ದೊಡ್ಡಪ್ಪ, ಆ ಸಂದರ್ಭವನ್ನು ನೆನೆದು ಭಾವುಕರಾಗಿದ್ದು, ಪುನೀತ್ ಅವರ ಕ್ರಿಯಾಶೀಲತೆ ಕಂಡು ಭದ್ರತೆ ನೀಡಿದ್ದ ಅವರು ಅಚ್ಚರಿ ವ್ಯಕ್ತಪಡಿಸಿದ್ದರಂತೆ. ಇನ್ನು ಈ ವೇಳೆ ಪುನೀತ್ ಅವರು ಪೊಲೀಸರೊಂದಿಗೆ ಸಾಕಷ್ಟು ವಿಷಯ ಮಾತನಾಡುತ್ತಲೇ ಅಂಜನಾದ್ರಿ ಪರ್ವತ ಇಳಿದಿದ್ದರು ಎಂದು ನೆನಪಿಸಿಕೊಂಡಿದ್ದಾರೆ. ಇದನ್ನೂ ಓದಿ: ಕೊರೊನಾ ಜಾಗೃತಿ ಅಭಿಯಾನಕ್ಕೆ ಕೇಳಿದ ತಕ್ಷಣ ಹಿಂದೆ ಮುಂದೆ ನೋಡದೆ ಬಂದಿದ್ದ ಅಪ್ಪು
Advertisement
Advertisement
ಕಳೆದ 2020ರ ಅಕ್ಟೋಬರ್ ನಲ್ಲಿ ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನ ಪೌರಾಣಿಕ ಪ್ರಸಿದ್ಧ ಅಂಜನಾದ್ರಿ ಬೆಟ್ಟದ ಸುತ್ತಮುತ್ತಲಿನ ಪ್ರದೇಶದಲ್ಲಿ ‘ಜೇಮ್ಸ್’ ಚಿತ್ರತಂಡ ಚಿತ್ರೀಕರಣ ನಡೆದಿತ್ತು. ಈ ವೇಳೆ ಪುನೀತ್ ಅವರು ಬೆಟ್ಟ ಹತ್ತಿದ್ದು, ಪೊಲೀಸರ ಜೊತೆ ತಿರುಪತಿ ಬೆಟ್ಟ ಏರಲು ಟೈಮ್ ಎಷ್ಟು ಬೇಕು? ಚಾಮುಂಡಿ ಬೆಟ್ಟ ಏರೋದಕ್ಕೆ ತಾವು ಎಷ್ಟು ಟೈಮ್ ತಗೋತಿನಿ ಎನ್ನುವ ಬಗ್ಗೆ ಅವರೇ ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ಆರ್ಯನ್ ಖಾನ್ ಕಿಡ್ನಾಪ್ ಮಾಡಲಾಗಿತ್ತು: ನವಾಬ್ ಮಲಿಕ್
Advertisement
ಚಿತ್ರೀಕರಣದ ಕೊನೆ ದಿನ 46 ವರ್ಷದ ಪುನೀತ್ ಬೆಟ್ಟ ಏರಿದ್ದು, ಒಂದು ಕ್ಷಣವೂ ವಿಶ್ರಮಿಸದೆ ಬೆಟ್ಟ ಏರಿದ್ದನ್ನು ಕಂಡು ಭದ್ರತೆಗೆ ನಿಯೋಜನೆಗೊಂಡಿದ್ದ ದೊಡ್ಡಪ್ಪ ಬೆರಗಾಗಿದ್ದೆ ಎಂದು ಹೇಳಿಕೊಂಡಿದ್ದಾರೆ. ಈ ವೇಳೆ ಪುನೀತ್ ಅಂಜನಾದ್ರಿ ಬೆಟ್ಟದಲ್ಲಿ ಹೆಚ್ಚು ಚಿತ್ರೀಕರಣ ಮಾಡುವ ಇಂಗಿತ ವ್ಯಕ್ತಪಡಿಸಿ, ಬೆಟ್ಟದಲ್ಲಿನ ಕೋತಿಗಳಿಗೆ ಬಾಳೆಹಣ್ಣು ಕೊಟ್ಟು, ಜನ ಸಾಮಾನ್ಯರ ಜೊತೆ ಆತ್ಮೀಯವಾಗಿ ಬೆರೆತ ಅಪ್ಪು ಸರಳತೆಯನ್ನು ದೊಡ್ಡಪ್ಪ ನೆನಪು ಮಾಡಿಕೊಂಡಿದ್ದಾರೆ.