ಕರ್ನಾಟಕ ರತ್ನ ಪುನೀತ್ ರಾಜಕುಮಾರ್ (Puneeth Rajkumar) ಹೆಸರನ್ನು ಬೆಂಗಳೂರಿನ ರಿಂಗ್ ರಸ್ತೆಗೆ (Ring Road) ಇಡಲಾಗುತ್ತಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ (R. Ashok) ತಿಳಿಸಿದರು. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಪುನೀತ್ ಅವರಿಗೆ ಈಗಾಗಲೇ ಸರಕಾರದಿಂದ ಕರ್ನಾಟಕ ರತ್ನ ಪ್ರಶಸ್ತಿಯನ್ನು ನೀಡಲಾಗಿದೆ. ಅವರ ಸಾಮಾಜಿಕ ಕೆಲಸಗಳನ್ನು ಗುರುತಿಸಿ ಹೆಚ್ಚೆಚ್ಚು ಗೌರವವನ್ನು ನೀಡಲಾಗುತ್ತಿದೆ. ಈ ಸಲ ಬೆಂಗಳೂರಿನ ರಿಂಗ್ ರಸ್ತೆಗೆ ಅವರ ಹೆಸರನ್ನು ಇಡಲು ತೀರ್ಮಾನಿಸಲಾಗಿದೆ’ ಎಂದರು.
Advertisement
ಬೆಂಗಳೂರಿನ ಮೈಸೂರು ರಸ್ತೆಯಿಂದ ನಾಯಂಡಳ್ಳಿ ಜಂಕ್ಷನ್ ಬನ್ನೇರುಘಟ್ಟ ರಸ್ತೆವರೆಗೂ ಪುನೀತ್ ರಾಜ್ ಕುಮಾರ್ ರಸ್ತೆ ಅಂತ ನಾಮಕರಣ ಮಾಡುತ್ತಿದ್ದು, 12 ಕಿಲೋ ಮೀಟರ್ ರಸ್ತೆಯ ಡಬಲ್ ರೋಡ್ ಅದಾಗಿದೆ. ಅಷ್ಟು ಉದ್ದದ ರಸ್ತೆಗೆ ಈವರೆಗೂ ಯಾರ ಹೆಸರನ್ನೂ ಇಟ್ಟಿಲ್ಲ ಎನ್ನುವುದು ವಿಶೇಷ. ನಾಳೆ ಬೆಂಗಳೂರಿನ ಪದ್ಮನಾಭನಗರದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಸಂಜೆ 6 ಗಂಟೆಗೆ ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೆಸರಿನ ನಾಮಫಲಕ ಉದ್ಘಾಟನೆ ಮಾಡಲಿದ್ದಾರೆ. ಇದನ್ನೂ ಓದಿ: `ಅವತಾರ್ ಲುಕ್‌ನಲ್ಲಿ ಮಿಂಚಿದ ನಿವೇದಿತಾ ಗೌಡ
Advertisement
Advertisement
ಈ ಕಾರ್ಯಕ್ರಮದಲ್ಲಿ ಪುನೀತ್ ಪತ್ನಿ ಅಶ್ವಿನಿ ಪುನೀತ್ ರಾಜ್ ಕುಮಾರ್ (Ashwini Puneeth Rajkumar) , ಶಿವರಾಜ್ ಕುಮಾರ್ (Shivraj Kumar)), ರಾಘವೇಂದ್ರ ರಾಜ್ ಕುಮಾರ್ ಸೇರಿದಂತೆ ಡಾ.ರಾಜ್ ಕುಟುಂಬ ಭಾಗಿಯಾಗಲಿದೆ. ಅಲ್ಲದೇ, ಸಿನಿಮಾ ರಂಗದ ಅನೇಕ ಗಣ್ಯರು ಉಪಸ್ಥಿತಿ ಇರಲಿದ್ದಾರೆ. ಉದ್ಘಾಟನೆಯ ನಂತರ ನಟಿ ರೂಪಿಕಾ ನೃತ್ಯ ಪ್ರದರ್ಶನ ಹಾಗೂ ಗುರು ಕಿರಣ್, ಸಾಧು ಕೋಕಿಲ, ರಘು ದೀಕ್ಷಿತ್ ಮತ್ತು ಶಮಿತಾ ಮಲ್ನಾಡ್ ಸೇರಿದಂತೆ ಅನೇಕ ಗಾಯಕ ಗಾಯಕಿಯರಿಂದ ಸಂಗೀತ ಕಾರ್ಯಕ್ರಮವಿದೆ.
Advertisement
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k