ತನ್ನ ಲವರ್ ಜೊತೆ ಮಗಳಿಗೆ ಮದುವೆ ಮಾಡಿಸಿದ ತಾಯಿ – ಲೈಂಗಿಕ ಕ್ರಿಯೆ ನಡೆಸುವಂತೆ ಒತ್ತಾಯ

Public TV
1 Min Read
MARRIAGE 1

ಮುಂಬೈ: ಹೆತ್ತ ತಾಯಿಯೇ ತನ್ನ ಅಪ್ರಾಪ್ತ ಮಗಳನ್ನು ಆಕೆಯ ಪ್ರಿಯಕರನೊಂದಿಗೆ ಬಲವಂತವಾಗಿ ಮದುವೆ ಮಾಡಿಸಿ, ಲೈಂಗಿಕ ಸಂಬಂಧ ಹೊಂದುವಂತೆ ಒತ್ತಾಯಿಸಿರುವ ಘಟನೆ ಮಹಾರಾಷ್ಟ್ರದ ಪುಣೆಯಲ್ಲಿ ನಡೆದಿದೆ.

crim 1

ಇದೀಗ 36 ವರ್ಷದ ಮಹಿಳೆ ಮತ್ತು ಆಕೆಯ 28 ವರ್ಷದ ಪ್ರಿಯಕರನನ್ನು ಬಂಧಿಸಲಾಗಿದ್ದು, ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆ ಮತ್ತು ಬಾಲ್ಯ ವಿವಾಹ ನಿಷೇಧ ಕಾಯ್ದೆಯಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇದನ್ನೂ ಓದಿ: ಮಕ್ಕಳನ್ನು ಕರೆದೊಯ್ಯುತ್ತಿದ್ದಾಗ ಆಟೋ ಪಲ್ಟಿ – ಜನರಿಂದ ತಪ್ಪಿಸಿಕೊಳ್ಳಲು ವಿದ್ಯುತ್ ಕಂಬ ಏರಿದ

LOVERS 1

ಬಾಲಕಿ ತನ್ನ ನೋವನ್ನು ಸಹಪಾಠಿಯೊಬ್ಬರಿಗೆ ತಿಳಿಸಿದಾಗ ಈ ಬಗ್ಗೆ ಮಹಿಳಾ ಸಾಮಾಜಿಕ ಕಾರ್ಯಕರ್ತೆಯೊಬ್ಬರಿಗೆ ಮಾಹಿತಿ ನೀಡಲಾಯಿತು ನಂತರ ಘಟನೆ ಬೆಳಕಿಗೆ ಬಂದಿದೆ. ಪ್ರಿಯಕರ ಮಹಿಳೆಯ ದೂರದ ಸಂಬಂಧಿಯಾಗಿದ್ದು, ಆಕೆಯೊಂದಿಗೆ ವಾಸವಾಗಿದ್ದನು. ಇದನ್ನೂ ಓದಿ: ಇಂದಿನಿಂದ 2 ದಿನ `ಪಬ್ಲಿಕ್ ಎಜುಕೇಷನ್ ಎಕ್ಸ್‌ಪೋ’- ಸ್ನಾತಕೋತ್ತರ ಪದವಿ ಶೈಕ್ಷಣಿಕ ಮೇಳಕ್ಕೆ ಬನ್ನಿ, ಭಾಗವಹಿಸಿ

ಒಂದು ವೇಳೆ ಮದುವೆ ಒಪ್ಪದಿದ್ದರೆ, ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬಾಲಕಿಗೆ ಮಹಿಳೆ ಹೆದರಿಸಿದ್ದಳು. ಹೀಗಾಗಿ ನವೆಂಬರ್ 6 ರಂದು ಅಹ್ಮದ್‍ನಗರದ ದೇವಸ್ಥಾನದಲ್ಲಿ ತನ್ನ ಪ್ರಿಯಕರನೊಂದಿಗೆ ಮಹಿಳೆ ಮಗಳಿಗೆ ಮದುವೆ ಮಾಡಿದ್ದಾಳೆ ಮತ್ತು ವ್ಯಕ್ತಿಯೊಂದಿಗೆ ಬಲವಂತವಾಗಿ ಲೈಂಗಿಕ ಸಂಬಂಧ ಬೆಳೆಸುವಂತೆ ಒತ್ತಾಯಿಸಿದ್ದಾರೆ. ಈ ಸಂಬಂಧ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಚಂದನನಗರ ಪೊಲೀಸ್ ಠಾಣೆಯ ಅಧಿಕಾರಿಗಳು ತಿಳಿಸಿದ್ದಾರೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *