ಪುಣೆ: ಪೊಲೀಸ್ ಠಾಣೆಗೆ ಕೇವಲ 100 ದೂರದಲ್ಲಿದ್ದ ಬಸ್ ನಿಲ್ದಾಣದಲ್ಲಿ ಬಸ್‌ನೊಳಗೆ ಯುವತಿ ಮೇಲೆ ಅತ್ಯಾಚಾರ ಎಸಗಿರುವ ಘಟನೆ ನಡೆದಿದೆ.
ಬೆಳಗಿನ ಜಾವ ಪುಣೆಯ ಜನನಿಬಿಡ ಸ್ವರ್ಗೇಟ್ ಬಸ್ ನಿಲ್ದಾಣದಲ್ಲಿ 26 ವರ್ಷದ ಯುವತಿ ಮೇಲೆ ಅತ್ಯಾಚಾರ ನಡೆದಿದೆ. ಆರೋಪಿಯನ್ನು ದತ್ತಾತ್ರೇಯ ರಾಮದಾಸ್ ಎಂದು ಗುರುತಿಸಲಾಗಿದ್ದು, ಇನ್ನೂ ಬಂಧನ ಆಗಿಲ್ಲ. ಸಿಸಿಟಿವಿ ಫುಟೇಜ್ ಮೂಲಕ ಆತನನ್ನು ಗುರುತಿಸಲಾಗಿದೆ.
ಆರೋಪಿ ಪತ್ತೆಹಚ್ಚಲು ಪೊಲೀಸರು ಎಂಟು ವಿಶೇಷ ತಂಡಗಳನ್ನು ರಚಿಸಿದ್ದಾರೆ. ಶ್ವಾನ ಸ್ನಿಫರ್ ಘಟಕವನ್ನು ನಿಯೋಜಿಸಿದ್ದಾರೆ. 36 ವರ್ಷದ ರಾಮದಾಸ್ ಕ್ರಿಮಿನಲ್ ಹಿನ್ನೆಲೆ ಹೊಂದಿರುವ ಆರೋಪಿ.
ಸತಾರಾ ಜಿಲ್ಲೆಯ ಫಾಲ್ಟನ್ ಗ್ರಾಮಕ್ಕೆ ಪ್ರಯಾಣಿಸುತ್ತಿದ್ದ ಮನೆಕೆಲಸದ ಯುವತಿಯ ಮೇಲೆ ಅತ್ಯಾಚಾರ ನಡೆಸಿ ಬಳಿ ಬಸ್ ಅನ್ನು ದುಷ್ಕರ್ಮಿಗಳು ಧ್ವಂಸಗೊಳಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಪೈಥಾನ್‌ಗೆ ತೆರಳು ಮುಂಜಾನೆ ಪ್ಲಾಟ್‌ಫಾರ್ಮ್‌ನಲ್ಲಿ ಕಾಯುತ್ತಿದ್ದೆ. ಆರೋಪಿಯು ನನ್ನ ಹತ್ತಿರ ಬಂದು ‘ಪೈಥಾನ್‌ಗೆ ಹೋಗುವ ಬಸ್ ಬಂದಿದೆ’ ಅಂತ ಹೇಳಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದ. ಆಗ ಇನ್ನೂ ಬೆಳಕಾಗಿರಲಿಲ್ಲ. ಅಲ್ಲಿ ನಿಂತಿದ್ದ ಬಸ್‌ಗೆ ನನ್ನನ್ನು ಹತ್ತಿಸಿ ಅವನೂ ಹತ್ತಿದ. ನಂತರ ನನ್ನ ಮೇಲೆ ಅತ್ಯಾಚಾರ ಎಸಗಿ ಪರಾರಿಯಾದ ಎಂದು ಮಹಿಳೆ ಪೊಲೀಸರಿಗೆ ದೂರು ನೀಡಿದ್ದಾರೆ.