– ದಿಢೀರ್ ಪುಣೆಗೆ ಆಗಮಿಸಿದ ಪೊಲೀಸರ ಜೊತೆ ಫಡ್ನಾವೀಸ್ ಸಭೆ
– ಬೆಂಗಳೂರು ಶೋರೂಂನಿಂದ ಪೋರ್ಶೆ ಖರೀದಿ
ಪುಣೆ: ಮದ್ಯದ ಅಮಲಿನಲ್ಲಿ ಐಶಾರಾಮಿ ಪೋರ್ಶೆ ಕಾರು (Pune Porsche Accident) ಚಲಾಯಿಸಿ ಇಬ್ಬರ ಸಾವಿಗೆ ಕಾರಣನಾದ ಆಪ್ರಾಪ್ತನಿಗೆ ಜಾಮೀನು (Bail) ನೀಡಿದ ವಿಚಾರ ಇಡೀ ದೇಶದಲ್ಲೇ ಭಾರೀ ಚರ್ಚೆ ಆಗುತ್ತಿದೆ. ಇದೇ ಹೊತ್ತಲ್ಲಿ, ಪ್ರಭಾವಿ ಬಿಲ್ಡರ್ ಪುತ್ರನಿಗೆ ಪೊಲೀಸರು ಠಾಣೆಯಲ್ಲಿ (Police Station) ರಾಜ ಮರ್ಯಾದೆ ನೀಡಿದ್ದಾರೆ. ಪಿಜ್ಜಾ, ಬರ್ಗರ್, ಬಿರಿಯಾನಿ ತಿನ್ನಿಸಿ ವಿವಿಐಪಿ ಅತಿಥ್ಯ ನೀಡಿದ ವಿಚಾರ ಬೆಳಕಿಗೆ ಬಂದಿದೆ.
Advertisement
ಈ ವಿಚಾರ ತಿಳಿದ ಕೂಡಲೇ ಕಾಂಗ್ರೆಸ್ ಕಾರ್ಯಕರ್ತರು ಠಾಣೆ ಮುಂದೆ ಜಮಾಯಿಸಿ ಪ್ರತಿಭಟನೆ ನಡೆಸಿದರು. ಸಾಕಷ್ಟು ಟೀಕೆ, ಆಕ್ರೋಶದ ನಂತರ ಎಚ್ಚೆತ್ತ ಪೊಲೀಸರು, 17 ವರ್ಷದ ಯುವಕನ ತಂದೆ, ಬಿಲ್ಡರ್ ವಿಶಾಲ್ ಅಗರ್ವಾಲ್ ನನ್ನು ಬಂಧಿಸಿದ್ದಾರೆ. ಇದನ್ನೂ ಓದಿ: ಹುಚ್ಚಾಟಕ್ಕೆ ಇಬ್ಬರು ಟೆಕ್ಕಿಗಳು ಬಲಿ – ಅಪ್ರಾಪ್ತನಿಗೆ ಅಪಘಾತದ ಬಗ್ಗೆ ಪ್ರಬಂಧ ಬರೆಯುವ ಶಿಕ್ಷೆ
Advertisement
Advertisement
ಉದ್ದೇಶಪೂರ್ವಕವಾಗಿ ನಿರ್ಲಕ್ಷ್ಯ ಮಾಡಿರುವುದು, ಮಾದಕವಸ್ತುಗಳನ್ನು ಸಿಗುವಂತೆ ಮಾಡಿದ ಆರೋಪದಡಿ ಅಪ್ರಾಪ್ತನ ತಂದೆಯನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಅಷ್ಟೇ ಅಲ್ಲದೇ, ಅಪ್ರಾಪ್ತನಿಗೆ ಮದ್ಯ ಪೂರೈಸಿದ ಆರೋಪದ ಮೇರೆಗೆ ಕೋಸಿ ರೆಸ್ಟೋರೆಂಟ್ ಮಾಲಿಕ ಸಚಿನ್ ಕಾಟ್ಕರ್, ಹೋಟೆಲ್ ಬ್ಲಾಕ್ ಮ್ಯಾನೇಜರ್ ಸಂದೀಪ್ ಸಾಂಗ್ಳೆ ಸೇರಿ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.
Advertisement
ಬೆಂಗಳೂರಿನ (Bengaluru) ಪೋರ್ಶೆ ಶೋರೂಂನಲ್ಲೇ ಈ ಕಾರು ಖರೀದಿ ಮಾಡಿದ್ದು, ನಂಬರ್ ಪ್ಲೇಟ್ ಇಲ್ಲದೆ 1,600 ಕಿಲೋಮೀಟರ್ ಸಂಚಾರ ಮಾಡಿರುವುದು ಪೊಲೀಸ್ ತನಿಖೆಯಲ್ಲಿ ಬಹಿರಂಗಗೊಂಡಿದೆ. ಈ ಮಧ್ಯೆ, ಅಪಘಾತ ಎಸಗಿದ ಅಪ್ರಾಪ್ತ ಬಾರ್‌ನಲ್ಲಿ ಮದ್ಯ ಸೇವಿಸುವ, ಮಾರ್ಗಮಧ್ಯೆ ಇಬ್ಬರು ಟೆಕ್ಕಿಗಳಿಗೆ ಕಾರನ್ನು ಡಿಕ್ಕಿ ಹೊಡೆಸುವ ದೃಶ್ಯಾವಳಿಗಳು ವೈರಲ್ ಆಗಿವೆ.
200 ಕಿಲೋಮೀಟರ್ ವೇಗದಲ್ಲಿ ಪೋರ್ಶೆ ಕಾರನ್ನು ಓಡಿಸಿದ್ದ ಅಪ್ರಾಪ್ತ, ನಿಯಂತ್ರಣ ಕಳೆದುಕೊಂಡು ಬೈಕ್‌ಗೆ ಡಿಕ್ಕಿ ಹೊಡೆದಿದ್ದ.ಬೈಕ್‌ನಲ್ಲಿ ತೆರಳ್ತಿದ್ದ ಟೆಕ್ಕಿಗಳಾದ ಅನಿಶ್ ಮತ್ತು ಅಶ್ವಿನಿ ಮೃತಪಟ್ಟಿದ್ರು. ಮೃತರ ಕುಟುಂಬಸ್ಥರು ಕೂಡ, ಅಪ್ರಾಪ್ತನ ಜಾಮೀನು ರದ್ದು ಮಾಡಿ ಕಠಿಣ ಶಿಕ್ಷೆ ನೀಡುವಂತೆ ಒತ್ತಾಯಿಸಿದ್ದಾರೆ.
ಫಡ್ನಾವೀಸ್ ಸಭೆ:
ಪುಣೆ ಅಪಘಾತ ಪ್ರಕರಣವನ್ನು ಮಹಾರಾಷ್ಟ್ರ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ನಿನ್ನೆ ಪುಣೆ ಪೊಲೀಸ್ ಆಯುಕ್ತರಿಗೆ ಫೋನ್ ಮಾಡಿದ್ದ ಗೃಹ ಸಚಿವರು ಆಗಿರುವ ಡಿಸಿಎಂ ದೇವೇಂದ್ರ ಫಡ್ನಾವೀಸ್ (Devendra Fadnavis) ಇಂದು ದಿಢೀರ್ ಎಂದು ಪುಣೆಯ ಪೊಲೀಸ್ ಮುಖ್ಯಕಚೇರಿಗೆ ಧಾವಿಸಿ ಪೊಲೀಸ್ ಆಯುಕ್ತ ಅಮಿತೇಶ್ ಕುಮಾರ್ ಸೇರಿ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ತರಾಟೆಗೆ ತೆಗೆದುಕೊಂಡರು.
पुण्यातील कार अपघाताचे प्रकरण अत्यंत दुर्दैवी आहे. हे प्रकरण पुणे पोलीसांनी अत्यंत गांभीर्याने घेत, दोषींवर भारतीय दंड संहिता कलम 304 अन्वये गुन्हा दाखल केला आहे आणि…@PuneCityPolice @CPPuneCity #Pune #Maharashtra #PunePolice pic.twitter.com/Osioo42EVf
— Devendra Fadnavis (Modi Ka Parivar) (@Dev_Fadnavis) May 21, 2024
ಇಬ್ಬರ ಸಾವಿಗೆ ಕಾರಣನಾದ ಅಪ್ರಾಪ್ತನ ವಿಚಾರದಲ್ಲಿ ಮೃದು ಧೊರಣೆ ತಾಳದೇ, ಕಠಿಣ ಕ್ರಮಗಳನ್ನು ಜರುಗಿಸುವಂತೆ ಸೂಚನೆ ನೀಡಿದರು. 17 ವರ್ಷ ತುಂಬಿರುವ ಅಪ್ರಾಪ್ತನನ್ನು ವಯಸ್ಕ ಎಂದು ಪರಿಗಣಿಸಲು ಬಾಲನ್ಯಾಯಮಂಡಳಿ ಮೊರೆ ಹೋಗಲು ಪುಣೆ ಪೊಲೀಸರಿಗೆ ಸೂಚಿಸಿದರು.
ಈ ಮಧ್ಯೆ ಅಪ್ರಾಪ್ತನಿಗೆ ಕೋರ್ಟ್ ನೀಡಿದ್ದ ಜಾಮೀನನ್ನು ಪ್ರಶ್ನಿಸಿ ಪುಣೆ ಪೊಲಿಸರು ಸೆಷನ್ಸ್ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದಾರೆ.